‘ಗರೀಬ್ ರಥ’ ಇನ್ನು ಕೇವಲ ನೆನಪು ಮಾತ್ರ?
ಮಿತದರದ ರೈಲು ಸೇವೆಯನ್ನೇ ರದ್ದುಗೊಳಿಸಲು ಕೇಂದ್ರದ ಚಿಂತನೆ
Team Udayavani, Jul 18, 2019, 5:01 PM IST
ನವದೆಹಲಿ: ಮಧ್ಯಮ ಮತ್ತು ಕಡಿಮೆ ಆದಾಯದ ರೈಲ್ವೇ ಪ್ರಯಾಣಿಕರನ್ನು ಗಮನದಲ್ಲಿರಿಸಿಕೊಂಡು ಅಂದಿನ ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ಅವರು ಪ್ರಾರಂಭಿಸಿದ್ದ ‘ಗರೀಬ್ ರಥ’ ರೈಲು ಇನ್ನು ಇತಿಹಾಸದ ಭಾಗವಾಗಲಿದೆಯೇ? ಹೌದೆನ್ನುತ್ತಿದೆ ಈ ವಲಯದಲ್ಲಿ ನಡೆಯುತ್ತಿರುವ ಇತ್ತೀಚಿಗನ ಬೆಳವಣಿಗೆಗಳು. ಕೆಂದ್ರ ಸರಕಾರವು ಗರೀಬ್ ರಥ ರೈಲು ಸೇವೆಯನ್ನು ನಿಧಾನವಾಗಿ ಸ್ಥಗಿತಗೊಳಿಸುವ ಚಿಂತನೆಯಲ್ಲಿದೆ ಎಂದು ತಿಳಿದುಬಂದಿದೆ.
ಇದಕ್ಕೆ ಪೂರಕವಾಗಿ ರೈಲ್ವೇ ಸಚಿವಾಲಯವು ಗರೀಬ್ ರಥ ಎಕ್ಸ್ ಪ್ರೆಸ್ ರೈಲಿನ ಹೊಸ ಬೋಗಿಗಳ ನಿರ್ಮಾಣವನ್ನು ಸ್ಥಗಿತಗೊಳಿಸುವಂತೆ ಈಗಾಗಲೇ ಆದೇಶಿಸಿದೆ ಎಂಬ ಅಂಶವೂ ಇದೀಗ ಬಹಿರಂಗಗೊಂಡಿದೆ. ಇದರ ಅರ್ಥ ಒಂದೋ ಗರೀಬ್ ರಥ ರೈಲು ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು ಇಲ್ಲವೇ ಇವುಗಳನ್ನು ಮೇಲ್ ಅಥವಾ ಎಕ್ಸ್ ಪ್ರೆಸ್ ರೈಲುಗಳನ್ನಾಗಿ ಪರಿವರ್ತಿಸಲಾಗುವುದಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇತ್ತ ಭಾರತೀಯ ರೈಲ್ವೇಯು ಈಗಾಗಲೇ ಕಾಥ್ಗೊಡಂ – ಜಮ್ಮು ಮತ್ತು ಕಾಥ್ಗೊಡಂ – ಕಾನ್ಪುರ ಮಾರ್ಗಗಳಲ್ಲಿ ಸಂಚರಿಸುತ್ತಿದ್ದ ಗರೀಬ್ ರಥ ರೈಲು ಸೇವೆಗಳನ್ನು ಮೇಲ್ ಅಥವಾ ಎಕ್ಸ್ ಪ್ರೆಸ್ ರೈಲು ಸೇವೆಗಳಿಗೆ ಬದಲಾಯಿಸಿದೆ ಎಂಬುದು ಗಮನಾರ್ಹ ಅಂಶವಾಗಿದೆ.
ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಇನ್ನು ಹೆಚ್ಚಿನ ದರವನ್ನು ನೀಡಿ ರೈಲು ಪ್ರಯಾಣ ಕೈಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಉದಾಹರಣೆಗೆ ದೆಹಲಿ – ಬಾಂದ್ರಾ ಗರೀಬ್ ರಥ ರೈಲು ಪ್ರಯಾಣದ ದರ 1050 ರೂಪಾಯಿಗಳಾಗಿತ್ತು ಆದರೆ ಇದೀಗ ಇದೇ ಮಾರ್ಗದ ಎಕ್ಸ್ ಪ್ರೆಸ್ ರೈಲಿನ ದರ 1500 ರಿಂದ 1600 ರೂಪಾಯಿಗಳಾಗಲಿವೆ.
ಸದ್ಯಕ್ಕೆ ಕಾರ್ಯಾಚರಿಸುತ್ತಿರುವ ಗರೀಬ್ ರಥ ರೈಲಿನ ಬೋಗಿಗಳು 10-14 ವರ್ಷಗಳಷ್ಟು ಹಳೆಯದಾಗಿರುವುದರಿಂದ ಇವುಗಳ ನಿರ್ವಹಣಾ ವೆಚ್ಚವು ರೈಲ್ವೇ ಇಲಾಖೆಗೆ ಒಂದು ಹೊರೆಯಾಗಿ ಪರಿಣಮಿಸುತ್ತಿದೆ. ಹಾಗಾಗಿ ರೈಲ್ವೇ ಇಲಾಖೆಗೆ ಹೆಚ್ಚು ಆದಾಯವನ್ನು ತಂದುಕೊಡುವ ನಿಟ್ಟಿನಲ್ಲಿ ಗರೀಬ್ ರಥದ ಬದಲಿಗೆ 3-ಎಸಿ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸುವ ಯೋಚನೆ ರೈಲ್ವೇಯದ್ದಾಗಿದೆ.
ಈ ಯು.ಪಿ.ಎ. –I ಸಮ್ಮಿಶ್ರ ಸರಕಾರದಲ್ಲಿ ರೈಲ್ವೇ ಸಚಿವರಾಗಿದ್ದ ಲಾಲೂ ಪ್ರಸಾದ್ ಯಾದವ್ ಅವರು ಎ.ಸಿ. ತ್ರೀ ಟೈರ್ ಗರೀಬ್ ರಥ್ ರೈಲುಗಳ ಓಡಾಟಕ್ಕೆ ಚಾಲನೆ ನೀಡಿದ್ದರು. ಮಧ್ಯಮ ಮತ್ತು ತಳ ಆದಾಯವನ್ನು ಹೊಂದಿರುವ ರೈಲ್ವೇ ಪ್ರಯಾಣಿಕರನ್ನು ಗಮನದಲ್ಲಿರಿಸಿಕೊಂಡು ಇದನ್ನು ಪ್ರಾರಂಭಿಸಲಾಗಿತ್ತು. ಪ್ರಪ್ರಥಮ ‘ಗರೀಬ್ ರಥ’ ರೈಲುಯಾನ ಬಿಹಾರದ ಸಹರ್ಸಾದಿಂದ ಪಂಜಾಬ್ ನ ಅಮೃತಸರದ ನಡುವೆ ನಡೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
MUST WATCH
ಹೊಸ ಸೇರ್ಪಡೆ
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ
Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.