ಯಕ್ಷನಿಧಿಯ ಸತ್ವ ಪರೀಕ್ಷೆ – ಪುಷ್ಪ ವಿಲಾಸ – ಅಭಿಮನ್ಯು ಕಾಳಗ

ಯಕ್ಷಗಾನ ವಿದ್ಯಾರ್ಥಿಗಳ ಪ್ರಸ್ತುತಿ

Team Udayavani, Jul 19, 2019, 5:00 AM IST

t-4

ಕ್ಷತ್ರಿಯ ಧರ್ಮಕ್ಕನುಸಾರವಾಗಿ ಗಯನನ್ನು ಉಳಿಸಲು ಕೃಷ್ಣನಲ್ಲೇ ಯುದ್ಧ ಮಾಡುತ್ತಾನೆ. ಕೃಷ್ಣನು ಮಾಡಿದ ಸತ್ವ ಪರೀಕ್ಷೆಯಲ್ಲಿ ಅರ್ಜುನನು ತೇರ್ಗಡೆಯಾಗುತ್ತಾನೆ. ಈ ಕಥಾಹಂದರದ ಪ್ರಸಂಗವನ್ನು ಎರಡು ತಾಸುಗಳಲ್ಲಿ ವಿದ್ಯಾರ್ಥಿಗಳು ಚೆನ್ನಾಗಿ ನಿರ್ವಹಿಸಿದರು.

ಮೂಡಬಿದಿರೆಯ ಯಕ್ಷನಿಧಿ ಸಂಸ್ಥೆ ತನ್ನ ನಾಲ್ಕನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ 100ಕ್ಕೂ ಮಿಕ್ಕಿದ ಮಕ್ಕಳೇ ಪ್ರಸ್ತುತ ಪಡಿಸಿದ ಯಕ್ಷಗಾನ ಸತ್ವ ಪರೀಕ್ಷೆ – ಪುಷ್ಪವಿಲಾಸ – ಅಭಿಮನ್ಯು ಕಾಳಗ ಯಶಸ್ವಿಯಾಯಿತು. ಚುರುಕಿನ ಸಾಂಪ್ರದಾಯಿಕ ಹೆಜ್ಜೆ , ಹದವರಿತ ಮಾತು ಹಾಗೂ ಭಾವಾಭಿನಯದ ಮೂಲಕ ಮಕ್ಕಳು ಚೆನ್ನಾಗಿ ನಿರ್ವಹಿಸಿದರು.

ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನ ಸಾಮರ್ಥ್ಯ ಎಷ್ಟು ಎಂಬುದನ್ನು ಸ್ವತಃ ಪರೀಕ್ಷಿಸಲು ಶ್ರೀಕೃಷ್ಣನು ಹೂಡಿದ ನಾಟಕವೇ ಸತ್ವಪರೀಕ್ಷೆ . ಗಯನ ಹಯದ ಬೆವರು ತನ್ನ ಅಘದಲ್ಲಿ ಬಿತ್ತು ಎಂದು ತಿಳಿದ ಕೃಷ್ಣನು ಗಯನನ್ನು ಎಂಟು ದಿನದೊಳಗೆ ಕೊಲ್ಲುತ್ತೇನೆ ಎಂಬ ಶಪಥ ಮಾಡುತ್ತಾನೆ . ನಾರದರಿಂದ ವಿಷಯ ತಿಳಿದ ಗಯನು ಅರ್ಜುನನಲ್ಲಿ ಪ್ರಾಣಭಿಕ್ಷೆ ಕೇಳಿದಾಗ , ವಿಷಯ ಅರಿಯದ ಅರ್ಜುನನು,ಗಯನಿಗೆ ಪ್ರಾಣಭಿಕ್ಷೆಯ ಅಭಯ ನೀಡುತ್ತಾನೆ .

ಕ್ಷತ್ರಿಯ ಧರ್ಮಕ್ಕನುಸಾರವಾಗಿ ಗಯನನ್ನು ಉಳಿಸಲು ಕೃಷ್ಣನಲ್ಲೇ ಯುದ್ಧ ಮಾಡುತ್ತಾನೆ. ಕೃಷ್ಣನು ಮಾಡಿದ ಸತ್ವಪರೀಕ್ಷೆಯಲ್ಲಿ ಅರ್ಜುನನು ತೇರ್ಗಡೆಯಾಗುತ್ತಾನೆ. ಈ ಕಥಾಹಂದರದ ಪ್ರಸಂಗವನ್ನು ಎರಡು ತಾಸುಗಳಲ್ಲಿ ವಿದ್ಯಾರ್ಥಿಗಳು ಚೆನ್ನಾಗಿ ನಿರ್ವಹಿಸಿದರು .

ಕೃಷ್ಣನಾಗಿ ತ್ರಿತಾ ಶೆಟ್ಟಿ ಹಾವಭಾವ , ನಾಟ್ಯ , ಸಂಭಾಷಣೆಗಳಲ್ಲಿ ಪ್ರಬುದ್ಧತೆ ತೋರಿದರು. ಅರ್ಜುನನಾಗಿ ಆದರ್ಶ ಅವರದು ಉತ್ತಮ ನಿರ್ವಹಣೆ. ಕ್ಷತ್ರಿಯ ಧರ್ಮವನ್ನು ಪಾಲಿಸುವಲ್ಲಿಯ ಕಠಿನತೆ , ತನ್ನ ದೇವನಾದ ಕೃಷ್ಣನನ್ನು ಯುದ್ಧದಲ್ಲಿ ಎದುರಿಸಬೇಕಾದ ಸಂದಿಗ್ಧತೆಯ ಅರ್ಜುನನ ಮಾನಸಿಕ ತುಮುಲವನ್ನು ಸಮರ್ಥವಾಗಿ ಬಿಂಬಿಸಿದರು. ಸುಭದ್ರೆಯಾಗಿ ಕು|ಪ್ರೇಮಾ ಬಂಗೇರ ನಿರ್ವಹಣೆ ವೃತ್ತಿಪರರ ಮಟ್ಟದಲ್ಲಿತ್ತು. ಅರ್ಜನ -ಸುಭದ್ರೆಯರ ಸಂಭಾಷಣೆ ಭಾವಪೂರ್ಣವಾಗಿತ್ತು . ಭೀಮನಾಗಿ ಸಂಚಿತಾ ರಾವ್‌ , ಬಲರಾಮನಾಗಿ ಪ್ರತಿಭಾ ಸುವರ್ಣ ಕಥೆಗೆ ಪೂರಕವಾಗಿ ಅಭಿನಯಿಸಿ ಮನ ಗೆದ್ದರು . ರುಕ್ಮಿಣಿಯಾಗಿ ಪ್ರಕೃತಿ ಮಾರೂರು ,ಮಕರಂದನಾಗಿ ಸಂತೋಷ್‌ ಇರುವೈಲು , ದೂತಿಯಾಗಿ ಹರ್ಷಿತಾ ಶೆಟ್ಟಿ ಉತ್ತಮ ಹಾಸ್ಯದ ಮೂಲಕ ಮಿಂಚಿದರು .

ಕೃಷ್ಣನು ಸತ್ಯಭಾಮೆಗಾಗಿ ಸ್ವರ್ಗಲೋಕದಿಂದ ಪಾರಿಜಾತ ವೃಕ್ಷವನ್ನು ತರುವ ಕಥಾವಸ್ತುವೇ “ಪುಷ್ಪ ವಿಲಾಸ’ . ಕೃಷ್ಣನಾಗಿ ಪಂಚಮಿ ಮಾರೂರುರವರ ಪ್ರಸ್ತುತಿ ಅತ್ಯುತ್ತಮವಾಗಿತ್ತು . ನಾಟ್ಯ , ಆಂಗಿಕ ಚಲನೆ , ಮಾತುಗಾರಿಕೆಯಲ್ಲಿ ಸಮನ್ವಯತೆಯೊಂದಿಗೆ ನೀಡಿದ ಕೃಷ್ಣನ ಚಿತ್ರಣ ಆಕರ್ಷಿಸಿತು . ಸತ್ಯಭಾಮೆಯ ಹಠ , ಅಹಂಕಾರವನ್ನು ಚೈತ್ರಾ ಜಿ.ಬಂಗೇರ ಚಿತ್ರಿಸಿದರು.ನರಕಾಸುರನ ಪಾತ್ರದಲ್ಲಿ ರಂಜಿತ್‌ ಶೆಟ್ಟಿ ಪರಂಪರೆಯ ಬಣ್ಣದ ವೇಷದಲ್ಲಿ ಮಿಂಚಿದರು .

ಮೂರನೇ ಪ್ರಸಂಗ “ಅಭಿಮನ್ಯು ಕಾಳಗ’.ಕುಣಿತವೇ ಪ್ರಧಾನ ಆಗಿರುವ ಈ ಪ್ರಸಂಗ ಹವ್ಯಾಸಿಗಳಿಗೆ ಕಬ್ಬಿಣದ ಕಡಲೆಕಾಯಿಯೇ ಹೌದು. ಆದರೂ ಯಕ್ಷನಿಧಿಯ ವಿದ್ಯಾರ್ಥಿಗಳು ಈ ಪ್ರಸಂಗವನ್ನು ಅಂದವಾಗಿ ಪ್ರಸ್ತುತಗೊಳಿಸಿದರು . ಮುಖ್ಯ ಪಾತ್ರ ಅಭಿಮನ್ಯು ಮೂವರು ಕಲಾವಿದರಿಂದ ಪ್ರಸ್ತುತವಾಯಿತು .ಮೊದಲ ಅಭಿಮನ್ಯುವಾಗಿ ಜಿತೇಶ್‌ ಉತ್ತಮ ನಾಟ್ಯ , ದಿಗಿಣಗಳಿಂದ ಮಿಂಚಿದರು . ಪ್ರತೀ ಪದ್ಯಕ್ಕೂ 50ರ ಮೇಲೆ ದಿಗಿಣ ತೆಗೆದು ಕರತಾಡನ ಗಿಟ್ಟಿಸಿದರು . ಸುಭದ್ರೆಯೊಡನೆ ಸಂಭಾಷಣೆಯ ಅಭಿಮನ್ಯು ಆಗಿ ಕೇಂದ್ರದ ಗುರುಗಳಾದ ಶಿವಕುಮಾರರೇ ಕಾಣಿಸಿಕೊಂಡರು . ಸುಭದ್ರೆಯಾಗಿ ಪವನ್‌ ಕುಮಾರ್‌ ಪ್ರಸ್ತುತಿ ಭಾವನಾತ್ಮಕವಾಗಿ ಮೂಡಿಬಂತು .

ಕೊನೆಯ ಅಭಿಮನ್ಯು ಆಗಿ ಅಮೃತ್‌ ಪುತ್ತಿಗೆ ನಾಟ್ಯ , ಹಾವಭಾವ , ವೀರರಸಗಳಿಗೆ ನೀಡಿದ ಕುಣಿತಗಳಿಂದ ಮಿಂಚಿದರು . ಕೈ ಕಡಿದ ಸನ್ನಿವೇಶದಲ್ಲಿ ಕೈಯನ್ನು ಹಿಂದಕ್ಕೆ ಹಿಡಿದು 70ಕ್ಕೂ ಹೆಚ್ಚು ದಿಗಿಣ ತೆಗೆದು , ತಾನೂ ವೃತ್ತಿಪರರಿಗೆ ಕಡಿಮೆಯಲ್ಲ ಎಂದು ನಿರೂಪಿಸಿದರು . ದ್ರೋಣನಾಗಿ ಸಂದೀಪ್‌ ಪುತ್ತಿಗೆ , ಕೌರವನಾಗಿ ಪ್ರದೀಪ ಆಚಾರ್ಯರು, ದುಶ್ಯಾಸನನಾಗಿ ಪ್ರತೀಕ್‌ ಸಾಲಿಯಾನ್‌ ಉತ್ತಮವಾಗಿ ನಿರ್ವಹಿಸಿದರು.

ಭಾಗವತಿಕೆಯಲ್ಲಿ ಪುಣಿಚಿತ್ತಾಯ, ಶ್ರೀನಿವಾಸ ಬಳ್ಳಮಂಜ, ಶಿವಪ್ರಸಾದ್‌ ಎಡಪದವು, ಚೆಂಡೆ ಮದ್ದಲೆಯಲ್ಲಿ ನೇರೋಳು, ಪಡ್ರೆದ್ವಯರು, ಆನಂದ ಗುಡಿಗಾರ್‌ , ಸವಿನಯರ ನಿರ್ವಹಣೆ ಅತ್ಯುತ್ತಮವಾಗಿತ್ತು .

ಯಕ್ಷನಿಧಿಯ ವಿದ್ಯಾರ್ಥಿಗಳು ನೀಡುವ ಪ್ರಸ್ತುತಿ ವೃತ್ತಿಪರ ಕಲಾವಿದರ ಮಟ್ಟದಲ್ಲೇ ಇದೆ ಎಂಬುದು ಉಲ್ಲೇಖನೀಯ .

ಎಂ.ಶಾಂತರಾಮ ಕುಡ್ವ

ಟಾಪ್ ನ್ಯೂಸ್

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

9-bng

Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.