ಮುಗ್ಧ ಮನಸು ನಿರ್ಮಲ ಕನಸು
ಸಿನಿಮಾದ ಹಿಂದೆ-ಮುಂದೆ ಚಿಣ್ಣರು
Team Udayavani, Jul 19, 2019, 5:32 AM IST
ಸ್ವಚ್ಛ ಭಾರತ ಅಭಿಯಾನ ಕುರಿತಂತೆ ಈಗಾಗಲೇ ಹಲವು ಚಿತ್ರಗಳು ಬಂದಿವೆ. ಬರುತ್ತಲೂ ಇವೆ. ಆ ಸಾಲಿಗೆ ಈಗ ಮಕ್ಕಳ ಸಿನಿಮಾ ಕೂಡ ಸೇರ್ಪಡೆಯಾಗಿದೆ. ಹೌದು, ಮಕ್ಕಳೇ ಸೇರಿ ಸಿದ್ಧಪಡಿಸಿರುವ ಸಿನಿಮಾ ಹೆಸರು “ನಿರ್ಮಲ’. ಈಗಾಗಲೇ ಚಿತ್ರೀಕರಣ ಮುಗಿಸಿ, ಪ್ರೇಕ್ಷಕರ ಎದುರು ಬರಲು ಸಜ್ಜಾಗಿದೆ.
ವಿಶೇಷವೆಂದರೆ, ಇಲ್ಲಿ ಛಾಯಾಗ್ರಾಹಕ ಮತ್ತು ನಿರ್ಮಾಪಕರನ್ನು ಹೊರತುಪಡಿಸಿದರೆ ಮಕ್ಕಳೇ ಸೇರಿ ಮಾಡಿರುವ ಚಿತ್ರವಿದು. ಲೋಹಿತ್ ಪ್ರಕಾಶ್ ಚಿತ್ರದ ನಿರ್ದೇಶನ ಮಾಡಿದ್ದಾರೆ. ಕಥೆ ಬಗ್ಗೆ ಹೇಳುವುದಾದರೆ, ಬಯಲು ಮುಕ್ತ ದೇಶವನ್ನಾಗಿ ಮಾಡುವ ಮುಖ್ಯ ವಿಷಯವನ್ನು ಇಲ್ಲಿ ಹೇಳಲಾಗಿದೆ. ಸಾಮಾಜಿಕ ಕಳಕಳಿ ಇರುವ ಅಂಶಗಳೂ ಚಿತ್ರದಲ್ಲಿರಲಿವೆ. ಚಿತ್ರಕ್ಕೆ “ಮುಗ್ಧ ಮನಸುಗಳ ಕನಸು’ ಎಂಬ ಅಡಿಬರಹವಿದ್ದು, ಮಕ್ಕಳ ಮುಂದಾಲೋಚನೆಗಳು ಹೇಗೆಲ್ಲಾ ಇವೆ ಎಂಬುದಕ್ಕೆ “ನಿರ್ಮಲ’ ಸಾಕ್ಷಿಯಾಗಿದೆ.
ಅಂದಹಾಗೆ, ಇಲ್ಲಿ ಕಾಣಿಸಿಕೊಂಡಿರುವ ಎಲ್ಲಾ ಮಕ್ಕಳು ಸುಮಾರು 14 ರಿಂದ 15 ವರ್ಷ ವಯಸ್ಸಿನವರು. ಕ್ಯಾಮೆರಾ ಮುಂದೆ ಬರುವ ಮುನ್ನ ತರಬೇತಿ ಪಡೆದುಕೊಂಡು ಬಂದಿದ್ದಾರೆ. ಚಿತ್ರಕ್ಕೆ ವರ್ಣಶ್ರೀ ಮುರೂರು ಸಂಗೀತ ನೀಡಿದ್ದಾರೆ. ಎರಡು ಹಾಡುಗಳು ಚಿತ್ರದಲ್ಲಿದ್ದು, ಸರಿಗಮಮ ಖ್ಯಾತಿಯ ಜ್ಯೋತಿಕಾ ಹಾಗೂ ನಿಖೀತಾ ಹಾಡಿದ್ದಾರೆ.
ಚಿತ್ರಕ್ಕೆ ಲೋಹಿತ್ ಚಂದನ್ ಸಂಕಲನವಿದೆ. ಭಾವನಾನಾಯಕ್ ನೃತ್ಯ ನಿರ್ದೇಶನವಿದೆ. ಪವನ್‌ಕುಮಾರ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದರೆ, ಬಿ.ಹೆಚ್. ಉಲ್ಲಾಸ್‌ಗೌಡ ಹಾಗು ಅವಿನಾಶ್ ನಿರ್ಮಾಣ ಮಾಡಿದ್ದಾರೆ.
ಇನ್ನು, ರಾಮನಗರ, ಚನ್ನಪಟ್ಟಣ,ಬಿಡದಿ ಸೇರಿದಂತೆ ಇತರೆ ಕಡೆಗಳಲ್ಲಿ ಒಂದೇ ಹಂತದ ಚಿತ್ರೀಕರಣ ನಡೆದಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು. ಅಂದು ಟ್ರೇಲರ್ ಬಿಡುಗಡೆ ಮಾಡಲೆಂದೇ ಅಮೆರಿಕಾದಿಂದ ದೀಪಕ್ ಹಾಗು ಸತಾರಾವ್ ಆಗಮಿಸಿದ್ದರು. ಟ್ರೇಲರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಕೋರಿದರು.
ಟ್ರೇಲರ್ ಬಿಡುಗಡೆ ವೇಳೆ ಮಂಡಳಿ ಅಧ್ಯಕ್ಷ ಜೈರಾಜ್, ಎಸ್.ಎ.ಚಿನ್ನೆಗೌಡ, ಉಪಾಧ್ಯಕ್ಷ ಉಮೇಶ್‌ಬಣಕಾರ್, ಕಾರ್ಯದರ್ಶಿ ಎನ್.ಎಂ.ಸುರೇಶ್, ಶಿಲ್ಪ ಶ್ರೀನಿವಾಸ್, ಪ್ರಿಯಾ, ನಟ ದೀಪಕ್, ಬಾ.ಮ.ಹರೀಶ್, ಬಾ.ಮಾ.ಗಿರೀಶ್ ಇದ್ದರು. ಎಲ್ಲಾ ಅಂದುಕೊಂಡಂತೆ ನಡೆದರೆ ಮುಂದಿನ ತಿಂಗಳು “ನಿರ್ಮಲ’ ಬಿಡುಗಡೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.