ಸರ್ಕಲ್‌ನಲ್ಲಿ ವಿಷ್ಣು ನೆನಪು
ಮಗನ ಸಿನಿಮಾಕ್ಕೆ ಅಪ್ಪನ ಹಾರೈಕೆ
Team Udayavani, Jul 19, 2019, 5:00 AM IST
ಅಭಿನಯ ಭಾರ್ಗವ, ಸಾಹಸ ಸಿಂಹ ವಿಷ್ಣುವರ್ಧನ್ ಅವರ ಹೆಸರು, ವ್ಯಕ್ತಿತ್ವವನ್ನು ಆದರ್ಶವಾಗಿ ಇಟ್ಟುಕೊಂಡು ಕನ್ನಡದಲ್ಲಿ ಈಗಾಗಲೇ ಹಲವು ಚಿತ್ರಗಳು ತೆರೆಗೆ ಬಂದಿವೆ. ಹೀಗೆ ಬಂದ ಬಹುತೇಕ ಚಿತ್ರಗಳು ಪ್ರೇಕ್ಷಕರ ಗಮನ ಸೆಳೆಯಲು ಯಶಸ್ವಿ ಕೂಡ ಆಗಿವೆ. ಈಗ ವಿಷ್ಣುವರ್ಧನ್ ನೆನಪಿನಲ್ಲಿ ಅಂಥದ್ದೇ ಚಿತ್ರವೊಂದು ತೆರೆಗೆ ಬರುತ್ತಿದೆ. ಅಂದಹಾಗೆ, ಆ ಚಿತ್ರದ ಹೆಸರು “ವಿಷ್ಣು ಸರ್ಕಲ್’.
ಇನ್ನು ಈ ಚಿತ್ರದಲ್ಲಿ ಹಿರಿಯ ನಟ ಜಗ್ಗೇಶ್ ಪುತ್ರ ಗುರುರಾಜ್ ಜಗ್ಗೇಶ್ ನಾಯಕನಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಗುರುರಾಜ್‌ಗೆ ನಾಯಕಿಯರಾಗಿ, ಸಂಹಿತಾ ವಿನ್ಯಾ, ಡಾ. ಜಾಹ್ನವಿ ಜ್ಯೋತಿ, ದಿವ್ಯಾ ಗೌಡ ಜೋಡಿಯಾಗಿದ್ದಾರೆ. ಉಳಿದಂತೆ ಹಿರಿಯ ನಟ ದತ್ತಣ್ಣ, ಪಟ್ರೆ ನಾಗರಾಜ್, ಶಿವಮಂಜು ಮತ್ತಿತರರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಲಕ್ಷೀ ದಿನೇಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ ಅವರ ಕಟ್ಟಾ ಅಭಿಮಾನಿಯಾಗಿರುವ ಆರ್. ಭಾಸ್ಕರ್ “ವಿಷ್ಣು ಸರ್ಕಲ್’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ.
ಸದ್ಯ “ವಿಷ್ಣು ಸರ್ಕಲ್’ ಚಿತ್ರದ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಹಾಡುಗಳನ್ನು ಹೊರತರುವ ಮೂಲಕ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ. ನವರಸ ನಾಯಕ ಜಗ್ಗೇಶ್, ಪತ್ನಿ ಪರಿಮಳ ಜಗ್ಗೇಶ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರ ಸಮ್ಮುಖದಲ್ಲಿ “ವಿಷ್ಣು ಸರ್ಕಲ್’ ಚಿತ್ರತಂಡ, ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದೆ.
ಇದೇ ವೇಳೆ ಮಾತನಾಡಿದ ನಟ ಜಗ್ಗೇಶ್, “ಸ್ವಾಭಿಮಾನಿ ಕನ್ನಡಿಗರು ಮೊದಲು ನಮ್ಮ ಚಿತ್ರಕ್ಕೆ ರೆಡ್‌ಕಾರ್ಪೆಟ್ ಹಾಕಿ, ನಂತರ ಬೇರೆ ಭಾಷೆಯ ಚಿತ್ರಗಳಿಗೆ ಮನ್ನಣೆ ಕೊಡಬೇಕು. ದಿವಂಗತ ನಟ ವಿಷ್ಣುವರ್ಧನ್ ಅವರನ್ನು ಕನ್ನಡದ ಅನೇಕ ನಟರು ತಮ್ಮ ಚಿತ್ರಗಳಲ್ಲಿ ಇಂದಿಗೂ ಜೀವಂತವಾಗಿರಿಸಿದ್ದಾರೆ. ವಿಷ್ಣುವರ್ಧನ್ ಎಲ್ಲೇ ಕಂಡರೂ ಆತ್ಮೀಯವಾಗಿ ಮಾತನಾಡಿಸುತ್ತಿದ್ದರು. ಭವಿಷ್ಯವನ್ನು ಚೆನ್ನಾಗಿ ಹೇಳುತ್ತಿದ್ದರು. ಅವರ ಸಲಹೆಯಂತೆಯೇ, ಒಂದೂ ಕಾಲು ಎಕರೆ ಜಾಗ ಪಡೆದುಕೊಂಡೆ’ ಎಂದು ವಿಷ್ಣುವರ್ಧನ್ ಅವರೊಂದಿಗಿನ ತಮ್ಮ ಹಿಂದಿನ ಒಡನಾಟವನ್ನು ಮೆಲುಕು ಹಾಕಿದರು.
ಹಾಡುಗಳಿಗೆ ಪ್ರದೀಪ್ ವರ್ಮ ಸಂಗೀತ ಸಂಯೋಜಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.