ಡಿಜಿಟಲ್ ಪೇಮೆಂಟ್ ಪರಿಣಾಮಕಾರಿಯಾಗಲು ಇಪಿಒಎಸ್ ಮೆಷಿನ್ ಪೂರಕ
Team Udayavani, Jul 19, 2019, 5:08 AM IST
ಕಾಸರಗೋಡು: ಗ್ರಾಮ ಕಚೇರಿಗಳಲ್ಲಿ ಶುಲ್ಕ ಪಾವತಿಸಬೇಕಿದ್ದರೆ ಇನ್ನು ಮುಂದೆ ಸಾಲಾಗಿ ಕಾದು ನಿಲ್ಲ ಬೇಕಿಲ್ಲ. ಇದಕ್ಕಾಗಿಯೇ ಸಿದ್ಧಗೊಂಡು ಜಾರಿಗೆ ಬಂದಿದೆ ಇ.ಪಿ.ಒ.ಎಸ್.ಮೆಷಿನ್.
ಎ.ಟಿ.ಎಂ. ಕಾರ್ಡ್ ಬಳಸಿಯೋ ಕ್ರೆಡಿಟ್ ಕಾರ್ಡ್ ಬಳಸಿಯೋ ಶುಲ್ಕ ಪಾವತಿ ನಡೆಸಬಹುದು. ಇದರಿಂದ ಸಾರ್ವಜನಿಕರಿಗೂ, ಇಲಾಖೆ ಸಿಬಂದಿಗೂ ಸಮಯದ ಲಾಭ ದೊರೆಯಲಿದೆ. ಜತೆಗೆ ಕಳ್ಳನೋಟು ವ್ಯವಹಾರ ತಡೆಗೂ ಇ.ಪಿ.ಒ.ಎಸ್. ಮಿಷನ್ ಸಿದ್ಧಗೊಂಡಿದೆ.
ಡಿಜಿಟಲ್ ಪೇಮೆಂಟ್ ಎಂಬ ನೂತನ ಸಂಕಲ್ಪಕ್ಕೆ ಈ ಯಂತ್ರಗಳು ತುಂಬ ಸಹಕಾರಿಯಾಗಿವೆ. ಜತೆಗೆ ಡಿಜಿಟಲೈಸೇಷನ್ ಕುರಿತು ಜನತೆಗೆ ಹೆಚ್ಚುವರಿ ತಿಳಿದುಕೊಳ್ಳಲೂ ಈ ಯಂತ್ರಗಳು ವೇದಿಕೆಯಾಗಲಿವೆ.
ಗ್ರಾಮ ಕಚೇರಿಗಳ ತೆರಿಗೆ ಹಣ ವ್ಯವಹಾರಗಳನ್ನು ಡಿಜಿಟಲೈಸೇಷನ್ ನಡೆಸುವ ಅಂಗವಾಗಿ ರಾಜ್ಯ ಸರಕಾರ ಆರಂಭಿಸಿರುವ ಇ.ಪಿ.ಒ.ಎಸ್.ಮೆಷಿನ್ ಬಳಕೆ ಸಂಬಂಧ ತರಬೇತಿ ಕಾರ್ಯಕ್ರಮ ಜಿಲ್ಲಾಧಿಕಾರಿ ಕಚೇರಿಯ ಕಿರು ಸಭಾಂಗಣದಲ್ಲಿ ಜರಗಿತು.
ಹೆಚ್ಚುವರಿ ದಂಡನಾಧಿಕಾರಿ ಎನ್. ದೇವಿದಾಸ್ ಉದ್ಘಾಟಿಸಿದರು.
ಎನ್.ಎ.ಸಿ. ಜಿಲ್ಲಾ ಅಧಿಕಾರಿ ಕೆ. ರಾಜನ್ ತರಗತಿ ನಡೆಸಿದರು. ಕಿರಿಯ ವರಿಷ್ಠಾಧಿಕಾರಿ ಆಂಟೋ ಷಿಜೋ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಇ.ಪಿ.ಒ.ಎಸ್.ಮೆಷಿನ್ ಗ್ರಾಮ ಕಚೇರಿಗಳಿಗೆ ವಿತರಣೆ ನಡೆಸಲಾಯಿತು.
ಈ ಯಂತ್ರಗಳ ರಾಜ್ಯ ಮಟ್ಟದ ಉದ್ಘಾಟನೆ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನಡೆಸಿದ್ದರು.
ಅತ್ಯಧಿಕ ಜನನಿಬಿಡ ಇರುವ ಕಚೇರಿಗಳಲ್ಲಿ ಇಂತಹ ಯಂತ್ರಗಳು ಡಿಜಿಟಲ್ ಪೇಮೆಂಟ್ ಮೂಲಕ ಪರಿಣಾಮಕಾರಿಯಾಗಲಿವೆ ಎಂದು ಅಧಿಕಾರಿಗಳೂ ನಿರೀಕ್ಷಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.