22ಕ್ಕೆ ಚಂದ್ರಯಾನ-2
ಹೊಸ ದಿನಾಂಕ ಪ್ರಕಟಿಸಿದ ಇಸ್ರೋ
Team Udayavani, Jul 19, 2019, 6:00 AM IST
ಹೊಸದಿಲ್ಲಿ: ತಾಂತ್ರಿಕ ಕಾರಣಗಳಿಂದ ಮುಂದೂಡಲ್ಪಟ್ಟಿದ್ದ “ಚಂದ್ರಯಾನ-2′ ಯೋಜನೆಯ ರಾಕೆಟ್ ಉಡಾವಣೆ ಇದೇ ತಿಂಗಳ 22ರಂದು ನಡೆಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಕಟಿಸಿದೆ. ಜು. 22ರ ಅಪರಾಹ್ನ 2.43ರ ಸುಮಾರಿಗೆ ಉಡಾವಣೆ ನಡೆಸಲಾಗುವುದು ಎಂದು ಸಂಸ್ಥೆ ಟ್ವೀಟ್ ಮಾಡಿದೆ.
ಈ ಮೊದಲು ಜು. 14ರ ಮಧ್ಯರಾತ್ರಿ 2.51ಕ್ಕೆ ಉಡಾವಣೆಯಾಗಬೇಕಿದ್ದ “ಜಿಎಸ್ಎಲ್ವಿ ಎಂ.ಕೆ-3′ ರಾಕೆಟ್ನಲ್ಲಿ ಉಡಾವಣೆಗೆ 56 ನಿಮಿಷಗಳಿದ್ದಾಗ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಉಡಾವಣೆಯನ್ನು ಸ್ಥಗಿತಗೊಳಿಸಲಾಗಿತ್ತು.
ಇದೇ ತಿಂಗಳಿಗೆ ಆದ್ಯತೆ
ಜು.31ರೊಳಗೆ ಚಂದ್ರ ಯಾನ-2 ಅನ್ನು ಅನುಷ್ಠಾನ ಗೊಳಿಸ ಬೇಕು ಎಂದು ಇಸ್ರೋ ನಿರ್ಧ ರಿ ಸಿದೆ ಎಂದು ಆ ಸಂಸ್ಥೆಯ ಹಿರಿಯ ವಿಜ್ಞಾನಿ ಯೊಬ್ಬರು ಹೇಳಿದ್ದಾರೆ. ಭೂಮಿಯ ಗುರುತ್ವಾ ಕರ್ಷಣ ಶಕ್ತಿ, ಚಂದ್ರನು ಭೂಮಿಗೆ ಹತ್ತಿರಕ್ಕೆ ಸರಿದು ಬಂದಿರು ವಂಥ ಸನ್ನಿವೇಶ ಮುಂತಾದ ಹಲವಾರು ವಿಚಾರ ಗಳನ್ನು ಲೆಕ್ಕ ಹಾಕಿಯೇ ಈ ಯೋಜನೆ ಅನುಷ್ಠಾನ ಗೊಳಿಸ ಬೇಕು. ಹಾಗಾಗಿ ಈ ತಿಂಗಳು ಸಾಧ್ಯ ವಾಗ ದಿದ್ದರೆ ಈ ಯೋಜನೆಯ ಅನುಷ್ಠಾನ ಸಾಧ್ಯ ವಾಗುವುದು ಸೆಪ್ಟಂಬರ್ನಲ್ಲಿಯೇ. ಅದು ಬಿಟ್ಟರೆ ಇನ್ನು ಮುಂದಿನ ವರ್ಷವೇ ಈ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದಿದ್ದಾರೆ.
ಯಾವಾಗೆಂದರೆ ಅವಾಗ ಯೋಜನೆ ಉಡಾವಣೆಗೊಳಿಸಿದರೆ ರಾಕೆಟ್ನಲ್ಲಿನ ಪರಿಕರಗಳು ನಿಗದಿತ ಅವಧಿ ಯ ವರೆಗೆ ಕೆಲಸ ಮಾಡುವುದಿಲ್ಲ. ಉದಾಹರಣೆಗೆ, ಚಂದ್ರನ ಸುತ್ತಬೇಕಾದ ಆರ್ಬಿಟರ್ ಈಗ ನಿಗದಿ ಗೊಳಿಸಲಿರುವ 1 ವರ್ಷದ ಅವಧಿಗೆ ಬದಲಾಗಿ ಕೇವಲ 6 ತಿಂಗಳಷ್ಟೇ ಕಾರ್ಯಾಚರಣೆ ನಡೆಸಬಹುದು. ಹಾಗೊಂದು ವೇಳೆ ಯೋಜನೆ ಪುನಃ ಮುಂದೂಡಲ್ಪಟ್ಟರೆ ಯೋಜನೆಯನ್ನೇ ಮತ್ತೂಮ್ಮೆ ಪರಿಷ್ಕರಿಸಬೇಕಾಗುತ್ತದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.