ಜಲಸಂರಕ್ಷಣೆ ಇಂದಿನ ಗರಿಷ್ಠ ಆದ್ಯತೆಯಾಗಲಿ
ಅಂತರ್ಜಲ ಮಟ್ಟ ಕುಸಿತ ತಡೆ ಯತ್ನ ಅಗತ್ಯ
Team Udayavani, Jul 19, 2019, 5:19 AM IST
ಉಡುಪಿ: ನೀರಿನ ಪ್ರತಿ ಹನಿಯೂ ಅಮೂಲ್ಯ. ನೀರಿನ ಜಲಸಂಪನ್ಮೂಲ ರಕ್ಷಣೆ, ಪೋಲಾಗದಂತೆ ಬಳಸುವುದರಲ್ಲೇ ಭೂಮಿಯ ಭವಿಷ್ಯ ಅಡಗಿದೆ.
ನಿತ್ಯ ನೀರು ಲಭ್ಯತೆಗೆ ಸಮಾಜದ ಪ್ರತಿಯೊಬ್ಬರೂ ಮಳೆನೀರನ್ನು ತಡೆಹಿಡಿದು ಸಂಗ್ರಹಿಸುವ ಅಥವಾ ಭೂಗರ್ಭದಲ್ಲಿ ಇಂಗಿಸುವ ವ್ಯವಸ್ಥೆಯನ್ನು ಮಾಡಬೇಕಿದೆ.
ನೀರಿನ ಬೇಡಿಕೆ
ರಾಜ್ಯ ಜಲ ನೀತಿ ಪ್ರಕಾರ ಗ್ರಾಮಾಂತರದ ಓರ್ವ ವ್ಯಕ್ತಿಗೆ ದಿನಕ್ಕೆ 55ಲೀ., ಪಟ್ಟಣದಲ್ಲಿ ರುವವನಿಗೆ 70 ಲೀ., ನಗರ ಪ್ರದೇಶದಲ್ಲಿರು ವವನಿಗೆ 100 ಲೀ., ಮಹಾನಗರದಲ್ಲಿರುವವರಿಗೆ 135 ಲೀ. ನೀರು ಅಗತ್ಯವಿದೆ. ಭೂಮಿಯಲ್ಲಿ ಶೇ. 97ರಷ್ಟು ನೀರು ಉಪ್ಪುಗಿದ್ದು, ಶೇ. 2ರಷ್ಟು ನೀರು ಮಂಜುಗಡ್ಡೆ ಹಾಗೂ ನೀರ್ಗಲ್ಲುಗಳ ರೂಪದಲ್ಲಿದೆ. ಅಂದರೆ ಮಾನವನ ಬಳಕೆಗೆ ಸಿಗುವ ನೀರು ಕೇವಲ ಶೇ. 1ರಷ್ಟು ಮಾತ್ರ!
ನೀರಿನ ಅಭಾವ ತೀವ್ರವಾಗಲು ಕಾರಣಗಳು
– ನಗರೀಕರಣದ ನೆವದಲ್ಲಿ ಮಳೆ ಆಕರ್ಷಿಸುವ ಕಾಡು ನಾಶ, ಭೂಮಿ ತಂಪಾಗಿರಿಸುವ ಮರಗಿಡಗಳ ನಾಶ, ಜನಸಂಖ್ಯೆ ಹೆಚ್ಚಳದೊಂದಿಗೆ ಹೆಚ್ಚಿದ ನೀರಿನ ಬೆೇಡಿಕೆ, ಜಾಗತಿಕ ತಾಪಮಾನ ಏರಿಕೆ ಮುಂತಾದ ಕಾರಣಗಳು ನೀರಿನ ಅಭಾವ ಹೆಚ್ಚಲು ಕಾರಣವಾಗಿದೆ.
– ಕೃಷಿ ಹಾಗೂ ಸಾಮಾನ್ಯ ಬಳಕೆಗೆ ಉಪಯೋಗವಾಗುತ್ತಿದ್ದ, ಅಂತರ್ಜಲ ಹೆಚ್ಚಲು ಕಾರಣವಾಗುತ್ತಿದ್ದ ಕೆರೆಗಳು, ಗದ್ದೆಗಳನ್ನು ಕೃಷಿ ಮಾಡುವುದನ್ನು ನಿಲ್ಲಿಸಿ, ಸಮುಚ್ಚಯಗಳು, ನಗರ ವಿಸ್ತರಣೆ ಇತ್ಯಾದಿ ಆಗಿದ್ದರಿಂದ ನೀರು ಇಂಗುತ್ತಿಲ್ಲ. ನೀರಿಗಾಗಿ ಎಲ್ಲೆಡೆ ಕೊಳವೆಬಾವಿ ಕೊರೆದು ನೀರಿನ ಮಟ್ಟವೂ ಗಣನೀಯವಾಗಿ ಕುಸಿದಿದೆ.
– ಹೆಚ್ಚಿದ ಕೈಗಾರಿಕೆ, ಮನುಷ್ಯ ಉಂಟುಮಾಡಿದ ತ್ಯಾಜ್ಯದಿಂದ ನೀರು ಕಲುಷಿತವಾಗುತ್ತಿರುವುದು, ನೈಸರ್ಗಿಕ ಸಂಪನ್ಮೂಲವಾದ ನೀರಿನ ಬೇಕಾಬಿಟ್ಟಿ ಬಳಕೆಯಿಂದಲೂ ಅಭಾವವಾಗಿದೆ.
ಜಲ ಸಂರಕ್ಷಣೆ ಅಭಿಯಾನದ ಭಾಗವಾಗಿ ಮಳೆಕೊಯ್ಲು ಮಾಹಿತಿ ಕಾರ್ಯಾಗಾರವನ್ನು ‘ಉದಯವಾಣಿ’ಯು ಜಿಲ್ಲಾಡಳಿತ, ಜಿ.ಪಂ.,
ನಿರ್ಮಿತಿ ಕೇಂದ್ರ, ಎಂಜಿಎಂಕಾಲೇಜಿನ ಸಹಭಾಗಿತ್ವದಲ್ಲಿ ಜು. 20ರ ಬೆಳಗ್ಗೆ
9.30ಕ್ಕೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ
ನಡೆಸಲಿದ್ದು, ಸಾರ್ವಜನಿಕರು ಭಾಗವಹಿಸಬಹುದು.
ಜಾಗೃತಿ ಅಗತ್ಯ
ನೀರಿನ ಹಿತಮಿತ ಬಳಕೆಯ ಬಗ್ಗೆ ಜನರಲ್ಲಿ ಈ ಕ್ಷಣದಿಂದಲೇ ಅರಿವು ಮೂಡಬೇಕು. ಮಳೆನೀರನ್ನು ಶೇಖರಿಸಿಟ್ಟುಕೊಳ್ಳುವ ಪರಿಪಾಠ ಬೆಳೆಸಿಕೊಂಡರೆ ಬೇಸಗೆ ಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ. ನೀರು ಶೇಖರಣೆಯಲ್ಲಿ ಹಲವಾರು ವಿಧಾನಗಳಿದ್ದು, ವೆಚ್ಚವೂ ಅತ್ಯಲ್ಪವಾಗಿದೆ. ಈ ಬಗ್ಗೆ ಪ್ರತಿ ಮನೆಯಲ್ಲೂ ಜಾಗೃತಿಯಾಗಬೇಕು.
-ಜೋಸೆಫ್ ಜೆ.ಎಂ. ರೆಬೆಲ್ಲೊ, ಜಲತಜ್ಞರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.