ಮಳಲಿ ದರೋಡೆ: ಮೂವರ ಬಂಧನ
Team Udayavani, Jul 19, 2019, 11:04 AM IST
ಬಜಪೆ: ಮೊಗರು ಗ್ರಾಮದ ಮಳಲಿ ಸೈಟ್ ಬಳಿ ಜು.14ರಂದು ಬೆೈಕಿನಲ್ಲಿ ಹೋಗುತ್ತಿದ್ದ ಸೆಂಥಿಲ್ ಕುಮಾರ್ ಅವರನ್ನು ಎರಡು ಬೆೈಕ್‌ನಲ್ಲಿ ಬಂದ ಯುವಕರು ಅಡ್ಡಗಟ್ಟಿ ತಲವಾರು ತೋರಿಸಿ ಬೆದರಿಸಿ ಲಕ್ಷಾಂತರೂ ರೂ. ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಬಜಪೆ ಪೊಲೀಸರು ಮೂವರನ್ನು ಗುರುವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮೂಳೂರು ಗ್ರಾಮದ ಮಠದಗುಡ್ಡೆ ಸೈಟ್‌ನ ಅಬ್ದುಲ್ ಅಜೀಜ್ ನೌಷಾದ್ ಯಾನೆ ಅಕಲ್ (19) ಮತ್ತು ಬಡಗುಳಿ ಪಾಡಿ ಗ್ರಾಮದ ನಾರ್ಲಪದವಿನ ಮಹಮ್ಮದ್ ಮುಸ್ತಫಾ ಯಾನೆ ಮುಸ್ತಾಫ (23) ಅವರನ್ನು ಕುಕ್ಕುದ ಕಟ್ಟೆಯಿಂದ ಹಾಗೂ ಉಳಾಯಿಬೆಟ್ಟು ಪಟ್ರಕೋಡಿ ಹೌಸ್‌ನ ಆಶ್ಲೇಷ್ ಎ. ಕೋಟ್ಯಾನ್ ಯಾನೆ ಅಣ್ಣು(20)ನನ್ನು ಉಳಾಯಿಬೆಟ್ಟು ಬಳಿ ಬಂಧಿಸಲಾಗಿದೆ.
ಅವರಿಂದ 21,800 ರೂ., ದರೋಡೆಗೆ ಬಳಸಿದ್ದ ಬಜಾಜ್ ಡಿಸ್ಕವರ್ ಬೈಕ್, ಮೂರು ಮೊಬೈಲ್, ತಲವಾರು, ಚೂರಿ ಮುಂತಾದವುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಪ್ರಕರಣದ ವಿವರ
ಸೆಂಥಿಲ್ ಕುಮಾರ್ ಸಣ್ಣ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದು, ಪರಿಚಯದವರಿಗೆ ಸಾಲ ನೀಡುತ್ತಿದ್ದರು. ಪ್ರತಿ ರವಿವಾರ ಕಲೆಕ್ಷನ್‌ಗೆ ಹೋಗುತ್ತಿದ್ದರು. ಜು.14ರಂದು ಬೆಳಗ್ಗೆ ಮನೆಯಿಂದ ಬೈಕಿನಲ್ಲಿ ಹೊರಟು ಬಿ.ಸಿ.ರೋಡ್ ಮಾರ್ಗವಾಗಿ ಪೊಳಲಿ ಅಡೂರಿನಿಂದ ಮರಳು ಯಾರ್ಡ್ ನಿಂದ ಮಳಲಿ ಸೈಟಿಗೆ ಹೋಗಿ ಮಧ್ಯಾಹ್ನ ಮೊಗರು ಗ್ರಾಮದ ಮಳಲಿ ಸೈಟ್ ಸಮೀಪ ದರೋಡೆ ಮಾಡಲಾಗಿತ್ತು. ಅವರ ಬೆೈಕಿನ ಬಾಕ್ಸನ್ನು ಒಡೆದು ಅದರಲ್ಲಿದ್ದ 2,05,000 ರೂ.ಯನ್ನು ದರೋಡೆ ಮಾಡಲಾಗಿದ್ದ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ನಡೆದು ಮೂರು ದಿನದೊಳಗೆ ಮೂವರನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಬಲೆ ಬೀಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.