ರಾಯಚೂರಿನಲ್ಲಿ ಪಾತಾಳ ಕಂಡ ಅಂತರ್ಜಲ
•500 ಅಡಿಗಿಂತ ಹೆಚ್ಚು ಕೊರೆದರೂ ಸಿಗುತ್ತಿಲ್ಲ ನೀರು •ಕೊರೆಸಿದ 554ರಲ್ಲಿ 160 ಕೊಳವೆಬಾವಿ ವಿಫಲ •ಜಲ ಮರುಪೂರಣಕ್ಕಿಲ್ಲ ಆದ್ಯತೆ
Team Udayavani, Jul 19, 2019, 11:10 AM IST
ಸಾಂದರ್ಭಿಕ ಚಿತ್ರ
ಸಿದ್ಧಯ್ಯಸ್ವಾಮಿ ಕುಕುನೂರು
ರಾಯಚೂರು: ಸತತ ಬರದಿಂದ ಕಂಗೆಟ್ಟ ಜಿಲ್ಲೆಯಲ್ಲಿ ಅಂತರ್ಜಲ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು, ಎಷ್ಟು ಆಳಕ್ಕೆ ಕೊರೆದರೂ ಕೊಳವೆಬಾವಿಗಳಿಂದ ನೀರು ಮಾತ್ರ ಬರುತ್ತಿಲ್ಲ. ಜಿಲ್ಲಾಡಳಿತ ಹೊಸ ಬೋರ್‌ವೆಲ್ ಕೊರೆಯಲು ಉತ್ಸಾಹ ತೋರುತ್ತಿದೆ ವಿನಃ ಅಂತರ್ಜಲ ಹೆಚ್ಚಿಸಿ ಜಲ ಮರುಪೂರಣಕ್ಕೆ ಕಿಂಚಿತ್ತೂ ಒತ್ತು ನೀಡುತ್ತಿಲ್ಲ.
ಬರ ಬಂದರೆ ಸಾಕು ಜಿಲ್ಲೆಯಲ್ಲಿ ನೀರಿನ ಹಾಹಾಕಾರ ಭುಗಿಲೇಳುತ್ತದೆ. ಎರಡು ನದಿಗಳಿದ್ದರೂ ಅದೆಷ್ಟೋ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ ಭಾಗ್ಯವಿಲ್ಲ. ಆದರೆ, ಸರ್ಕಾರ ನೀರಿಗೆ ಮೊದಲಾದ್ಯತೆ ನೀಡಬೇಕು ಎಂಬ ಕಾರಣಕ್ಕೆ ಬೋರ್‌ವೆಲ್ ಕೊರೆಸಲು ಅನುಮತಿ ನೀಡುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಕಳೆದ ಬೇಸಿಗೆಯಲ್ಲಿ ಬರೋಬ್ಬರಿ 554 ಬೋರ್‌ವೆಲ್ಗಳನ್ನು ಕೊರೆಯಿಸಲಾಗಿದೆ. ಅದರಲ್ಲಿ 393ರಲ್ಲಿ ಅಲ್ಪಸ್ವಲ್ಪ ನೀರು ಲಭ್ಯವಾಗಿದ್ದರೆ ಬರೋಬ್ಬರಿ 160 ಬೋರ್‌ವೆಲ್ಗಳು ವಿಫಲಗೊಂಡಿವೆ. 500 ಅಡಿಗೂ ಅಧಿಕ ಆಳ ಕೊರೆದರೂ ನೀರು ಸಿಕ್ಕಿಲ್ಲ. ಕಳೆದ ವರ್ಷ ಕೂಡ ಇಂಥದ್ದೇ ಸನ್ನಿವೇಶ ಎದುರಾದಾಗ ಆಗಲೂ ಸಾಕಷ್ಟು ಬೋರ್‌ವೆಲ್ ಕೊರೆಯಿಸಲಾಗಿತ್ತು. ನೀರು ಬಾರದೆ ಅನೇಕ ಬೋರ್‌ವೆಲ್ಗಳು ವಿಫಲಗೊಂಡಿದ್ದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ.
ಹೆಚ್ಚು ನೀರು ಬಂದಿಲ್ಲ: ಈಗ ಕೊರೆಸಿದ ಬೋರ್‌ವೆಲ್ಗಳಲ್ಲಿ ನೀರು ಬಂದಿದೆಯಾದರೂ ಬಹುತೇಕ ಕಡೆ ಎರಡು ಮೂರು ಇಂಚು ಬಂದಿರುವುದೇ ಹೆಚ್ಚು. ಅಗತ್ಯಕ್ಕೆ ಅನುಸಾರ ಬಳಸಬೇಕಿದೆ. ಅಲ್ಲದೇ, ಬೇಸಿಗೆ ಮುಗಿದ ಬಳಿಕ ಅವುಗಳ ಸಮರ್ಪಕ ಬಳಕೆ ಆಗದೆ ಮುಂಬರುವ ವರ್ಷಕ್ಕೆ ಅವು ನಿರುಪಯುಕ್ತವಾದ ನಿದರ್ಶನ ಹೆಚ್ಚು. ಆದರೆ, ಮುಂದಿನ ವರ್ಷಕ್ಕೆ ಆ ಕೊಳವೆಬಾವಿಗಳಿಂದ ನೀರು ಪಡೆಯುವುದು ಕಷ್ಟ ಎಂಬ ಕಾರಣಕ್ಕೆ ಹೊಸ ಬೋರ್‌ವೆಲ್ ಕೊರೆಯಬೇಕಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
ಅಂತರ್ಜಲ ಹೆಚ್ಚಳಕ್ಕಿಲ್ಲ ಆದ್ಯತೆ: ಕೇವಲ ಬೋರ್‌ವೆಲ್ ಕೊರೆಯುವುದರಿಂದ ಅಂತರ್ಜಲ ಹೆಚ್ಚುವುದಿಲ್ಲ. ಈ ವರ್ಷ ಕೊರೆದ ಕೊಳವೆಬಾವಿಗಳು ಶಾಶ್ವತವಾಗಿ ಕೆಲಸ ಮಾಡಬೇಕಿದ್ದರೆ ಜಲ ಮರುಪೂರಣಕ್ಕೆ ಆದ್ಯತೆ ನೀಡಬೇಕಿದೆ ಎನ್ನುತ್ತಾರೆ ಪರಿಸರ ತಜ್ಞರು. ಆದರೆ, ಜಿಲ್ಲೆಯ ಮಟ್ಟಿಗೆ ಮಾತ್ರ ಅದು ಆಗುತ್ತಿಲ್ಲ.
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ಕಾರಣ ಅಗತ್ಯವಿರುವ ಕಡೆ ಕೊರೆಸಲು ಸರ್ಕಾರದ ನಿರ್ದೇಶನವಿತ್ತು. ಅಂತರ್ಜಲ ಸಮಸ್ಯೆ ಎಲ್ಲೆಡೆ ಇದೆ. ಸರ್ಕಾರ ಅಂತರ್ಜಲ ಹೆಚ್ಚಿಸಲೆಂದೇ ಜಲಾಮೃತ ಎಂಬ ಯೋಜನೆ ಜಾರಿಗೊಳಿಸುತ್ತಿದ್ದು, ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
•ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.