ಬಡವರ ಬಂಧುಗೆ ಆರಂಭದಲ್ಲೇ ವಿಘ್ನ!
•ಸಾಲ ಹಂಚಿಕೆಯಲ್ಲಿ ಜಿಲ್ಲೆಗೆ ಮೊದಲ ಸ್ಥಾನ •ಸಾಲ ಮರುಪಾವತಿ ಶೇ. 60 ರಷ್ಟು ಬಾಕಿ
Team Udayavani, Jul 19, 2019, 12:57 PM IST
ವೆಂಕೋಬಿ ಸಂಗನಕಲ್ಲು
ಬಳ್ಳಾರಿ: ಬೀದಿ ಬದಿ ವ್ಯಾಪಾರಿಗಳ ಸಬಲೀಕರಣಕ್ಕಾಗಿ ಮೈತ್ರಿ ಸರ್ಕಾರ ಜಾರಿಗೆ ತಂದಿರುವ ‘ಬಡವರ ಬಂಧು’ ಯೋಜನೆಗೆ ಜಿಲ್ಲೆಯಲ್ಲಿ ಆರಂಭಿಕ ವಿಘ್ನ ಎದುರಾಗಿದೆ. ಸಾಲ ಹಂಚಿಕೆಯಲ್ಲಿ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಆದರೆ ಸಾಲವಸೂಲಿಯಲ್ಲಿ ಹಿಂದೆ ಬಿದ್ದಿದೆ.
ವ್ಯಾಪಾರಿಗಳ ಅನುಕೂಲಕ್ಕಾಗಿ ಮೊದಲ ಮೂರು ತಿಂಗಳ ಅವಧಿಯಲ್ಲಿ ನೀಡಿದ್ದ ಬಡ್ಡಿರಹಿತ ಸಾಲದಲ್ಲಿ ಶೇ.60 ರಷ್ಟು ಮರುಪಾವತಿಯಾಗಿಲ್ಲ. ಇದು ಸಹಕಾರಿ ಬ್ಯಾಂಕ್‌ಗಳ ಚಿಂತೆಗೆ ಕಾರಣವಾಗಿದೆ. ಯೋಜನೆಯಡಿ ಅತಿ ಹೆಚ್ಚು ವ್ಯಾಪಾರಿಗಳಿಗೆ ಸಾಲ ನೀಡುವ ಮೂಲಕ ರಾಜ್ಯದಲ್ಲೇ ಬಳ್ಳಾರಿ ಪ್ರಥಮ ಸ್ಥಾನದಲ್ಲಿದೆ ಎಂಬುದು ಸಮಾಧಾನದ ಸಂಗತಿಯಾದರೂ ನಿರೀಕ್ಷಿತ ಮಟ್ಟದಲ್ಲಿ ಸಾಲ ವಸೂಲಿಯಾಗದಿರುವುದು ಯೋಜನೆಗೆ ಹಿನ್ನಡೆಯಾಗಿದೆ.
ವ್ಯಾಪಾರಿಗಳ ರಕ್ಷಣೆ: ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬೀದಿ ಬದಿ ವ್ಯಾಪಾರಿಗಳನ್ನು ಆರ್ಥಿಕವಾಗಿ ಅಭಿವೃದ್ಧಿ ಪಡಿಸುವ ಸಲುವಾಗಿ ‘ಬಡವರ ಬಂಧು’ ಯೋಜನೆ ಅನುಷ್ಠಾನಕ್ಕೆ ತಂದಿದೆ. ವ್ಯಾಪಾರಿಗಳು ಖಾಸಗಿಯಾಗಿ ಸಾಲ ಪಡೆದು ಅದಕ್ಕೆ ಬಡ್ಡಿ, ಚಕ್ರ ಬಡ್ಡಿ, ಮೀಟರ್ ಬಡ್ಡಿ ಸುಳಿಗೆ ಸಿಲುಕಿ ತೊಂದರೆ ಅನುಭವಿಸುವುದನ್ನು ತಪ್ಪಿಸೋದು ಮತ್ತು ವ್ಯಾಪಾರಿಗಳನ್ನು ರಕ್ಷಿಸುವುದು ಯೋಜನೆಯ ಉದ್ದೇಶವಾಗಿತ್ತು.
2868 ಮಂದಿಗೆ ಸಾಲ: ಯೋಜನೆ ಜಾರಿಗೊಳಿಸಿದ ನಂತರ ಕಳೆದ ಮಾರ್ಚ್ ತಿಂಗಳಿಂದ ಬಳ್ಳಾರಿ, ಹೊಸಪೇಟೆ ಸೇರಿ ನಗರ, ಪಟ್ಟಣ ಪ್ರದೇಶಗಳ ಬೀದಿ ಬದಿಯಲ್ಲಿ ಹೂವು, ಹಣ್ಣು ಸೇರಿದಂತೆ ಇನ್ನಿತರೆ ಸಣ್ಣಪುಟ್ಟ ವಸ್ತುಗಳನ್ನು ಮಾರುವ ವ್ಯಾಪಾರಿಗಳಿಗೆ ಬಿಡಿಸಿಸಿ, ಬಳ್ಳಾರಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ ಜಿಲ್ಲೆಯಾದ್ಯಂತ ಒಟ್ಟು 2868 ವ್ಯಾಪಾರಿಗಳಿಗೆ ಒಟ್ಟೂ 82,96,500 ರೂ.ಗಳನ್ನು ಸಾಲ ನೀಡಲಾಗಿತ್ತು.
ಮರುಪಾವತಿ ಇಲ್ಲ: ಸಾಲ ಹಂಚಿಕೆಯಾಗಿದ್ದರೂ ಇದರಲ್ಲಿ ಬಹುತೇಕ ವ್ಯಾಪಾರಿಗಳಿಂದ ಸಾಲ ಮರುಪಾವತಿಯಾಗಿಲ್ಲ. ಶೇ.40 ರಷ್ಟು ವ್ಯಾಪಾರಿಗಳು ಮಾತ್ರ ಸಾಲ ಮರು ಪಾವತಿಸಿದ್ದು, ಶೇ.60 ರಷ್ಟು ವ್ಯಾಪಾರಿಗಳಿಂದ ಸಾಲ ಮರುಪಾವತಿಯಾಗಿಲ್ಲ. ಹೀಗಾಗಿ ಸಹಕಾರಿ ಬ್ಯಾಂಕ್‌ಗಳು ವ್ಯಾಪಾರಿಗಳಿಗೆ ಪುನಃ ಸಾಲ ನೀಡಬೇಕೋ ಬೇಡವೋ ಎಂಬ ಚಿಂತನೆ ನಡೆಸಿವೆ.
3 ರಿಂದ ಹತ್ತು ಸಾವಿರವರೆಗೆ ಸಾಲ: ಬಳ್ಳಾರಿ ನಗರದ 711, ಸಂಡೂರು 103, ಸಿರುಗುಪ್ಪ 171, ಕೊಟ್ಟೂರು 154, ಹಡಗಲಿ 167, ಹ.ಬೊ.ಹಳ್ಳಿ 241, ಕಂಪ್ಲಿ 210, ಹೊಸಪೇಟೆ 636, ಕೂಡ್ಲಿಗಿ 148, ಕುರುಗೋಡಿನ 90 ಮಂದಿ ಸೇರಿ ಒಟ್ಟು 2868 ಬೀದಿ ವ್ಯಾಪಾರಿಗಳಿಗೆ ಸಾಲ ನೀಡಲಾಗಿದೆ. ಇದರಲ್ಲಿ ಶೇ.40 ರಷ್ಟು ವ್ಯಾಪಾರಿಗಳಿಗೆ 10 ಸಾವಿರ ರೂ.ಗಳವರೆಗೆ, ಶೇ.60 ರಷ್ಟು ವ್ಯಾಪಾರಿಗಳಿಗೆ 3000-5000 ರೂ.ಗಳವರೆಗೆ ಸಾಲ ನೀಡಲಾಗಿದೆ. ಸಾಲ ಪಡೆದ ವ್ಯಾಪಾರಿಗಳ ಹೆಸರಲ್ಲಿ ಆಯಾ ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆ ಆರಂಭಿಸಲಾಗಿದೆ. ಸಾಲ ಪಡೆದವರು ಅಂದಿನ ಆದಾಯವನ್ನು ತಮ್ಮ ಖಾತೆಗಳಿಗೆ ಜಮಾಗೊಳಿಸಿದಲ್ಲಿ ಮೂರು ತಿಂಗಳಲ್ಲಿ ಬಡ್ಡಿರಹಿತವಾಗಿ ಸಾಲ ಮರು ಪಾವತಿಯಾಗಲಿದೆ. ನಂತರ ಖಾತೆಯಲ್ಲಿ ಉಳಿದ ಹಣಕ್ಕೂ ಬ್ಯಾಂಕ್‌ನಿಂದ ವರ್ಷಕ್ಕೆ ಶೇ.4ರಷ್ಟು ಬಡ್ಡಿ ನೀಡಲಾಗುತ್ತದೆ. ವ್ಯಾಪಾರಿಗಳಿಗೆ ಇಷ್ಟೆಲ್ಲ ಸೌಲಭ್ಯ ಕಲ್ಪಿಸಿದರೂ, ಸಾಲ ಮರುಪಾವತಿ ಮಾಡುತ್ತಿಲ್ಲ. ಕೇವಲ ಶೇ.40 ರಷ್ಟು ಮಾತ್ರ ಮರುಪಾವತಿಯಾಗಿದ್ದು, ಶೇ.60 ರಷ್ಟು ಬಾಕಿ ಉಳಿದಿರುವುದು ಸಹಕಾರಿ ಇಲಾಖೆ ಅಧಿಕಾರಿಗಳ ಬೇಸರಕ್ಕೆ ಕಾರಣವಾಗಿದೆ.
ಸಾಲಮನ್ನಾ ಭೀತಿ: ‘ಬಡವರ ಬಂಧು’ ಯೋಜನೆ ಘೋಷಿಸಿರುವ ಮೈತ್ರಿ ಸರ್ಕಾರ ಅದಕ್ಕೆ ಯಾವುದೇ ಅನುದಾನವನ್ನೂ ನೀಡಿಲ್ಲ. ಸ್ಥಳೀಯ ಬಿಡಿಸಿಸಿ ಬ್ಯಾಂಕ್ ಮತ್ತು ಬಳ್ಳಾರಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ ಸ್ಥಳೀಯ ಪಾಲಿಕೆ, ನಗರಸಭೆ, ಪಪಂ, ಪುರಸಭೆಯಲ್ಲಿ ಪರವಾನಗಿ ಪಡೆದ ವ್ಯಾಪಾರಿಗಳಿಗೆ ಮಾತ್ರ ಸಾಲ ನೀಡುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ನಿಗದಿತ 3 ಸಾವಿರ ವ್ಯಾಪಾರಿಗಳ ಗುರಿಯಲ್ಲಿ ಬಳ್ಳಾರಿ ಜಿಲ್ಲೆ ಶೇ.95 ರಷ್ಟು ಗುರಿ ತಲುಪಿದೆ. ಆದರೆ, ಸಮರ್ಪಕವಾಗಿ ಸಾಲ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಈ ಸಾಲವನ್ನೂ ಮನ್ನಾ ಮಾಡಲಾಗುತ್ತದೆಯೇ ಎಂಬ ಆತಂಕ ಬ್ಯಾಂಕ್‌ಗಳ ನಿರ್ದೇಶಕರನ್ನು ಕಾಡುತ್ತಿದೆ. ಹಾಗಾಗಿ ಮರುಪಾವತಿಸದ ವ್ಯಾಪಾರಿಗಳನ್ನು ಕೈಬಿಟ್ಟು, ನಿಗದಿತ ಅವಧಿಯಲ್ಲಿ ಮರುಪಾವತಿಸುವ ವ್ಯಾಪಾರಿಗಳಿಗಷ್ಟೇ ಎರಡನೇ ಹಂತದಲ್ಲಿ ಸಾಲ ನೀಡಲು ಚಿಂತನೆ ನಡೆಸಲಾಗುತ್ತಿದೆ.
ರಾಜ್ಯ ಸರ್ಕಾರ ಬೀದಿಬದಿ ವ್ಯಾಪಾರಿಗಳ ಆರ್ಥಿಕಾಭಿವೃದ್ಧಿ ಮತ್ತು ಖಾಸಗಿ ಲೇವಾದೇವಿದಾರರ ಬಡ್ಡಿಯಿಂದ ಮುಕ್ತಗೊಳಿಸುವ ಸಲುವಾಗಿ ಬಡವರ ಬಂಧು ಯೋಜನೆ ಜಾರಿಗೆ ತರಲಾಯಿತು. ಯೋಜನೆಯಡಿ ಕಳೆದ ಮಾರ್ಚ್ ತಿಂಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 2861 ವ್ಯಾಪಾರಿಗಳಿಗೆ ಒಟ್ಟು 82,96,500 ರೂ.ಗಳನ್ನು ಸ್ಥಳೀಯ ಡಿಸಿಸಿ, ಬಳ್ಳಾರಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನಿಂದ ಕೊಡಿಸಲಾಗಿದೆ. ಸಾಲ ಪಡೆದವರ ಪೈಕಿ ಶೇ.40 ರಷ್ಟು ಮಾತ್ರ ಮರುಪಾವತಿಯಾಗಿದೆ. ಬಳ್ಳಾರಿ ಜಿಲ್ಲೆಯ ಶೇ.95 ರಷ್ಟು ಗುರಿ ಸಾಧಿಸಿದ್ದು, ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ.
•ಸುನೀತಾ ಸಿದ್ರಾಮ್
ನಿಬಂಧಕರು, ಸಹಕಾರಿ ಇಲಾಖೆ, ಬಳ್ಳಾರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Kundapura: ಅಪ್ರಾಪ್ತ ವಯಸ್ಕಳ ಜತೆ ಸಂಪರ್ಕ; ಮದುವೆಯಾಗುವುದಾಗಿ ಮೋಸ; 20 ವರ್ಷ ಶಿಕ್ಷೆ
Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.