ಮದ್ಯದಂಗಡಿ ಪರವಾನಗಿ ರದ್ದತಿಗೆ ಒತ್ತಾಯ
Team Udayavani, Jul 19, 2019, 2:53 PM IST
ಹಾರೂಗೇರಿ: ಸ್ವಾಮಿ ವಿವೇಕಾನಂದ ನಗರಕ್ಕೆ ಹೊಂದಿಕೊಂಡಿರುವ ಮುಖ್ಯರಸ್ತೆಯಲ್ಲಿ ಮದ್ಯದಂಗಡಿ ಪ್ರಾರಂಭಿಸಲು ಅನುಮತಿ ನೀಡಬಾರದೆಂದು ಆಗ್ರಹಿಸಿ ಮಹಿಳಾ ಸಂಘಟನೆ ವತಿಯಿಂದ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಹಾರೂಗೇರಿ: ಸ್ವಾಮಿ ವಿವೇಕಾನಂದ ನಗರಕ್ಕೆ ಹೊಂದಿಕೊಂಡಿರುವ ಮುಖ್ಯರಸ್ತೆಯಲ್ಲಿ ಮದ್ಯದಂಗಡಿ ಪ್ರಾರಂಭಿಸಲು ಅನುಮತಿ ನೀಡಬಾರದೆಂದು ಆಗ್ರಹಿಸಿ ಮಹಿಳಾ ಸಂಘಟನೆ ಕಾರ್ಯಕರ್ತೆಯರು ಮುಖ್ಯಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದರು.
ಸ್ವಾಮಿ ವಿವೇಕಾನಂದ ನಗರದಲ್ಲಿ ಶ್ರೀರಾಘವೇಂದ್ರಸ್ವಾಮಿ ದೇವಸ್ಥಾನ, ಮಾಡರ್ನ್ ಕಾಲೇಜು, ಮಕ್ಕಳು ಹಾಗೂ ವಿದ್ಯಾರ್ಥಿನಿಯರು ಶಾಲಾ-ಕಾಲೇಜುಗಳಿಗೆ ತೆರಳುವ ಪ್ರಮುಖ ರಸ್ತೆಯಾಗಿದೆ. ಈ ಭಾಗದ ಮಹಿಳೆಯರು ಪಟ್ಟಣದ ಮಾರುಕಟ್ಟೆ, ದೇವಸ್ಥಾನಗಳಿಗೆ ಸಂಚರಿಸಲು ಮದ್ಯದಂಗಡಿಯಿಂದ ತೊಂದರೆಯಾಗಲಿದೆ. ನಿರಂಜನ ಶಿವಪ್ಪ ಬಾಗೇವಾಡಿ ಕಟ್ಟಡದಲ್ಲಿ ಪ್ರಾರಂಭವಾಗುತ್ತಿರುವ ಬಾರ್ ಮತ್ತು ರೆಸ್ಟೋರೆಂಟ್ನಿಂದ ಮಹಿಳೆಯರು ಮತ್ತು ಮಕ್ಕಳು ಭಯಭೀತರಾಗಿದ್ದಾರೆ. ಪುರಸಭೆ ಹಾಗೂ ಮೇಲಧಿಕಾರಿಗಳು ಕೂಡಲೇ ಮದ್ಯದಂಗಡಿ ಪರವಾನಿಗೆಯನ್ನು ರದ್ದು ಪಡಿಸಬೇಕೆಂದು ಆಗ್ರಹಿಸಿದರು.
ಶ್ರೀರಾಮಸೇನಾ ವಿಭಾಗೀಯ ಪ್ರಮುಖ ಗೋಪಾಲ ನಾಯಿಕ ಮಾತನಾಡಿ, ರಾಜ್ಯ ಹೆದ್ದಾರಿಯಿಂದ ಕನಿಷ್ಠ ಅರ್ಧ ಕಿಮೀ ಅಂತರದಲ್ಲಿ ಮದ್ಯದಂಗಡಿಗಳಿಗೆ ಅನುಮತಿ ನೀಡಬೇಕೆಂದು ಕಾನೂನವಿದ್ದರೂ ಮುಖ್ಯರಸ್ತೆ ಪಕ್ಕದಲ್ಲೇ ಪರವಾನಿಗೆ ನೀಡಲಾಗುತ್ತಿದೆ. ಒಂದು ವೇಳೆ ಅನುಮತಿ ನೀಡಿ, ಮದ್ಯದಂಗಡಿ ಪ್ರಾರಂಭವಾದಲ್ಲಿ ಸಾರ್ವಜನಿಕರೆಲ್ಲ ಸೇರಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯೆ ಲಲಿತಾ ಬದ್ನಿಕಾಯಿ, ಹವಶವ್ವ ಬದ್ನಿಕಾಯಿ, ಶಾಂತಾ ಆಲಗೂರ, ಸರಸ್ವತಿ ಶಿರಗಾಂವಕರ, ಸುರೇಖಾ ಹಿಪ್ಪರಗಿ, ಗಂಗವ್ವ ಸದಲಗಿ, ಸಿದ್ದವ್ವ ಯಲಶೆಟ್ಟಿ, ಬಾಳವ್ವ ಬಾಡಗಿ, ಶಿವಲೀಲಾ ಸಾಲಿಮಠ, ವೀಣಾ ಪಾಟೀಲ, ಕಸ್ತೂರಿ ಪತ್ತಾರ, ಸುಧಾ ದೇಶಪಾಂಡೆ, ಭೀಮು ಭಂಡಾರಿ, ಹಣಮಂತ ಯಲಶೆಟ್ಟಿ, ರಮೇಶ ನಾಟಿಕರ, ಶ್ರೀಕಾಂತ ದಟವಾಡ, ಸುರೇಶ ಶೇಡಬಾಳ, ಜೀವನ ಮಾನಕಾಪೂರೆ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.