600 ವರ್ಷಗಳಿಂದ ಉರಿಯತ್ತಿರುವ ಒಲೆ
Team Udayavani, Jul 20, 2019, 5:35 AM IST
ಅನ್ನ, ಅಕ್ಷರ, ಆಶ್ರಯ ನೀಡುವ ತ್ರಿವಿಧ ದಾಸೋಹಕ್ಕೆ ಶ್ರೀ ಸಿದ್ಧಗಂಗಾ ಮಠ ಜಗತøಸಿದ್ಧಿ. ಶ್ರೀ ಮಠದ ಪ್ರಸಾದ ಸೇವಿಸಲೆಂದೇ ದೂರ ದೂರದ ಊರುಗಳಿಂದ ಭಕ್ತರು ಆಗಮಿಸುತ್ತಾರೆ. ಕಳೆದ 600 ವರ್ಷಗಳಿಂದ ನಿತ್ಯವೂ ಭಕ್ತರ ಹಸಿವು ತಣಿಸುತ್ತಿರುವ ಶ್ರೀ ಕ್ಷೇತ್ರದ ಪ್ರಸಾದದ ಮಹಿಮೆ, ಹಲವು ವೈಶಿಷ್ಟéಗಳಿಂದ ಕೂಡಿದೆ.
ನಿತ್ಯ 10 ಸಾವಿರ ಜನರಿಗೆ ಪ್ರಸಾದ
ಅನ್ನ, ಜ್ಞಾನ, ಆಶ್ರಯಕ್ಕೆ ಹೆಸರಾಗಿರುವ ಕ್ಷೇತ್ರದಲ್ಲಿ ಅಕ್ಷರ ದಾಸೋಹ ಪಡೆಯಲು ನಾಡಿನ ವಿವಿಧ ಭಾಗಗಳಿಂದ ಜಾತಿ, ಮತ, ಪಂಥ, ಬೇಧವಿಲ್ಲದೆ, ಸಾವಿರಾರು ಬಡ ಕುಟುಂಬದ ಮಕ್ಕಳು ಶ್ರೀಗಳ ಮಾರ್ಗದರ್ಶನದಲ್ಲಿ ಮಠದ ಶಾಲೆಗೆ ಸೇರಿ, ಶಿಕ್ಷಣ ಪಡೆಯುತ್ತಾರೆ. ನಿತ್ಯ 10 ಸಾವಿರ ವಿದ್ಯಾರ್ಥಿಗಳು ಮತ್ತು ಭಕ್ತರಿಗೆ ಪ್ರಸಾದ ವ್ಯವಸ್ಥೆ ಇರುತ್ತೆ.
ಅಕ್ಕಿ- ತರಕಾರಿ ಎಷ್ಟು ಬೇಕು?
ಮಠದ ವಿದ್ಯಾರ್ಥಿಗಳು ಮತ್ತು ಬರುವ ಭಕ್ತರು ಸೇರಿದಂತೆ 10 ಸಾವಿರ ಜನರಿಗೆ ಬೆಳಗಿನ ಉಪಾಹಾರ, ಎರಡು ಹೊತ್ತಿನ ಊಟ, ಹಬ್ಬ ಹರಿದಿನ ಬಿಟ್ಟು ಪ್ರತಿದಿನ ಅಕ್ಕಿ 26 ಕ್ವಿಂಟಲ್, ರಾಗಿಹಿಟ್ಟು 8 ಕ್ವಿಂಟಲ್, ತೊಗರಿಬೇಳೆ 3 ಕ್ವಿಂಟಲ್, ಈರುಳ್ಳಿ 2 ಕ್ವಿಂಟಲ್, ಉಪ್ಪಿಟ್ಟಿನ ರವೆ 4 ಕ್ವಿಂಟಲ್, ಉಪ್ಪು 50 ಕೆ.ಜಿ., ಸಾಂಬಾರು ಪುಡಿ, ಖಾರದ ಪುಡಿ ಕೆ.ಜಿ. ಕೆಜಿ, ಹುಣಸೇಹಣ್ಣು 60 ಕೆ.ಜಿ., ಮೆಣಸಿನಕಾಯಿ 25 ಕೆ.ಜಿ., ಹಾಲು (ಮಜ್ಜಿಗೆಗೆ) 300 ಲೀಟರ್, ಕಡಲೇಕಾಯಿ ಎಣ್ಣೆ 80 ಕೆ.ಜಿ., ತೆಂಗಿನಕಾಯಿ 150 ಅಡುಗೆಗೆ ಬಳಕೆ.
ಬಾಣಸಿಗರೆಷ್ಟು?
ಇಲ್ಲಿ ಹತ್ತಾರು ಸಾವಿರ ಮಂದಿಯ ಅಡುಗೆಗೆ ಇರೋದು ಕೇವಲ 12 ಬಾಣಸಿಗರು! ವಿಶೇಷ ದಿನಗಳಲ್ಲಿ ಹೆಚ್ಚುವರಿ ಬಾಣಸಿಗರು ಇರುತ್ತಾರೆ. ವಿವಿಧ ಗ್ರಾಮಗಳಿಂದ ಬಂದ ಭಕ್ತರೂ ಅಡುಗೆ ಕೆಲಸದಲ್ಲಿ ಕೈ ಜೋಡಿಸುತ್ತಾರೆ. ಪ್ರತಿನಿತ್ಯ ಸುತ್ತಮುತ್ತ ಗ್ರಾಮಗಳ 20ಕ್ಕೂ ಹೆಚ್ಚು ಮಹಿಳೆಯರು, ವೃದ್ಧರು, ತರಕಾರಿಯನ್ನು ಹೆಚ್ಚಿಕೊಡುತ್ತಾರೆ.
ಭಲೇ, ಸ್ಟೀಮ್ ಒಲೆ!
25 ನಿಮಿಷಗಳಲ್ಲಿ ಒಂದೂವರೆ ಕ್ವಿಂಟಲ್ ಅನ್ನ ಮಾಡುವ ಸಾಮರ್ಥ್ಯದ 6 ಸ್ಟೀಮ್ ಬಾಯ್ಲರ್‌ಗಳಿವೆ. ಒಂದು ಡ್ರಮ್‌ನಲ್ಲಿ 25 ಕೆ.ಜಿ. ಅನ್ನ ಸಿದ್ಧವಾಗುತ್ತೆ. 1500 ಲೀಟರ್ ಸಾಂಬರ್ ತಯಾರಿಸುವ ಸ್ಟೀಮ್ ಡ್ರಮ್‌ಗಳು ಇಲ್ಲಿವೆ.
ಭಕ್ಷ್ಯವೇನು?
ರಾಗಿಮುದ್ದೆ ಇಲ್ಲಿ ಪ್ರಸಿದ್ಧಿ. ಅನ್ನ ತರಕಾರಿ ಸಾಂಬರ್, ಉಪ್ಪಿನಕಾಯಿ, ಪಲ್ಯ, ಪಾಯಸ, ಮಜ್ಜಿಗೆ ನಿತ್ಯದ ಊಟದ ಭಾಗ. ಬೆಳಗಿನ ಉಪಹಾರಕ್ಕೆ ಉಪ್ಪಿಟ್ಟು, ತರಕಾರಿ ಪಲಾವ್, ಟೊಮೇಟೊ ಬಾತ್ ಇರುತ್ತೆ. ಜಾತ್ರಾ, ಉತ್ಸವಗಳಲ್ಲಿ ಮಾಲ್ದಿ ಊಟಕ್ಕೆ ಭಕ್ತರು ಮುಗಿಬೀಳುತ್ತಾರೆ.
ನಿಮ್ಗೆ ಗೊತ್ತಾ?
– ಶ್ರೀ ಅಟವಿ ಮಹಾಸ್ವಾಮಿಗಳು, ಕ್ಷೇತ್ರದಲ್ಲಿ ಶಿವಯೋಗಾನುಷ್ಠಾನವನ್ನು ನಡೆಸಿ, ಅಂದು ಹಚ್ಚಿದ ಒಲೆ ಇಂದಿಗೂ ಆರಿಲ್ಲ.
– ಮಠಕ್ಕೆ ಬಂದವರು ಹಸಿದು ಹೋಗುವಂತಿಲ್ಲ, ಪ್ರಸಾದ ಸೇವಿಸಿಯೇ ತೆರಳಬೇಕು.
– ರಾಜ್ಯದ ವಿವಿಧ ಭಾಗಗಳಿಂದ ಭಕ್ತರು, ದಾಸೋಹಕ್ಕೆ ಬೇಕಾದ ಸಾಮಗ್ರಿಗಳನ್ನು ಲೋಡುಗಟ್ಟಲೇ ಕಳಿಸುತ್ತಾರೆ.
– ಹಿಂದೊಮ್ಮೆ ಭೀಕರ ಬರಗಾಲ ಸಂಭವಿಸಿದ್ದಾಗ, ಶ್ರೀ ಶಿವಕುಮಾರ ಮಹಾಸ್ವಾಮಿಗಳು ಭಿûಾಟನೆ ಮಾಡಿ ಮಠಕ್ಕೆ ಹಸಿದು ಬರುವ ಭಕ್ತರಿಗೆ ನಿತ್ಯ ಪ್ರಸಾದ ವ್ಯವಸ್ಥೆ ಮಾಡಿದ್ದರು. ಇಂದಿಗೂ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಮಹಾ ಸ್ವಾಮಿಗಳು ಜಾತ್ರೆಯ ವೇಳೆಯಲ್ಲಿ ಜೋಳಿಗೆ ಹಿಡಿದು ಭಿûಾಟನೆ ಮಾಡುತ್ತಾರೆ.
ಶ್ರೀಮಠದ ಭೋಜನ ಪ್ರಸಾದ ಸವಿಯಲೆಂದೇ, ದೂರದ ಊರುಗಳಿಂದ ಭಕ್ತಾದಿಗಳು ಬರುತ್ತಾರೆ. ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಎಲ್ಲವನ್ನೂ ಸುಸೂತ್ರವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.
– ರೇಣುಕಾರಾಧ್ಯ, ಸಿದ್ಧಗಂಗಾ ಮಠ
ಸಂಖ್ಯಾ ಸೋಜಿಗ
3- ಲಕ್ಷ ಭಕ್ತರಿಂದ, ಜಾತ್ರೆ ವೇಳೆ ಭೋಜನ ಸೇವನೆ
10- ಸಾವಿರ ಭಕ್ತರಿಗೆ ನಿತ್ಯ ದಾಸೋಹ
12- ಬಾಣಸಿಗರಿಂದ ಅಡುಗೆ ತಯಾರಿ
25- ನಿಮಿಷದಲ್ಲಿ ಒಂದೂವರೆ ಕ್ವಿಂಟಲ್ ಅನ್ನ!
26- ಕ್ವಿಂಟರ್ ಅಕ್ಕಿಯಿಂದ ನಿತ್ಯ ಅಡುಗೆ
300- ಲೀಟರ್ ನಿತ್ಯ ಬಳಕೆಯಾಗುವ ಹಾಲು
1500- ಲೀ. ಸಾಂಬಾರು ತಯಾರಿಸುವ ಸ್ಟೀಮ್ ಡ್ರಮ್
ದೇವರ ಪಾಕಶಾಲೆ
– ಶ್ರೀ ಕ್ಷೇತ್ರ ಸಿದ್ಧಗಂಗಾ ಮಠ, ತುಮಕೂರು
– ಚಿ.ನಿ. ಪುರುಷೋತ್ತಮ್
– ಚಿತ್ರಗಳು: ಟಿ.ಎಚ್. ಸುರೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.