ವರ್ಣ ಕುಟೀರ
ಚಿತ್ರಕಲಾ ಪರಿಷತ್‌ನಲ್ಲಿ ಕರಕುಶಲ ಕಲರವ
Team Udayavani, Jul 20, 2019, 5:00 AM IST
ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಕುಟೀರ ನಿರ್ಮಾಣವಾಗಿದೆ. ಹಾಗಂತ, ಅಲ್ಯಾರೋ ಋಷಿಮುನಿಗಳು ಧ್ಯಾನಕ್ಕೆ ಕುಳಿತಿದ್ದಾರೆ ಅಂದುಕೊಳ್ಳಬೇಡಿ. ನಾವು ಹೇಳುತ್ತಿರೋದು, ಪರ್ಣ ಕುಟೀರವಲ್ಲ. ಅಲ್ಲಿರುವುದು ವರ್ಣ ಕುಟೀರ. ಸಿಕೆಪಿಯಲ್ಲಿ, ಕರ್ನಾಟಕ ಕರಕುಶಲ ಮಂಡಳಿ ವತಿಯಿಂದ ಕರಕುಶಲ ವಸ್ತುಗಳ ಮಾರಾಟ ಹಾಗೂ ಪ್ರದರ್ಶನ- ಕುಟೀರ-2019’ ನಡೆಯುತ್ತಲಿದೆ. ಈ ಬಾರಿಯ ಉತ್ಸವದಲ್ಲಿ ದೇಶಾದ್ಯಂತದ 40 ಕರಕುಶಲ ಸಂಸ್ಥೆಗಳು ಭಾಗವಹಿಸಿದ್ದು, ಉತ್ತಮ ಗುಣಮಟ್ಟದ, ಸಾಂಪ್ರದಾಯಿಕ ಮತ್ತು ಸಮಕಾಲೀನ ಶೈಲಿಯ ಉತ್ಪನ್ನಗಳು ಮತ್ತು ಆಕ್ಸೆಸರಿಗಳು ಮಾರಾಟಕ್ಕಿವೆ.
ಏನು ವಿಶೇಷ?
ಫಾಡ್ ಮತ್ತು ಪಿಚ್‌ವಾಯ್ ಪೇಂಟಿಂಗ್‌ಗಳು, ಗೊಂಡ್ ಚಿತ್ರಕಲೆಗಳು, ನಾಗಾಲ್ಯಾಂಡ್‌ನ ಟ್ರೆಬಲ್ ಜ್ಯುವೆಲ್ಲರಿಗಳು, ರಾಷ್ಟ್ರೀಯ ಪ್ರಶಸ್ತಿ ವಿಜೇತ ಕಲಾವಿದರ ಕಲಂಕಾರಿ ಬಟ್ಟೆಗಳು, ಆಂಧ್ರದ ಇಕ್ಕತ್ ಮತ್ತು ಹ್ಯಾಂಡ್‌ಲೂಮ್ ವಸ್ತ್ರಗಳು, ಗುಜರಾತ್‌ನ ಅಜ್ರಕ್ ಯಾರ್ಡಿಜ್, ಬಿದಿರು ಮತ್ತು ಹುಲ್ಲಿನ ಗೃಹಾಲಂಕಾರ ವಸ್ತುಗಳು ಮತ್ತು ಆಕ್ಸೆಸರಿಗಳು, ಗುಜರಾತ್‌ನ ಮತಾನಿಪಚಡಿ, ಪಶ್ಚಿಮ ಬಂಗಾಳದ ಮಸ್‌ಲ್ಯಾಂಡ್ ಮ್ಯಾಟ್‌ಗಳು, ರಾಜಸ್ಥಾನದ ಮಿನಿಯೇಚರ್ ಪೇಂಟಿಂಗ್‌ಗಳು, ಆಪ್ಲಿಕ್ ಕಲೆಯ ಹೊದಿಕೆಗಳು, ಟೆರ್ರಾಕೋಟಾ, ಸೆರಾಮಿಕ್ ಮಡಕೆಗಳು, ಭುಜ್‌ನ ಶಾಲ್‌ಗಳು, ಒರಿಸ್ಸಾದ ಪಠಚಿತ್ರ ಮತ್ತು ಇಕತ್ ವಸ್ತ್ರಗಳು, ಪುಂಜಾ ದರೀಸ್ ಹೀಗೆ, ಹಿಂದಿಗಿಂತಲೂ ವೈವಿಧ್ಯಮಯ ಕರಕುಶಲ ವಸ್ತುಗಳು ಈ ಬಾರಿಯ ಮೇಳದಲ್ಲಿ ಮೇಳೈಸಿವೆ. ಕರಕುಶಲಕರ್ಮಿಗಳಿಗೆ ಮಾರುಕಟ್ಟೆಯನ್ನು ಒದಗಿಸುವ ಮೂಲಕ ಅವರಿಗೆ ಪ್ರೋತ್ಸಾಹ ನೀಡುವುದು ಹಾಗೂ ಗ್ರಾಹಕರು-ಕರಕುಶಲ ಕರ್ಮಿಗಳ ನಡುವೆ ಸೇತುವೆಯಾಗುವುದು ಕುಟೀರದ ಉದ್ದೇಶ.
ಎಲ್ಲಿ?: ಗ್ಯಾಲರಿ 3-4, ಕರ್ನಾಟಕ ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ
ಯಾವಾಗ?: ಜು.20-25, ಬೆಳಗ್ಗೆ 10.30-7.30
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.