ಅಂತರ್ಜಲ ಹೆಚ್ಚಿಸುವ ಕೃಷಿ ಹೊಂಡಗಳಿಗೆ ಭಾರೀ ಬೇಡಿಕೆ
ಮಳೆ ನೀರು ಹಿಡಿದಿಟ್ಟುಕೊಳ್ಳಲು ರೈತರ ಪ್ರಯತ್ನ
Team Udayavani, Jul 20, 2019, 5:28 AM IST
ಕೃಷಿ ಹೊಂಡ.
ಉಡುಪಿ: ಮಳೆ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕರಾವಳಿಯ ರೈತರು ಬಿದ್ದ ಮಳೆನೀರನ್ನು ಸಾಧ್ಯವಾದಷ್ಟು ಉಳಿಸಿಕೊಳ್ಳುವ ಮತ್ತು ಇಂಗಿಸುವ ಯತ್ನದಲ್ಲಿ ತೊಡಗಿದ್ದಾರೆ. ಇದಕ್ಕಾಗಿ ಕೃಷಿ ಹೊಂಡ ಯೋಜನೆಗೆ ಕರಾವಳಿಯ ರೈತರಿಂದಲೂ ಬೇಡಿಕೆ ಹೆಚ್ಚುತ್ತಿದೆ.
ಕಾರ್ಕಳ, ಮೂಡಬಿದಿರೆ ಅತ್ಯಧಿಕ
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಹಾಗೂ ದ.ಕ ಜಿಲ್ಲೆಯ ಮೂಡಬಿದಿರೆ ತಾಲೂಕುಗಳ ರೈತರಿಂದ ಕೃಷಿ ಹೊಂಡಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ.
ಅವಿಭಜಿತ ದ.ಕ ಜಿಲ್ಲೆಯಲ್ಲಿ ನಿಗದಿತ ಗುರಿಗಳಿಗಿಂತ ಹೆಚ್ಚಿನ ಅರ್ಜಿಗಳು ಬರುತ್ತಿವೆ. ಈ ಸಾಲಿನಲ್ಲಿ ಉಡುಪಿ ಜಿಲ್ಲೆಯಲ್ಲಿ 300 ಕೃಷಿ ಹೊಂಡಗಳ ನಿರ್ಮಾಣದ ಗುರಿ ಹೊಂದಲಾಗಿತ್ತು. ಆದರೆ ಇಷ್ಟರಲ್ಲೇ 250ಕ್ಕೂ ಅಧಿಕ ಅರ್ಜಿಗಳು ಬಂದಿವೆ. ಈ ಪೈಕಿ 102 ಕೃಷಿ ಹೊಂಡಗಳು ನಿರ್ಮಾಣ ಈಗಾಗಲೇ ಪೂರ್ಣಗೊಂಡಿವೆ. ದ.ಕ. ಜಿಲ್ಲೆಯಲ್ಲಿ ಕಳೆದ ವರ್ಷ 480 ಕೃಷಿ ಹೊಂಡಗಳ ನಿರ್ಮಾಣವಾಗಿವೆ. ಈ ಬಾರಿ 709 ಕೃಷಿ ಹೊಂಡಗಳ ಗುರಿ ನಿಗದಿಪಡಿಸಿದ್ದು ಈ ವರ್ಷ ಮೂಡಬಿದಿರೆ ಒಂದು ತಾಲೂಕಿನಿಂದಲೇ ಇದುವರೆಗೆ 127 ಅರ್ಜಿಗಳು ಬಂದಿವೆ.
ಎರಡು ವಿಧ
ಕೃಷಿ ಹೊಂಡಗಳನ್ನು ಕೃಷಿ ಭಾಗ್ಯ ಯೋಜನೆಯಡಿ ನಿರ್ಮಿಸಲಾಗುತ್ತದೆ. ಮಳೆ ನೀರನ್ನು ಸಂಗ್ರಹಿಸಿ ಅದನ್ನು ಕೃಷಿಗೆ ಉಪಯೋಗಿಸುವುದು, ನೀರಿಂಗಿಸಿ ಅಂತರ್ಜಲ ಹೆಚ್ಚಿಸುವುದು ಇದರ ಉದ್ದೇಶ. ಹೊಂಡಗಳ ತಳಭಾಗಕ್ಕೆ ಪಾಲಿಥೀನ್ ಹಾಕಿ ನೀರು ಸಂಗ್ರಹಿಸಿ ಅದನ್ನು ಪಂಪ್ ಮೂಲಕ ಕೃಷಿ ಭೂಮಿಗೆ ಹಾಯಿಸುವುದು ಒಂದು ವಿಧಾನವಾದರೆ, ಪಾಲಿಥೀನ್‌ನ್ನು ಬಳಸದೆ ಹೊಂಡದಲ್ಲಿಯೇ ನೀರು ಸಂಗ್ರಹಿಸಿ ಅದನ್ನು ಭೂಮಿಗೆ ಇಂಗಿಸಿ ಪಕ್ಕದ ನೀರಿನ ಮೂಲಗಳ (ತೆರೆದಬಾವಿ, ಕೊಳವೆ ಬಾವಿ)ಜಲಮಟ್ಟವನ್ನು ಹೆಚ್ಚಿಸುವುದು, ಅಂತರ್ಜಲ ಹೆಚ್ಚಿಸುವುದು ಇನ್ನೊಂದು ರೀತಿ. ಕರಾವಳಿ ಭಾಗದಲ್ಲಿ ಇವೆರಡೂ ಕೂಡ ಪ್ರಚಲಿತದಲ್ಲಿವೆ. ಆದರೆ ಪಾಲಿಥೀನ್ ಬಳಕೆ ಕಡಿಮೆ. 7×7ಗಿ3, 10x10x3, 12x12x3, 15x15x3, 18x18x3, 21x21x3 (ಮೀಟರ್‌ಗಳು) ಅಳತೆಯಲ್ಲಿ ಹೊಂಡ ಗಳನ್ನು ನಿರ್ಮಿಸಬಹುದು. ನೀರು ಆವಿಯಾಗಿ ಹೋಗದಂತೆ ಕಾಪಾಡಲು ಹೊದಿಕೆಯೂ ದೊರೆಯುತ್ತದೆ.
2 ತಿಂಗಳು ಖಾತರಿ
ಮಳೆ ನೀರು ಸಂಗ್ರಹಕ್ಕಾಗಿ ಮಾಡುವ ಹೊಂಡಗಳಿಂದ (ಪಾಲಿಥೀನ್ ಹಾಕಿದ) ಮಳೆ ಮುಗಿದು ಕನಿಷ್ಠ 2 ತಿಂಗಳವರೆಗೂ ನೀರು ಸಂಗ್ರಹಿಸಿಡಬಹುದು. ಜಮೀನಿನ ವಿಸ್ತೀರ್ಣ, ನೀರಿನ ಬಳಕೆಯ ಪ್ರಮಾಣವನ್ನು ಇದು ಅವಲಂಬಿಸಿದೆ ಎನ್ನುತ್ತಾರೆ ದ.ಕ ಜಿಲ್ಲಾ ತೋಟಗಾರಿಕಾ ಇಲಾಖೆಯ ಅಧಿಕಾರಿ ಎಚ್.ಆರ್. ನಾಯಕ್ ಅವರು.
ಹೊಂಡ ಬೇಕು, ಪಾಲಿಥೀನ್ ಬೇಡ
ಮಳೆ ನೀರು ಇಂಗಿಸಲು, ಅಂತರ್ಜಲ ಹೆಚ್ಚಿಸಿಕೊಳ್ಳಲು ಕೃಷಿ ಹೊಂಡಗಳು ತುಂಬಾ ಸಹಕಾರಿಯಾಗುತ್ತವೆ. ಇದರಿಂದ ಪಕ್ಕದ ಬಾವಿಗಳಲ್ಲಿ ಬೇಸಗೆ ಪೂರ್ತಿ ನೀರು ಇರುತ್ತದೆ. ಆದರೆ ಹೊಂಡಗಳಲ್ಲಿ ಪಾಲಿಥೀನ್ ಹಾಕಿ ನೀರು ಸಂಗ್ರಹಿಸುವುದು ಕರಾವಳಿ ಭಾಗದಲ್ಲಿ ಸಾಧ್ಯವಾಗುತ್ತಿಲ್ಲ.
ಅಡಿಭಾಗದಲ್ಲಿ ಒರತೆ ಬರುವುದರಿಂದ, ಬಿಸಿಲು ಹೆಚ್ಚಿರುವುದರಿಂದ ಪಾಲಿಥೀನ್ ಬಾಳಿಕೆ ಬರುವುದಿಲ್ಲ. ಪಾಲಿಥೀನ್ ಹಾಕದೆ ಮಾಡುವ ಕೃಷಿ ಹೊಂಡಗಳಿಂದ ನೀರಿಂಗಿಸುವಿಕೆ ಯಶಸ್ವಿಯಾಗುತ್ತಿದೆ ಎನ್ನುವುದು ಕೃಷಿ ಹೊಂಡ ಹೊಂದಿರುವ ಹಲವಾರು ಮಂದಿ ರೈತರ ಅನುಭವ.
ಇಂದು ಮಾಹಿತಿ ಕಾರ್ಯಾಗಾರ
ಜಲ ಸಂರಕ್ಷಣೆ ಅಭಿಯಾನದ ಭಾಗವಾಗಿ ಮಳೆಕೊಯ್ಲು ಮಾಹಿತಿ ಕಾರ್ಯಾಗಾರವನ್ನು “ಉದಯವಾಣಿ’ಯು ಜಿಲ್ಲಾಡಳಿತ, ಜಿ.ಪಂ, ನಿರ್ಮಿತಿ ಕೇಂದ್ರ, ಎಂಜಿಎಂ ಕಾಲೇಜಿನ ಸಹಭಾಗಿತ್ವದಲ್ಲಿ ಜು.20ರ ಬೆಳಗ್ಗೆ 9.30ಕ್ಕೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಸಲಿದೆ. ಕಾರ್ಯಕ್ರಮದಲ್ಲಿ ಜಲತಜ್ಞ ಶ್ರೀ ಪಡ್ರೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಾರ್ವಜನಿಕರೂ ಇದರಲ್ಲಿ ಮುಕ್ತವಾಗಿ ಭಾಗವಹಿಸಬಹುದಾಗಿದ್ದು ಮಾಹಿತಿಗಳನ್ನು ಪಡೆದುಕೊಳ್ಳಬಹುದು.
ವೈಜ್ಞಾನಿಕ ರೀತಿಯಲ್ಲಿ ರಚನೆಯಾಗಲಿ
ಕೃಷಿ ಹೊಂಡ (ಪಾಲಿಥೀನ್ ರಹಿತ)ದಿಂದ ಅಂತರ್ಜಲ ಮಟ್ಟ ಹೆಚ್ಚುವುದು ಸ್ಪಷ್ಟ. ಆದರೆ ಕೃಷಿ ಹೊಂಡಗಳನ್ನು ವೈಜ್ಞಾನಿಕ ಮಾದರಿಯಲ್ಲಿಯೇ ರಚಿಸಬೇಕು. ಅಧಿಕಾರಿಗಳು ಅದು ಯಾವ ಜಾಗಕ್ಕೆ ಸೂಕ್ತ ಎಂಬುದನ್ನು ನಿರ್ಧರಿಸಿ ಅಂಥ ಜಾಗದಲ್ಲೇ ರಚಿಸಬೇಕು.
-ಕುದಿ ಶ್ರೀನಿವಾಸ ಭಟ್, ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಕೃಷಿಕ ಸಂಘ
ಗುರಿ ಮೀರಿ ಬೇಡಿಕೆ
ಮಳೆ ನೀರು ಕೊಯ್ಲು ಮಾಡಿ ಭೂಮಿಯಲ್ಲಿ ಇಂಗಿಸಿ ಅಂತರ್ಜಲ ಹೆಚ್ಚಿಸಲು ಕೃಷಿಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳನ್ನು ಮಾಡಲಾಗುತ್ತಿದೆ. ನೀರಿಂಗಿಸುವುದು ಮುಖ್ಯ ಉದ್ದೇಶ. ಮಾರ್ಚ್‌ಗೆ ಬತ್ತಿ ಹೋಗುತ್ತಿದ್ದ ಕೆಲವು ಬಾವಿಗಳಲ್ಲಿ ಇಂಥ ಕೃಷಿ ಹೊಂಡಗಳಿಂದಾಗಿ ಮೇ ವರೆಗೂ ನೀರಿತ್ತು. ಕೃಷಿ ಹೊಂಡಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಕಳೆದ ವರ್ಷ ಉಡುಪಿ ಜಿಲ್ಲೆಯಲ್ಲಿ 325 ಗುರಿ ಇತ್ತು. ಅದನ್ನು ಮೀರಿ 354 ಹೊಂಡಗಳ ರಚನೆ ಆಗಿತ್ತು. ಈ ಬಾರಿಯೂ ಬೇಡಿಕೆ ಹೆಚ್ಚಿದೆ.
-ಸತೀಶ್, ತಾಂತ್ರಿಕ ಅಧಿಕಾರಿ
ಕೃಷಿ ಇಲಾಖೆ, ಉಡುಪಿ
ಯಾವ ತಾಲೂಕಿನಲ್ಲಿ ಎಷ್ಟು?
2017-18
ಉಡುಪಿ 150
ಕುಂದಾಪುರ 191
ಕಾರ್ಕಳ 231
2018-19
ಉಡುಪಿ 134
ಕುಂದಾಪುರ 96
ಕಾರ್ಕಳ 124
2019-20(ಇದುವರೆಗೆ)
ಉಡುಪಿ 21
ಕುಂದಾಪುರ 31
ಕಾರ್ಕಳ 50
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chinnaswamy Stadium: ಚಿನ್ನಸ್ವಾಮಿ ಸ್ಟಾಂಡ್‌ಗಳಿಗೆ ದಿಗ್ಗಜರ ಹೆಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.