7 ವಿಶ್ವಾಸ ಮತ, 12 ಅವಿಶ್ವಾಸ ನಿರ್ಣಯಕ್ಕೆ ಸಾಕ್ಷಿಯಾದ ಕರ್ನಾಟಕ
Team Udayavani, Jul 20, 2019, 5:00 AM IST
ಮಣಿಪಾಲ: ರಾಜ್ಯದ ಇತಿಹಾಸದಲ್ಲಿ ಒಟ್ಟು 7 ಬಾರಿ ವಿಶ್ವಾಸ ಮತಯಾಚನೆ/ 12 ಬಾರಿ ಅವಿಶ್ವಾಸ ಮತ ನಿರ್ಣಯಗಳು ಮಂಡನೆಯಾಗಿವೆ. ಅವುಗಳಲ್ಲಿ ಕೆಲವರು ಉತ್ತೀರ್ಣರಾದರೆ, ಕೆಲವರು ಸರಕಾರವನ್ನು ಕಳೆದುಕೊಂಡಿದ್ದರು. ಈ ಬಾರಿಯ ಪ್ರಸ್ತಾವಿತ ವಿಶ್ವಾಸ ಮತಯಾಚನೆ 8ನೇಯದ್ದು.
ಮೊದಲ ವಿಶ್ವಾಸ ಮತ
ರಾಜ್ಯ ಮೊದಲ ವಿಶ್ವಾಸ ಮತಕ್ಕೆ ಸಾಕ್ಷಿ ಯಾಗಿದ್ದು, 9ನೇ ವಿಧಾನಸಭೆಯಲ್ಲಿ. 25 ಅಕ್ಟೋಬರ್ 1990ರಲ್ಲಿ ಮುಖ್ಯಮಂತ್ರಿ ಯಾಗಿದ್ದ ಎಸ್. ಬಂಗಾರಪ್ಪ ಅವರು ಸದನದ ವಿಶ್ವಾಸ ಯಾಚಿಸಿದ್ದರು.
ಎರಡನೇ ವಿಶ್ವಾಸ ಮತ
1998ರ ಜನವರಿ 27ರಂದು 10ನೇ ವಿಧಾನಸಭೆಯಲ್ಲಿ ಅಂದಿನ ಮುಖ್ಯ ಮಂತ್ರಿ ಜೆ.ಎಚ್. ಪಟೇಲ್ ಅವರು ವಿಶ್ವಾಸಮತಯಾಚನೆ ನಡೆಸಿದ್ದರು.
3ನೇ ವಿಶ್ವಾಸ ಮತಯಾಚನೆ
2 ವಿಶ್ವಾಸ ಮತಯಾಚನೆ ಪ್ರಸಂಗಗಳಿಗೆ 12ನೇ ವಿಧಾನಸಭೆ ಸಾಕ್ಷಿಯಾಗಿತ್ತು. ಧರಂ ಸಿಂಗ್ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಾಸು ಪಡೆದಿದ್ದ ಜೆಡಿಎಸ್ ಮತ್ತೆ ಕುಮಾ ರಸ್ವಾಮಿ ನೇತೃತ್ವದಲ್ಲಿ ಸರಕಾರ ರಚಿಸಿತ್ತು. ಈ ಸಂದರ್ಭ ಫೆಬ್ರವರಿ 2, 2007ರಲ್ಲಿ ಜೆಡಿಎಸ್ ವಿಶ್ವಾಸ ಮತಯಾಚಿಸಿತ್ತು.
4ನೇ ವಿಶ್ವಾಸ ಮತ
2007ರಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸದನದ ವಿಶ್ವಾಸ ಮತಯಾಚಿಸಿತ್ತು. ಇದು 12ನೇ ವಿಧಾನಸಭೆಯೂ ಹೌದು.
13ನೇ ವಿಧಾನಸಭೆ
13ನೇ ವಿಧಾನಸಭೆ 5 ವರ್ಷದಲ್ಲಿ 3 ವಿಶ್ವಾಸ ಮತ ಯಾಚನೆಗೆ ಸಾಕ್ಷಿಯಾಗಿತ್ತು. ಜೂನ್ 5, 2008, 11 ಅಕ್ಟೋಬರ್ 2010, 14 ಅಕ್ಟೋಬರ್ 2010ರಲ್ಲಿ ಅಂದು ಮಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ 3 ಬಾರಿ ವಿಶ್ವಾಸ ಮತ ಯಾಚಿಸಿದ್ದರು.
12 ಅವಿಶ್ವಾಸ ನಿರ್ಣಯಗಳು
ಮೊದಲ ಅವಿಶ್ವಾಸ ನಿರ್ಣಯ
ಬಿ.ಡಿ. ಜತ್ತಿ ಅವರ ಸರಕಾರ ವಿರುದ್ಧ 1961ರಲ್ಲಿ ಮೊದಲ ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸಲಾಗಿತ್ತು. ಅದು 2ನೇ ವಿಧಾನಸಭೆ ಅವಧಿಯಲ್ಲಿ.
3ನೇ ವಿಧಾನ ಸಭೆಯಲ್ಲಿ 4 ಬಾರಿ ಅವಿಶ್ವಾಸ ನಿರ್ಣಯ
ಎಸ್. ನಿಜಲಿಂಗಪ್ಪ ಅವರು ಸಿಎಂ ಆಗಿದ್ದ 3ನೇ ವಿಧಾನಸಭೆ 4 ಬಾರಿ ಅವಿಶ್ವಾಸ ನಿರ್ಣಯ ಮಂಡನೆಯಾಗಿತ್ತು. 21 ಸೆಪ್ಟೆಂಬರ್ 1962, ಅಕ್ಟೋಬರ್ 5, 1963, ಜನವರಿ 18, 1965, ನವೆಂಬರ್ 24, 1966ರಲ್ಲಿ ನಿಜಲಿಂಗಪ್ಪ ಅವರು ಅವಿಶ್ವಾಸ ನಿರ್ಣಯ ಎದುರಿಸಿದ್ದರು.
4ನೇ ವಿಧಾನಸಭೆಯಲ್ಲಿ 2 ಬಾರಿ
ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿಯಾಗಿದ್ದ 4ನೇ ವಿಧಾನಸಭೆ 2 ಅವಿಶ್ವಾಸ ನಿರ್ಣ ಯಗಳನ್ನು ಎದುರಿಸಿತ್ತು. ಡಿಸೆಂಬರ್ 18, 1967 ಮತ್ತು 21 ಜನವರಿ 1969ರಲ್ಲಿ ಗೊತ್ತುವಳಿ ಮಂಡನೆಯಾಗಿತ್ತು.
9ನೇ ವಿಧಾನಸಭೆಯಲ್ಲಿ 2
9ನೇ ವಿಧಾನಸಭೆಯಲ್ಲಿ ಸಿಎಂ ಆಗಿದ್ದ ವೀರೇಂದ್ರ ಪಾಟೀಲ್ ಆ. 27, 1991ರಲ್ಲಿ ಅವಿಶ್ವಾಸ ನಿರ್ಣಯ ಎದುರಿಸಿ ದ್ದರು. 1994ರಲ್ಲಿ ಸಿಎಂ ಆಗಿದ್ದ ಎಂ. ವೀರಪ್ಪ ಮೊಲಿ ಜನವರಿ 5ರಂದು ಅವಿಶ್ವಾಸ ನಿರ್ಣಯ ಎದುರಿಸಿದ್ದರು.
10ನೇ ವಿಧಾನ ಸಭೆಯಲ್ಲಿ 2
10ನೇ ವಿಧಾನಸಭೆಯಲ್ಲೂ 2 ಅವಿಶ್ವಾಸ ನಿರ್ಣಯಗಳು ಮಂಡನೆಯಾಗಿದ್ದವು. 1995 ರಲ್ಲಿ ಎಚ್.ಡಿ. ದೇವೇಗೌಡರು ಆಗಸ್ಟ್ 7ರಂದು ಹಾಗೂ ಜೆ. ಎಚ್. ಪಟೇಲ್ 1996ರ ಆಗಸ್ಟ್ 27ರಂದು ಅವಿಶ್ವಾಸ ನಿರ್ಣಯ ಎದುರಿಸಿದ್ದರು.
12ನೇ ಅವಿಶ್ವಾಸ ನಿರ್ಣಯ
12ನೇ ಅವಿಶ್ವಾಸ ನಿರ್ಣಯ ಮಂಡನೆಯಾಗಿದ್ದು 14ನೇ ವಿಧಾನಸಭೆಯಲ್ಲಿ ಸಿದ್ದರಾ ಮಯ್ಯ ಸರಕಾರದ ವಿರುದ್ಧ. ಜುಲೈ 13, 2015ರಂದು ಸದನದ ವಿಶ್ವಾಸ ಎದುರಿಸಿತ್ತು.
ಮಣಿಪಾಲ ಸ್ಪೆಷಲ್ ಡೆಸ್ಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.