ಉಪಾಹಾರ ಸೇವನೆ; 16 ಮಕ್ಕಳು ಅಸ್ವಸ್ಥ
•ಕೋಚಿಂಗ್ ಸೆಂಟರ್‌ನ ವಸತಿ ಶಾಲೆಯಲ್ಲಿ ಘಟನೆ•ಬೀಳಗಿ ತಾಲೂಕು ಆಸ್ಪತ್ರೆಗೆ ದಾಖಲು-ಚಿಕಿತ್ಸೆ
Team Udayavani, Jul 20, 2019, 10:52 AM IST
ಬೀಳಗಿ: ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥಗೊಂಡ ಮಕ್ಕಳ ಆರೋಗ್ಯ ವಿಚಾರಿಸಿದರು.
ಬೀಳಗಿ: ಸ್ಥಳೀಯ ಎಕ್ಸ್‌ಲನ್ಸ್ ಕೋಚಿಂಗ್ ಸೆಂಟರ್ ವಸತಿ ಶಾಲೆಯ 16 ವಿದ್ಯಾರ್ಥಿಗಳು ಆಹಾರ ಸೇವನೆಯಿಂದ ಅಸ್ವಸ್ಥರಾಗಿರುವ ಘಟನೆ ಶುಕ್ರವಾರ ನಡೆದಿದೆ.
ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಎಲ್ಲ ಮಕ್ಕಳು ಆರೋಗ್ಯವಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಚಿಕಿತ್ಸೆ ನೀಡಿರುವ ಚಿಕ್ಕ ಮಕ್ಕಳ ತಜ್ಞ ಡಾ| ಆರ್.ಎಸ್. ಮಂಟೂರ ತಿಳಿಸಿದ್ದಾರೆ.
ಕೋಚಿಂಗ್ ಸೆಂಟರ್‌ನ ವಸತಿ ಶಾಲೆಯಲ್ಲಿ ನವೋದಯ, ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ಸೇರಿದಂತೆ ವಿವಿಧ ವಸತಿ ಶಾಲೆಗಳ ಪ್ರವೇಶ ಪಡೆಯುವುದಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಇಲ್ಲಿನ ಕೋಚಿಂಗ್ ಸೆಂಟರ್‌ನಲ್ಲಿ 70 ವಿದ್ಯಾರ್ಥಿಗಳು ವ್ಯಾಸಂಗ್ ಮಾಡುತ್ತಿದ್ದಾರೆ. ಶುಕ್ರವಾರ ಬೆಳಗ್ಗೆ ಉಪಾಹಾರ ಸೇವನೆಯಿಂದಾಗಿ 16 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಎಲ್ಲ ಮಕ್ಕಳು ನಾಲ್ಕು ಮತ್ತು ಐದನೇ ತರಗತಿಯ ವಿದ್ಯಾರ್ಥಿಗಳಾಗಿದ್ದಾರೆ. ತರಬೇತಿ ಕೇಂದ್ರದ ಸಿಬ್ಬಂದಿ ಅಸ್ವಸ್ಥಗೊಂಡ ಎಲ್ಲ ಮಕ್ಕಳನ್ನು ಕೂಡಲೇ ತಾಲೂಕು ಆಸ್ಪತ್ರೆಗೆ ದಾಖಲಿಸುವ ಮೂಲಕ ಮಕ್ಕಳ ಆರೋಗ್ಯ ಕುರಿತು ಮುಂಜಾಗ್ರತೆ ವಹಿಸಿದ್ದಾರೆ.
ಅಧಿಕಾರಿಗಳ ಭೇಟಿ: ಡಿಎಚ್ಒ ಅನಂತ ದೇಸಾಯಿ, ತಹಶೀಲ್ದಾರ್ ಉದಯ ಕುಂಬಾರ, ಬಿಇಒ ಹನುಮಂತಗೌಡ ಮಿರ್ಜಿ, ಸಿಪಿಐ ರವಿಚಂದ್ರ ಡಿ.ಬಿ, ತಾಲೂಕು ಆರೋಗ್ಯಾಧಿಕಾರಿ ಡಾ| ದಯಾನಂದ ಕರೆಣ್ಣವರ, ತಾಲೂಕು ವೈದ್ಯಾಧಿಕಾರಿ ಡಾ| ಸಂಜಯ ಯಡಹಳ್ಳಿ ಹಾಗೂ ಆಹಾರ ಗುಣಮಟ್ಟದ ಸುರಕ್ಷೆ ವಿಭಾಗದ ವೈದ್ಯಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ಸದರಿ ತರಬೇತಿ ಕೇಂದ್ರಕ್ಕೂ ಭೇಟಿ ನೀಡಿದ ಅಧಿಕಾರಿಗಳು ಕುಲಂಕುಷ ಪರಿಶೀಲನೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudhol: ಮಧ್ಯರಾತ್ರಿ ನಡುರಸ್ತೆಯಲ್ಲಿ ಕಬ್ಬು ತುಂಬಿದ ಟ್ರೇಲರ್ ಪಲ್ಟಿ
Political Gap: ನಾನು ರಾಜಕೀಯದಿಂದ ಸ್ವಿಚ್ಡ್ ಆಫ್ ಆಗಿದ್ದೇನೆ: ಸ್ಪೀಕರ್ ಯು.ಟಿ. ಖಾದರ್
Excise: ಅಬಕಾರಿ ಇಲಾಖೆಯಲ್ಲಿ ವರ್ಗಾವಣೆಗೆ ಇನ್ನು ಕೌನ್ಸೆಲಿಂಗ್: ಸಚಿವ ತಿಮ್ಮಾಪುರ
ನಿರ್ವಹಣೆಯೇ ಇಲ್ಲದ ಬಸ್ ನಿಲ್ದಾಣ! ರಾತ್ರಿ ವೇಳೆ ಬಸ್‌ಗಳ ಓಡಾಟ ತೀರಾ ಕಡಿಮೆ
Rabakavi-Banahatti: ಯಲ್ಲಟ್ಟಿ ಬಳಿ ಸಿಎನ್‌ಜಿ ಟ್ಯಾಂಕರ್ ಪಲ್ಟಿ
MUST WATCH
ಹೊಸ ಸೇರ್ಪಡೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.