ತಿಂಗಳಲ್ಲಿ ಮಕ್ಕಳಿಗೆ ಸೈಕಲ್ ಭಾಗ್ಯ
ಮೂರು ಕಡೆ ಭರದಿಂದ ಸಾಗುತ್ತಿದೆ 5011 ಸೈಕಲ್ ಜೋಡಣೆ ಕಾರ್ಯ
Team Udayavani, Jul 20, 2019, 11:07 AM IST
ಲಿಂಗಸುಗೂರು: ಬಿಆರ್‌ಸಿ ಕಚೇರಿಯಲ್ಲಿ ಜೋಡಣೆ ಮಾಡಿ ಇಟ್ಟಿರುವ ಸೈಕಲ್ ಗಳು .
ಲಿಂಗಸುಗೂರು: ಬೇಡಿಕೆಗೆ ಅನುಗುಣವಾಗಿ ಸರ್ಕಾರ ತಾಲೂಕಿಗೆ 5011 ಸೈಕಲ್ಗಳನ್ನು ಒದಗಿಸಿದೆ. ಅದರಂತೆ ಜೋಡಣೆ ಕಾರ್ಯ ಭರದಿಂದ ಸಾಗಿದ್ದು, ತಿಂಗಳಲ್ಲಿ ಮಕ್ಕಳಿಗೆ ಸೈಕಲ್ ಸಿಗಲಿದೆ.
ತಾಲೂಕಿನ ಸರ್ಕಾರಿ ಪ್ರೌಢಶಾಲೆ, ಅನುದಾನಿತ ಪ್ರೌಢಶಾಲೆ ಹಾಗೂ ಉನ್ನತಿಕರಿಸಿದ ಶಾಲೆಗಳು ಸೇರಿ 92 ಶಾಲೆಗಳಲ್ಲಿ 2019-20ನೇ ಸಾಲಿನಲ್ಲಿ ಎಂಟನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ 5011 ವಿದ್ಯಾರ್ಥಿಗಳಿಗೆ ಸೈಕಲ್ ಒದಗಿಸಲು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. ಅದರಂತೆ ಸರ್ಕಾರವೂ ಸೈಕಲ್ ಪೂರೈಸಿದೆ. 2018-19ನೇ ಸಾಲಿನಲ್ಲಿ ಅಕ್ಟೋಬರ್ ತಿಂಗಳು ಮುಗಿದ ಮೇಲೆ ತಾಲೂಕಿನ ವಿದ್ಯಾರ್ಥಿಗಳಿಗೆ ಸೈಕಲ್ಗಳ ದರ್ಶನವಾಗಿತ್ತು. ಈ ಸಾಲಿನಲ್ಲಿ ಜುಲೈ ಮೊದಲ ವಾರ ಸೈಕಲ್ಗಳು ಬಂದಳಿದಿವೆ. ಮುದಗಲ್ಲ, ಲಿಂಗಸುಗೂರು ಪಟ್ಟಣ ಹಾಗೂ ಯರಗುಂಟಿ ಗ್ರಾಮದಲ್ಲಿ ಸೈಕಲ್ ಜೋಡಣೆ ಕಾರ್ಯ ಭರದಿಂದ ಸಾಗಿದೆ.
ತಾಲೂಕಿನ ದೊಡ್ಡಿಗಳಿಗೆ ಸೂಕ್ತ ರಸ್ತೆ ವ್ಯವಸ್ಥೆ ಇಲ್ಲ. ಸೂಕ್ತ ಬಸ್ ಸೌಲಭ್ಯ ಇಲ್ಲದಿರುವುದರಿಂದ ಮಕ್ಕಳು ನಡೆದುಕೊಂಡೇ ಇಲ್ಲವೇ ಖಾಸಗಿ ವಾಹನಗಳ ಮೂಲಕ ಶಾಲೆಗೆ ಹೋಗುವಂತಾಗಿದೆ. ಜೂನ್ ಮೊದಲೇ ವಾರದಲ್ಲಿ ಸೈಕಲ್ಗಳ ವಿತರಣೆ ಆಗಬೇಕಿತ್ತು.
ಆದರೆ ಸೈಕಲ್ ಜೋಡಣೆ ಕಾರ್ಯ ಇನ್ನೂ ಒಂದೂವರೆ ತಿಂಗಳು ಕಾಲ ನಡೆಯುತ್ತಿದ್ದರಿಂದ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಮಕ್ಕಳು ಸೈಕಲ್ ಏರುವ ಲಕ್ಷಣಗಳು ಗೋಚರಿಸುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Kundapura: ಅಪ್ರಾಪ್ತ ವಯಸ್ಕಳ ಜತೆ ಸಂಪರ್ಕ; ಮದುವೆಯಾಗುವುದಾಗಿ ಮೋಸ; 20 ವರ್ಷ ಶಿಕ್ಷೆ
Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.