ಬಾಚೇನಹಟ್ಟಿ ಬಳಿ ರಾತ್ರೋರಾತ್ರಿ ತ್ಯಾಜ್ಯಕ್ಕೆ ಬೆಂಕಿ
3 ಲಾರಿಯಷ್ಟು ಗ್ಲಾಸ್ ಫೈಬರ್ ತ್ಯಾಜ್ಯ ವಿಲೇವಾರಿ • ಸುಮಾರು 2 ಕಿ.ಮೀ. ವ್ಯಾಪ್ತಿ ದುರ್ವಾಸನೆ
Team Udayavani, Jul 20, 2019, 2:16 PM IST
ಮಾಗಡಿ- ಬೆಂಗಳೂರು ಮಾರ್ಗದಲ್ಲಿರುವ ಬಾಚೇನಹಟ್ಟಿ ಗ್ರಾಮದ ರೈತರ ಜಮೀನಿನಲ್ಲಿ ಫೈಬರ್ ಗ್ಲಾಸ್ ತ್ಯಾಜ್ಯಕ್ಕೆ ಬೆಂಕಿ ಹಚ್ಚಿ ಭಸ್ಮ ಮಾಡಿರುವುದು.
ಮಾಗಡಿ: ಬೆಂಗಳೂರಿನ ಕಾರ್ಖಾನೆಯ ತ್ಯಾಜ್ಯವನ್ನು ಮಾಗಡಿ – ಬೆಂಗಳೂರು ರಸ್ತೆಯ ಬಾಚೇನಹಟ್ಟಿ ಬಳಿಯ ಜಮೀನಿನಲ್ಲಿ ಗ್ಲಾಸ್ ಫೈಬರ್ ತ್ಯಾಜ್ಯ ಸುರಿದು ಬೆಂಕಿ ಹಚ್ಚುತ್ತಿರುವುದರಿಂದ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಕಸಬಾ ಹೋಬಳಿಯ ಬಾಚೇನಹಟ್ಟಿ ಬಳಿಯ ರಸ್ತೆ ಪಕ್ಕದಲ್ಲಿರುವ ಜಮೀನಿನಲ್ಲಿ ರಾತ್ರೋರಾತ್ರಿ ಮೂರು ಟಿಪ್ಪರ್ ಲಾರಿಯಷ್ಟು ಗ್ಲಾಸ್ ಫೈಬರ್ ತ್ಯಾಜ್ಯವನ್ನು ತಂದು ಸುರಿದಿದ್ದು, ಅದಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಫೈಬರ್ ಬೆಂಕಿಯಲ್ಲಿ ಬೆಂದ ಕಾರಣ ಸುತ್ತಮುತ್ತಲ ಸುಮಾರು ಎರಡು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ದುರ್ವಾಸನೆ ಹರಡಿದೆ ಎಂಬ ಆರೋಪಗಳು ಕೇಳಿ ಬರಿತ್ತಿವೆ.
ತ್ಯಾಜ್ಯ ವಿಲೇವಾರಿ ತಡೆಗೆ ಕ್ರಮ ಕೈಗೊಳ್ಳಿ: ಪ್ಲಾಸ್ಟಿಕ್ ಕಣಗಳು ಗಾಳಿಗೆ ತೂರಿ ಜಮೀನಿನಲ್ಲಿ ಬೆಳೆದಿರುವ ಫಸಲಿಗೆ ಹಾಗೂ ಗಿಡ ಮರಗಳ ಮೇಲೆ ಹರಡಿದೆ. ಪ್ಲಾಸ್ಟಿಕ್ ಲೇಪಿತ ರಾಗಿ, ತರಕಾರಿ, ಹಣ್ಣು ಹಂಪಲುಗಳನ್ನು ಸೇವಿಸುವುದರಿಂದ ಮನುಷ್ಯರಿಗೆ ಹಾಗೂ ಜನುವಾರುಗಳಿಗೆ ಹಲವಾರು ರೋಗ ರುಜೀನಗಳು ಬರುತ್ತಿವೆ. ಇದರಿಂದ ಸಂಬಂಧಪಟ್ಟ ಅಧಿಕಾರಿಗಳು ರೈತರ ಜಮೀನಿನಲ್ಲಿ ಕಾರ್ಖಾನೆಗಳ ತ್ಯಾಜ್ಯ ಹಾಕುವುದನ್ನು ತಡೆಗಟ್ಟುವುದರ ಜೊತೆಗೆ ತ್ಯಾಜ್ಯ ವಿಲೇವಾರಿ ಮಾಡುವವರ ವಿರುದ್ಧ ಸೂಕ್ತ ರೀತಿಯ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಜಲಾಶಯಕ್ಕೆ ಕಲುಷಿತ ನೀರು ಸೇರ್ಪಡೆ: ಗ್ಲಾಸ್ ಫೈಬರ್ ಬೆಂಕಿಯಲ್ಲಿ ಕರಗದೇ ಧೂಳಿನ ಕಣಗಳು ಗಾಳಿಯಲ್ಲಿ ಹಾರಡುತ್ತದೆ. ಉಸಿರಾಟದ ಮೂಲಕ ಇದನ್ನು ಸೇವಿಸುವ ಮನುಷ್ಯರಿಗೆ ಕ್ಯಾನ್ಸರ್, ಆಸ್ತಮದಂತಹ ರೋಗಗಳು ಬರುತ್ತದೆ. ಫೈಬರ್ ತ್ಯಾಜ್ಯವನ್ನು ನೀರು ಹರಿಯುವ ಕಾಲುವೆಯ ಬಳಿ ಸುರಿಯುವುದರಿಂದ ಕಾಲುವೆಯಲ್ಲಿ ಕಲುಷಿತ ನೀರು ಹರಿದು ಮಂಚನಬೆಲೆ ಜಲಾಶಯ ಸೇರುತ್ತದೆ. ಈ ನೀರನ್ನೇ ಮಾಗಡಿ ಪಟ್ಟಣದ ಜನತೆ ಕುಡಿಯುವ ಪರಿಸ್ಥಿತಿ ಇದೆ ಎಂದು ಸ್ಥಳೀಯ ನಿವಾಸಿ ರಾಜೀವ್ ಆತಂಕ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳಿಗೆ ತಲೆ ನೋವು: ಫೈಬರ್ ಗ್ಲಾಸ್ ತ್ಯಾಜ್ಯ ಬೆಂಕಿಯಲ್ಲಿ ಬೇಯುವ ವಾಸನೆಯಿಂದ ಅಕ್ಕಪಕ್ಕದಲ್ಲಿರುವ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ತಲೆ ನೋವಿನಿಂದ ನರಳುತ್ತಿದ್ದು, ತ್ಯಾಜ್ಯ ಸುರಿಯುವುದರಿಂದ ಬಹಳಷ್ಟು ಸಮಸ್ಯೆಗಳಾಗುತ್ತಿರುವುದರಿಂದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.