ರೂಪಾಯಿ ಬೆಲೆ
Team Udayavani, Jul 21, 2019, 5:45 AM IST
ಚಿಕ್ಕ ಮಕ್ಕಳಿರುವ ಮನೆಗೆ, ರೋಗಿಗಳ ಬಳಿಗೆ, ದೇವಸ್ಥಾನಕ್ಕೆ ಹೋಗುವಾಗ ಬರಿಗೈಯಲ್ಲಿ ಹೋಗಬಾರದು ಎಂದು ನನ್ನ ಬಾಲ್ಯದಲ್ಲಿ ಅಜ್ಜಿ ಹೇಳುತ್ತಿದ್ದುದು ಅರ್ಥ ಆಗುತ್ತಿರಲಿಲ್ಲ. ಆದರೆ, ಈಗ ಚೆನ್ನಾಗಿಯೇ ತಿಳಿಯುತ್ತಿದೆ. ಮನೆಯ ಮಕ್ಕಳಿಗೆ ಮನೆಯಲ್ಲಿ ಮೃಷ್ಟಾನ್ನ ಭೋಜನವಿದ್ದರೂ ರುಚಿಸದು. ಮನೆಗೆ ಬಂದ ಅತಿಥಿವರೇಣ್ಯರಲ್ಲಿ ಹಲ್ಲು ಕಿಸಿದುಕೊಂಡು ಅವರಲ್ಲಿ ಚಾಕಲೇಟನ್ನು ಬೇಡಿ ಪಡೆದು ತಿನ್ನುವುದರಲ್ಲೇ ಪರಮ ಸುಖ!
ಇದಕ್ಕಾಗಿ ಅನೇಕ ಸಲ ಮಕ್ಕಳು ನನ್ನ ಕೈಯಲ್ಲಿ ಬೈಸಿಕೊಂಡರೆ ಅವರನ್ನು ರಕ್ಷಿಸಲೆಂದೇ ಅಜ್ಜ-ಅಜ್ಜಿ ಧಾವಿಸುತ್ತಾರೆ. ಹಾಗಾಗಿ, ಅತಿಥಿಗಳು ತಂದ ತಿಂಡಿತಿನಿಸುಗಳನ್ನು ಅಂದಿನ ಸೂರ್ಯಾಸ್ತಮಾನಕ್ಕಿಂತ ಮುಂಚೆ ಮುಗಿಸುವುದೇ ಮಕ್ಕಳಿಗೆ ಆ ದಿನದ ಅವರ ಟಾರ್ಗೆಟ್ ಆಗಿ ಬಿಡುತ್ತದೆ.
ಬಂದವರ ಮುಂದೆ ಗದರಿಸಲೂ ಹೊಡೆಯಲೂ ಆಗದಂಥ ಅನುಕಂಪದ ಸ್ಥಿತಿಯನ್ನು ಮಕ್ಕಳು ಸೃಷ್ಟಿಸಿಕೊಳ್ಳುತ್ತಾರೆ. ಒಂದು ದಿನ ನನ್ನವರ ಸೋದರ ಮಾವ ಬಂದಿದ್ದರು. ದೂರದ ಊರಿನಲ್ಲಿರುವ ಅವರು ನಮ್ಮೂರಿಗೆ ಬರುವಾಗ ಬರಿಗೈಯಲ್ಲಿ ಎಂದೂ ಬಂದದ್ದಿಲ್ಲ. ತಿಂಡಿ, ಚಾಕಲೇಟು, ಹಣ್ಣುಹಂಪಲು, ಬಟ್ಟೆ ಹೀಗೆ ಅವರ ಕೈಯಲ್ಲಿ ಒಂದು ದೊಡ್ಡ ಪೊಟ್ಟಣವೇ ಇರುತ್ತದೆ. ಇದು ನನ್ನ ಮಕ್ಕಳಿಗೂ ಚೆನ್ನಾಗಿ ವೇದ್ಯವಾಗಿರುವ ವಿಚಾರವೇ. ಆವತ್ತೂಮ್ಮೆ ಅವರು ತುರ್ತು ಕೆಲಸಕ್ಕೆ ಬಂದಿದ್ದಾಗ ಬರಿಗೈಯಲ್ಲಿದ್ದರು. ನನ್ನ ಮಕ್ಕಳಿಗೆ ಸ್ವಲ್ಪ ನಿರಾಸೆ ಆಯಿತೆನ್ನಿ. ಅವರು, ಇನ್ನೇನು ಅತಿಥಿಗಳಲ್ಲಿ ಇದನ್ನು ನೇರವಾಗಿ ಹೇಳಿಯೇ ಬಿಡುತ್ತಾರೆ ಎಂದು ನನಗೆ ಭಯವಾಗಿತ್ತು. ಆದರೆ, ಪುಣ್ಯವಶಾತ್ ಹೇಳದೆ ನನ್ನ ಮರ್ಯಾದೆ ಉಳಿಸಿದರು. ಸ್ವಲ್ಪ ಹೊತ್ತಿನಲ್ಲೇ ಮಾವ ಹೊರಟುನಿಂತರು. “ಏನಾದರೂ ಸಿಕ್ಕಿಯೇ ಸಿಗುತ್ತದೆ’ ಎಂಬ ಆಶಾಭಾವನೆ ಮಕ್ಕಳಲ್ಲಿ ಇನ್ನೂ ಇತ್ತು. “ಬನ್ನಿ , ಚಾಕಲೇಟ…’ ಎಂದು ಕರೆದಿದ್ದೇ ತಡ ಎದ್ದು ಬಿದ್ದು ಓಡಿ ಬಂದರು. ಮಾವ ಜೇಬಿನೊಳಗಿಂದ ಕೈಯಲ್ಲಿ ಮು¨ªೆ ಮಾಡಿ ಐನೂರರ ನೋಟೊಂದನ್ನು ನನ್ನ ಸಣ್ಣ ಮಗನ ಕೈಗಿತ್ತು, “ಇಗೋ ಚಾಕಲೇಟ…’ ಎಂದರು.
ಅವನು ತನ್ನ ಅಂಗೈಯಲ್ಲಿದ್ದ ಕಾಗದದ ಚೂರನ್ನು ನೋಡಿ, ನಿರಾಸೆಯಿಂದ, “ಇದು ಚಾಕಲೇಟಲ್ಲ. ದುಡ್ಡು’ ಎಂದು ತಕ್ಷಣವೇ ಲ್ಲೇ ಇದ್ದ ಮೇಜಿನ ಮೇಲಿಟ್ಟು ನಮ್ಮ ಮುಖವನ್ನೂ ನೋಡದೆ ಆಡಲು ಹೋದ. ಒಂದು ರೀತಿಯ ತಣ್ತೀ ಜ್ಞಾನಿಯ ನಿರ್ಲಿಪ್ತ ಭಾವ ! ನಾವು ಮುಖ ಮುಖ ನೋಡಿಕೊಂಡೆವು.
ಮಕ್ಕಳ ಮನಸ್ಸು ಮುಗ್ಧವೇ. ಆದರೂ ಅದೇ ಮಕ್ಕಳಲ್ಲಿ ಮುಂದೆ ಮಾನವ ಸಹಜ- ಅಸಹಜ ಗುಣಗಳು ಬೆಳೆಯುತ್ತದಲ್ಲ , ಅದೇ ಬೇಜಾರು! ಮಗರಾಯ ಸ್ವಲ್ಪ ದೊಡ್ಡವನಾಗಿದ್ದರೆ ಅಥವಾ ನಮ್ಮಂಥ ಬೆಳೆದ ತಲೆಯವ ನಾ ಗಿದ್ದರೆ ತತ್ ಕ್ಷಣ, “ಒಂದು ಗುಣಿಸು ಐನೂರು’, “ಆಹಾ! ಐನೂರು ಚಾಕಲೇಟು ಕೊಂಡುಕೊಳ್ಳಬಹುದು’ ಎಂದೆಲ್ಲ ಲೆಕ್ಕಾಚಾರ ಮಾಡಿಬಿಡುತ್ತಿದ್ದªನೋ ಏನೋ! ನನಗೆ ಒಂದೊಂದು ಸಲ ಅನ್ನಿಸುತ್ತದೆ- ನಾವು ಈ ಗಣಿತ ಕಲಿ ತ ದ್ದೇ ತಪ್ಪಾಯಿತೋ ಎಂದು. ಪ್ರತಿಯೊಂದಕ್ಕೂ ಲೆಕ್ಕ ಹಾಕಿ ಅಳೆದು ತೂಗುತ್ತೇವೆ.
ಪ್ರತಿಯೊಂದು ವಸ್ತುವಿಗೂ ಇಂತಿಷ್ಟು ರೂಪಾಯಿ ಅಂತ ನಿಗದಿ ಮಾಡಿ ಇಟ್ಟಿದ್ದೇವೆ. ಆದರೆ, ಆ ವಸ್ತು ಕೊಡುವ “ಆನಂದ’ಕ್ಕೆ ಬೆಲೆ ಕಟ್ಟಲು ಸಾಧ್ಯ ವೆ? ಮಕ್ಕಳ ಮುಗ್ಧ ಮನಸ್ಸಿನಲ್ಲಿ ಒಂದು ಚಾಕಲೇಟಿಗಿರುವ ಬೆಲೆ ಕೋಟಿ ರೂಪಾಯಿಗೆ ಇರುವುದಿಲ್ಲ. ಅವರು ಬೆಲೆ ಕೊಡುವುದು ಮುಂದಿರುವ ವಸ್ತುಗಳಲ್ಲಿ ತನಗೆ ಯಾವುದು “ಸುಖ’ ಕೊಡುತ್ತದೆಯೋ, ಅದಕ್ಕೆ.
ಕೆಲವು ಬಂಧುಗಳು ಮಕ್ಕಳ ಕೈಯಲ್ಲಿ ದುಡ್ಡಿಟ್ಟು ಆಶೀರ್ವಾದ ಮಾಡುವ “ದುರಭ್ಯಾಸ’ ಇಟ್ಟುಕೊಂಡಿ¨ªಾರೆ. ಮಕ್ಕಳಿಗೆ ಆ ಕಾಗದದ ತುಂಡಿನ ಬೆಲೆ ತಿಳಿಯದೆ, ಸೋಫಾದ ಮೇಲೋ, ತಮ್ಮ ಸೈಕಲ್ ಮೇಲೋ ಇಟ್ಟು ಆಡಲು ಹೋಗುತ್ತಿದ್ದರು. ಆದರೆ, ಈಗ ಹಾಗಿಲ್ಲ , ನನ್ನವರ ಅಮ್ಮನವರು ಮಕ್ಕಳಿಗಾಗಿ ಒಂದು ಹುಂಡಿ ತರಿಸಿ ಅದರಲ್ಲಿ ಹಾಕಿಡುವ ಅಭ್ಯಾಸ ಮಾಡಿಸಿ¨ªಾರೆ. ನಾನು, ಆ ದುಡ್ಡು ಯಾಕೆ ಎಂದು ಕೇಳಿದರೆ, “ಚಾಕಲೇಟಿಗೆ, ರಿಮೋಟ್ ಕಾರಿಗೆ, ಹೊಸ ಸೈಕಲ್‌ಗೆ’ ಎನ್ನುತ್ತಾರೆ. ಮೊನ್ನೆ, “ಅಜ್ಜಿ ಹೊಸ ಸೀರೆಬೇಕು ಅಂತ ಕೇಳಿದರಲ್ಲವೆ, ಅದಕ್ಕೆ’ ಅವರ ಹುಂಡಿಯಿಂದಲೇ ನಮ್ಮ ಸಂಸಾರ ಸಾಗುತ್ತದೆಯೋ ಎಂಬಂತೆ ಮಾತನಾಡುತ್ತಾರೆ. ನನ್ನ ಪರ್ಸೊಳಗೆ ಸೇರುತ್ತಿದ್ದ ನೋಟುಗಳೆಲ್ಲ ಈಗ ಹುಂಡಿಯೊಳಗೆ ಸಾಗುತ್ತಿರುವುದನ್ನು ನೋಡಿದರೆ ನಗು ಬರುತ್ತದೆ.
ಅಪರೂಪಕ್ಕೊಮ್ಮೆ ಚಿಲ್ಲರೆಗಾಗಿ ಆ ಹುಂಡಿಯೊಳಗೆ ಕೈ ಹಾಕಿದರೆ ಸಾಕು, ನಿಧಿಯನ್ನು ಕಾಪಾಡುವ ದೇವರಂತೆ ಎದುರಲ್ಲಿ ಬಂದು ಪ್ರತ್ಯಕ್ಷರಾಗಿ ಬಿಡುತ್ತಾರೆ ! ಆಗ ಕೊಂಚ ಭಯ ಆಗುತ್ತದೆ- ಇಷ್ಟು ಬೇಗ ಇವರಿಗೂ ಈ ದುಡ್ಡಿನ ಬೆಲೆ ಗೊತ್ತಾಗಿ ಬಿಟ್ಟಿತಾ ಎಂದು ! ತೆಗೆದ-ಹಾಕಿದ ಲೆಕ್ಕವನ್ನು ಮಕ್ಕಳಿಗೆ ಸರಿಯಾಗಿ ಒಪ್ಪಿಸದಿದ್ದರೆ ನನ್ನವರಿಗೂ ನನಗೂ ನೆಮ್ಮದಿ ಇಲ್ಲ.
ನನ್ನ ಬಾಲ್ಯದಲ್ಲಿ ರಜೆಗೆ ಅಜ್ಜಿ ಮನೆಗೆ ಹೋಗುತ್ತಿ¨ªೆ. ಅಲ್ಲಿ ನನ್ನ ದೊಡ್ಡತ್ತೆಗೂ ನನ್ನ ದೊಡ್ಡಮ್ಮ ಚಿಕ್ಕಮ್ಮನ ಮಕ್ಕಳಾದ ನಾವೇ ಮಕ್ಕಳಾಗಿಬಿಡುತ್ತಿದ್ದೆವು. ಆಕೆ, ಹಲವು ಮಕ್ಕಳ ತಾಯಿಯಾಗಿ ಸಂಭ್ರಮಿಸುತ್ತಿದ್ದರು. “ನಾವೆಲ್ಲ ಬರುತ್ತೇವೆ’ ಎಂದು ತಿಳಿದ ತತ್‌ಕ್ಷಣ ಬಳೆಯ ಡಬ್ಬಗಳನ್ನೇ ತರಿಸಿಡುತ್ತಿದ್ದರು. ನಮಗೆಲ್ಲ ಕೈ ತುಂಬ ಬಳೆ ತೊಡಿಸಿ, ಆ ಬಳೆಯ ಗಿಜಿಗಿಜಿ ನಾದಕ್ಕೆ ಇಡೀ ಮನೆಯೇ ಸಂಭ್ರಮಿಸುವಂತೆ ಮಾಡುತ್ತಿದ್ದರು.
ಒಂದೊಂದು ಸಲ ಅವರಿಗೆ ಕೆಲಸದ ಒತ್ತಡದಿಂದಾಗಿ ಬಳೆ ಕೊಡಿಸಲು ಸಾಧ್ಯವಾಗುತ್ತಿರಲಿಲ್ಲ. ಆಗೆಲ್ಲ ನಮ್ಮ ಕೈಗೆ ಹಣವನ್ನಿಟ್ಟು “ಇದರಲ್ಲಿ ಬಳೆ ಇಟ್ಟುಕೊಳ್ಳಿಯಮ್ಮ’ ಎಂದು ಪ್ರೀತಿಯಿಂದ ಕುಂಕುಮ ಹಚ್ಚಿ ಆಶೀರ್ವದಿಸುತ್ತಿದ್ದರು. ಆಗೆಲ್ಲ ನಮಗೆ ಬೇಜಾರು- ಕೈಯಲ್ಲಿ ಗಿಜಿಗಿಜಿ ಶಬ್ದವಿಲ್ಲ, ಕೈಚೀಲದೊಳಗೆ ನೋಟು ಇದ್ದರೂ ಇಲ್ಲದಂತೆ ಮೌನ.
ನಾವು ಹಣದ ಬೆಲೆ ಅರಿಯುತ್ತ ಹೋದಂತೆ ಅದರÇÉೇ ಸುಖವನ್ನು ಅರಸುತ್ತ ಹೋಗುತ್ತೇವೆ. ಮತ್ತದೇ ಇತರ ವಸ್ತುಗಳು ಕೊಡುವ ಸುಖಕ್ಕೂ ಬೆಲೆ ಕಟ್ಟಿ ಬಿಡುತ್ತದೆ. ಮತ್ತದೇ ನಮ್ಮನ್ನು ಆಳುತ್ತದೆ. ರೊಕ್ಕ ಎರಡಕ್ಕೂ ದುಃಖ ಕಾಣಕ್ಕ ಎಂಬ ಪುರಂದರ ದಾಸರ ಕೀರ್ತನೆಯನ್ನು ನಮ್ಮ ಮಾನಸಿಕ ನೆಮ್ಮದಿಗಾಗಿ ಅರಿತು ಬಾಳುವ ಅಗತ್ಯತೆ ಇದೆ. ಮತ್ತೂಮ್ಮೆ ನಮ್ಮ ಮನಸ್ಸು ಮಗುವಾಗಲಿ!
– ವಿಭಾ ಕೃಷ್ಣಪ್ರಕಾಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.