ತ್ಯಾಜ್ಯ ಸಂಸ್ಕರಣೆ ಘಟಕದಲ್ಲಿ ಕಿರು ಅರಣ್ಯ
Team Udayavani, Jul 21, 2019, 3:04 AM IST
ಬೆಂಗಳೂರು: ಬಿ.ಪ್ಯಾಕ್, ಬಿಬಿಎಂಪಿ, ರೋಟರಿ ಡೌನ್ ಟೌನ್ ಹಾಗೂ ಹಸಿರು ಮಿಷನ್ ಸಹಯೋಗದೊಂದಿಗೆ ಹಸಿರು ಬೆಂಗಳೂರಿಗಾಗಿ ಶನಿವಾರ ಕನ್ನಹಳ್ಳಿಯ ಬಿಬಿಎಂಪಿ ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಕಿರು ಅರಣ್ಯ ನಿರ್ಮಾಣಕ್ಕಾಗಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕಸದಿಂದ ಹಸಿದು ನಿರ್ಮಾಣ ಮಾಡುವ ಸಂಕಲ್ಪದೊಂದಿಗೆ ಬಿ.ಪ್ಯಾಕ್, ರೋಟರಿ ಸಂಸ್ಥೆಯ ಸದಸ್ಯರು, ಮೌಂಟ್ ಕಾರ್ಮಲ್, ಜ್ಯೋತಿನಿವಾಸ್ ಕಾಲೇಜು, ಮಲ್ಲೇಶ್ವರ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಒಟ್ಟಾಗಿ 300ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟರು.
ಈ ವೇಳೆ ಮಾತನಾಡಿದ ಬಿ.ಪ್ಯಾಕ್ ಕಾರ್ಯನಿರ್ವಹಕ ಅಧಿಕಾರಿ ರೇವತಿ ಅಶೋಕ್, ಬಿಬಿಎಂಪಿಯ ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಕಿರು ಅರಣ್ಯ ನಿರ್ಮಿಸುವುದರಿಂದ ತ್ಯಾಜ್ಯದಿಂದ ಹೊರ ಬರುವ ದುರ್ವಾಸನೆಗೆ ಕಡಿವಾಣ ಬೀಳಲಿದೆ.
ಹೆಚ್ಚು ಸಸಿಗಳನ್ನು ಒಂದೆಡೆ ನಾಟಿ ಮಾಡುವುದರಿಂದ ಒಂದು ಮರ ಮತ್ತೂಂದು ಮರದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸಸಿಗಳು ಕಡಿಮೆ ಅವಧಿಯಲ್ಲಿ ಸ್ಪರ್ಧೆಗೆ ಬಿದ್ದವರಂತೆ ಎತ್ತರವಾಗಿ ಬೆಳೆಯುತ್ತವೆ. ಮುಂದಿನ ದಿನಗಳಲ್ಲಿ ಈ ರೀತಿಯ ಕಿರು ಅರಣ್ಯಗಳನ್ನು ಬೆಂಗಳೂರಿನ ಸುತ್ತಮುತ್ತಲು ನಿರ್ಮಿಸುವ ಬಿ.ಪ್ಯಾಕ್ ಹೊಂದಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.