ಚಾಂಪಿಯನ್ ಬುಲ್ಸ್ ಗೆಲುವಿನ ಆರಂಭ
ಪ್ರೊ ಕಬಡ್ಡಿ 7: ಮೊದಲ ಮುಖಾಮುಖೀಯಲ್ಲಿ ಮುಂಬಾ ಜಯ
Team Udayavani, Jul 21, 2019, 4:59 AM IST
ಹೈದರಾಬಾದ್: ಇಲ್ಲಿನ ಗಚ್ಚಿಬೌಲಿ ಒಳ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾದ 7ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ ಶುಭಾರಂಭ ಮಾಡಿದೆ. ದಿನದ ದ್ವಿತೀಯ ಪಂದ್ಯದಲ್ಲಿ ಅದು ಪಾಟ್ನಾ
ಪೈರೇಟ್ಸ್‌ಗೆ 34-32 ಅಂಕಗಳ ಸೋಲುಣಿಸಿದೆ.
ಮೊದಲ ಮುಖಾಮುಖೀಯಲ್ಲಿ ಆತಿಥೇಯ ತೆಲುಗು ಟೈಟಾನ್ಸ್ ತಂಡವನ್ನು ಯು ಮುಂಬಾ 31-25 ಅಂಕಗಳಿಂದ ಮಣಿಸಿತು.ಅಭಿಷೇಕ್, ನರ್ವಾಲ್ ಮಿಂಚು ಮುಂಬಾ ಗೆಲುವಿಗೆ ಅಭಿಷೇಕ್ ಸಿಂಗ್ ಮತ್ತು ಸಂದೀಪ್ ನರ್ವಾಲ್ ನೆರವಾದರು. ದಾಳಿಯಲ್ಲಿ ಮಿಂಚಿದ ಅಭಿಷೇಕ್ 16 ಬಾರಿ ಯತ್ನ ನಡೆಸಿ 10 ಅಂಕ ಗಳಿಸಿದರು. ಇನ್ನೊಂದು ಕಡೆ ರೋಹಿತ್ ಬಲಿಯನ್ ಕೂಡ ದಾಳಿಯಲ್ಲಿ ಮಿಂಚಿ 4 ಅಂಕ ಗಳಿಸಿದರು. ಇವರಿಗೆ ರಕ್ಷಣೆಯಲ್ಲಿ ಸಂದೀಪ್ ನರ್ವಾಲ್ ನೆರವಿಗೆ ನಿಂತರು. ಎದುರಾಳಿಯನ್ನು ಕೆಡವಿಕೊಳ್ಳಲು 5 ಬಾರಿ ಯತ್ನ ನಡೆಸಿ ಅದರಲ್ಲಿ 4 ಅಂಕ ಪಡೆದರು. ಇದು ಮುಂಬಾ ಗೆಲುವನ್ನು ಖಚಿತಪಡಿಸಿತು.
ಇಡೀ ಪಂದ್ಯ ಅತ್ಯಂತ ಜಿದ್ದಾಜಿದ್ದಿಯಿಂದ ಕೂಡಿತ್ತು. ಒಂದೊಂದು ಅಂಕ ಗಳಿಸಲೂ ಎರಡೂ ತಂಡಗಳು ಪರದಾಡಿದವು. ಮುಂಬಾ ತಂಡ ಸಂಘಟಿತವಾಗಿ ಆಡಿದ್ದರಿಂದ ತೆಲುಗು ಟೈಟಾನ್ಸ್ ಸವಾಲನ್ನು ಮೀರಿ ನಿಲ್ಲಲು ಸಾಧ್ಯವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.