ವಿದ್ಯಾರ್ಥಿಗಳಿಂದ ವಸ್ತ್ರವಿನ್ಯಾಸ ಪ್ರದರ್ಶನ
ಗಮನ ಸೆಳೆದ ನವವಿನ್ಯಾಸಗಳಲ್ಲಿ ಸಿದ್ಧಪಡಿಸಿದ ವಿಭಿನ್ನವಾದ ಹಸ್ತಕಲಾ ಉಡುಪುಗಳು
Team Udayavani, Jul 21, 2019, 10:05 AM IST
ಹುಬ್ಬಳ್ಳಿ: ಇನಿಫ್ಡ್ನಿಂದ ವಾರ್ಷಿಕ ಫ್ಯಾಶನ್ ಶೋ 'ಸಿಲ್ಹೌಟ್' 3ನೇ ಋತುವಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಸ್ತ್ರವಿನ್ಯಾಸಗಳನ್ನು ಪ್ರದರ್ಶಿಸಿದರು.
ಹುಬ್ಬಳ್ಳಿ: ಇಂಟರ್‌ನ್ಯಾಷನಲ್ ಇನ್ಸ್‌ಟಿ ಟ್ಯೂಟ್ ಆಫ್ ಫ್ಯಾಶನ್ ಡಿಸೈನ್ (ಐಎನ್‌ಐಎಫ್‌ಡಿ- ಇನಿಫ್ಡ್)ದ ವಾರ್ಷಿಕ ಫ್ಯಾಶನ್ ಶೋ ‘ಸಿಲ್ಹೌಟ್’ 3ನೇ ಋತುವಿನಲ್ಲಿ ವಿದ್ಯಾರ್ಥಿಗಳು ತಾವು ಸಿದ್ಧಪಡಿಸಿದ ವಸ್ತ್ರವಿನ್ಯಾಸಗಳನ್ನು ಪ್ರದರ್ಶಿಸಿದರು. ನಗರದ ನವೀನ್ ಹೋಟೆಲ್ನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಫ್ಯಾಶನ್ ಶೋದಲ್ಲಿ ವಿದ್ಯಾರ್ಥಿಗಳು ಪ್ರದರ್ಶನ ತೋರಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಕೇಂದ್ರದ ನಿರ್ದೇಶಕಿ ಜ್ಯೋತಿ ಬಿಡಸಾರಿಯಾ ಮತ್ತು ಮುಖ್ಯಸ್ಥೆ ಮೇಘಾ ಕಿತ್ತೂರ ಮಾತನಾಡಿ, ಮಹಿಳೆಯರ ಉಡುಪು ಸಂಗ್ರಹಕ್ಕೆ ಯೋಗ್ಯವಾದ ವೈಯಕ್ತಿಕ ವಿನ್ಯಾಸಗಾರರಾದ ಪ್ರಿಯಾ ಸರಾಫ್ ಮತ್ತು ಶ್ವೇತಾ ಕೋಠಾರಿ ಸಿದ್ಧಪಡಿಸಿದ ಬಿಸರಾ-ದಿ ಫಾರಗಾಟನ್, ತೈರೀನ್ ಬಸರಿಕಟ್ಟಿ ಅವರ ಬ್ಲ್ಯೂ ಸಿಟಿ ಆಫ್ ಜೋಧಪುರ ಹಾಗೂ ಫಾಗ್ ಆಫ್ ಡ್ರೀಮ್ಸ್, ಮುಜಮಾ ಖಾನ್ ಮತ್ತು ನಾಗರತ್ನ ಅಷ್ಟೇಕರ ಅವರ ಇಂಕ್ಡ್, ಕೋಮಲ ಹಬೀಬ ಅವರ ಗ್ಲೋರಿ ಆಫ್ ದಿ ಪಿಂಕ್ ಸಿಟಿ-ಪತ್ರಿಕಾ, ಪಾಯಲ್ ಬಾಫಣಾ ಮತ್ತು ಕಾಜಲ್ ಬಾಫಣಾ ಅವರ ಗುಲಾಬಿಗೋಟಾ, ಪಲ್ಲವಿ ಸೋನ್ಪಿಪರೆ ಅವರ ಸ್ನೋ ಫಾಲ್, ದೀಪಾಂಜಲಿ ಹಿರೇಮಠ ಅವರ ಟೆರಿಫಾಯಿಂಗ್ ಬ್ಯೂಟಿ, ಸೀಮಾ ಎಸ್. ಖಟಾವಕರ ಅವರು ದಿವಾ ಕಲೆಕ್ಷನ್ ಪ್ರದರ್ಶಿಸಿದರು. ಇವರಲ್ಲಿ ತೈರೀನ ಬಸರಿಕಟ್ಟಿ ಲಂಡನ್‌ದಲ್ಲಿ ನಡೆದ ಲಾಕ್ಮೇ ಫ್ಯಾಶನ್ ಶೋದಲ್ಲಿ ಪಾಲ್ಗೊಂಡಿದ್ದರು ಎಂದರು.
ಅದೇರೀತಿ 5 ತಂಡಗಳಲ್ಲಿ ವಿನ್ಯಾಸಕಾರರು ಸಿದ್ಧಪಡಿಸಿದ ಮಕ್ಕಳ ಉಡುಪುಗಳ ವಸ್ತ್ರವಿನ್ಯಾಸಗಳಾದ ಮಿನಾಲ್ ಜೈನ, ಜಯಲಕ್ಷ್ಮಿ ಉರಣಕರ, ಯೋಗೇಶ ಪಾಲಗೋತಾ, ಸಹೇಲಿ ಬಾಫಣಾ, ಶ್ರುತಿ ಪಟೇಲ್, ಅಂಕಿತಾ ಜೈನ, ವಿಕ್ಷಿಥಾ ಚಜ್ಜೇದ ಅವರ ಎ ಟ್ರಿಬ್ಯುಟ್ ಟು ಗ್ರ್ಯಾಂಡ್‌ಮಾ, ಪೂಜಾ ಶೆಟ್ಟರ, ಮಯೂರಿ ಗೋಗದ, ಹರ್ಷಾ, ಹಫಿಜಾ ಜಂಗಲಿವಾಲಾ, ನಿಕಿತಾ ಚವ್ಹಾಣ, ಸೀಮಾ ನಾಗನಸೂರ ಅವರ ಲೂಕ್ ಆ್ಯಟ್ ಮಿ, ರಾಧಿಕಾ ಬೋರಗಾಂವಕರ, ಅಂಕಿತಾ ಯಲಮಲ್ಲಿ, ರಂಜಿತಾ ಕೇನಿ, ವಾಸವಿ ಎಂ., ಸುರೇಖಾ ಪಾಟೀಲ, ತನಿಷಾ ದೊಡ್ಡಮನಿ ಅವರ ಅಂಡರ್‌ವಾಟರ್ ಡ್ರೀಮಿಂಗ್, ಅಖೀಲೇಶ್ವರಿ, ಮುಜ್ಮಾ ಖಾನ,ಇಷ್ರತ ಸರಗಿರೋ, ಶ್ರೀನಿಧಿ, ರಂಜಿತಾ ಗುಡಿಸಾಗರ ಅವರ ದಿ ರೆಡ್ ಕಾರ್ಪೆಟ್, ಭಾಗ್ಯಶ್ರೀ ಹೆಳವರ ಅವರ ಸ್ಪಿರಿಟ್ ಆಫ್ ಮೌನಾ ಪ್ರದರ್ಶನಗೊಂಡಿತು ಎಂದರು.
ಡಿಸೈನ್ ಫ್ಯಾಕಲ್ಟಿ ಮಾನಸಾ ಹಿರೇಮಠ ಮಾತನಾಡಿ, ಈ ಬಾರಿ 1, 2, 3ನೇ ವರ್ಷದ ವಿದ್ಯಾರ್ಥಿಗಳು ನವವಿನ್ಯಾಸಗಳಲ್ಲಿ ಸಿದ್ಧಪಡಿಸಿದ ವಿಭಿನ್ನವಾದ ಹಸ್ತಕಲಾ ಉಡುಪುಗಳನ್ನು ಪ್ರದರ್ಶನ ಮಾಡಿದರು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.