ಮುಂಗಾರು ಹಂಗಾಮಿನಲ್ಲಿ ಶೇ. 37ರಷ್ಟು ಮಳೆ ಕೊರತೆ
ವಾಡಿಕೆ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗೆ ಹಿನ್ನಡೆ
Team Udayavani, Jul 21, 2019, 11:42 AM IST
ಶಿವಮೊಗ್ಗ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಇದುವರೆಗೆ ಶೇ.37ರಷ್ಟು ಮಳೆ ಕೊರತೆ ಉಂಟಾಗಿದ್ದು, ಭತ್ತ ನಾಟಿ ಕಾರ್ಯಕ್ಕೆ ಹಿನ್ನಡೆ ಉಂಟಾಗಿದೆ.
ಜಿಲ್ಲೆಯಲ್ಲಿ ಒಟ್ಟು ವಾರ್ಷಿಕ ಮಳೆ 2237 ಮಿಮೀ ಆಗಿದ್ದು, ಈ ಸಾಲಿನ ಸರಾಸರಿ ಮಳೆಯು ಜುಲೈ 19ರ ವರೆಗೆ 675 ಮಿಲಿ ಮೀಟರ್ ಆಗಿದೆ. ಈ ವೇಳೆಗೆ 1071 ಮಿಮೀ ಮಳೆಯಾಗಬೇಕಿತ್ತು. ಇಲ್ಲಿಯವರೆಗೂ 64 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಆಗಿದೆ.
ಜಿಲ್ಲೆಯ ವಿವಿಧ ತಾಲೂಕುಗಳ ವಾಡಿಕೆ ಮಳೆ ಹಾಗೂ ಬಿದ್ದ ಮಳೆ ಈ ರೀತಿ ಇದೆ. ಶಿವಮೊಗ್ಗ ವಾಡಿಕೆ ಮಳೆ 228 ಮಿಮೀ, ಬಿದ್ದ ಮಳೆ 203 ಮಿಮೀ, ಭದ್ರಾವತಿ ವಾಡಿಕೆ ಮಳೆ 221 ಮಿಮೀ, ಬಿದ್ದ ಮಳೆ 146 ಮಿಮೀ, ತೀರ್ಥಹಳ್ಳಿ ವಾಡಿಕೆ ಮಳೆ 1503 ಮಿಮೀ, ಬಿದ್ದ ಮಳೆ 77ಮಿಮೀ, ಸಾಗರ ವಾಡಿಕೆ ಮಳೆ 1221 ಮಿಮೀ, ಬಿದ್ದ ಮಳೆ 1068 ಮಿಮೀ, ಹೊಸನಗರ ವಾಡಿಕೆ ಮಳೆ 1378 ಮಿಮೀ, ಬಿದ್ದ ಮಳೆ 1003 ಮಿಮೀ, ಶಿಕಾರಿಪುರ ವಾಡಿಕೆ ಮಳೆ 312 ಮಿಮೀ, ಬಿದ್ದ ಮಳೆ 216 ಮಿಮೀ, ಸೊರಬ ವಾಡಿಕೆ ಮಳೆ 740 ಮಿಮೀ, ಬಿದ್ದ ಮಳೆ 389 ಮಿಮೀ, ಸೊರಬ ವಾಡಿಕೆ ಮಳೆ 740 ಮಿಮೀ, ಬಿದ್ದ ಮಳೆ 389 ಮಿಮೀ, ಮಳೆ ಆಗಿದೆ. ಒಟ್ಟಾರೆ ಜಿಲ್ಲೆಯ ಸರಾಸರಿ ವಾಡಿಕೆ ಮಳೆ 925 ಮಿಮೀ ಮಳೆ ಆಗಬೇಕಿತ್ತು. ಆದರೆ 641 ಮಿಮೀ ಮಳೆಯಾಗಿದ್ದು ಶೇ. 31 ರಷ್ಟು ಮಳೆ ಕೊರತೆ ಉಂಟಾಗಿದೆ.
ಈ ಸಾಲಿನಲ್ಲಿ ವಾಡಿಕೆ ಮಳೆಯ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ಬಿತ್ತನೆಯ ಕಾರ್ಯದಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ. ಇಲ್ಲಿಯವರೆಗೆ 64,247 ಹೆಕ್ಟರ್ ಬಿತ್ತನೆ ಕಾರ್ಯ ನಡೆದಿದ್ದು ನಿರ್ದಿಷ್ಟಿತ ಗುರಿ 1,59,457 ಹೆಕ್ಟೇರ್ ಬಿತ್ತನೆಯ ಕಾರ್ಯದ ಗುರಿ ಇರಿಸಿಕೊಳ್ಳಲಾಗಿತ್ತು. ಇದರಲ್ಲಿ 99,684 ಹೆಕ್ಟೇರ್ ಭತ್ತ, 55’100 ಹೆಕ್ಟರ್ ಮುಸುಕಿನ ಜೋಳ ಬಿತ್ತನೆಯ ಗುರಿ ಹೊಂದಿದ್ದು ಭತ್ತದ ಬಿತ್ತನೆ 10,172 ಹೆಕ್ಟರ್ ಹಾಗೂ ಮುಸುಕಿನ ಜೋಳ 52,331 ಹೆಕ್ಟೇರ್ ಬಿತ್ತನೆ ಕಾರ್ಯ ಸಾಧ್ಯವಾಗಿದೆ.
ಬಿತ್ತನೆ ಕಾರ್ಯದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ವಿವರ ಹೀಗಿದೆ. ಶಿವಮೊಗ್ಗ ಬಿತ್ತನೆಯ ಗುರಿ 26,064 ಹೆಕ್ಟೇರ್, ಬಿತ್ತನೆಯ ಸಾಧನೆ 13,003 ಹೆಕ್ಟೇರ್, ಭದ್ರಾವತಿ ಬಿತ್ತನೆಯ ಗುರಿ 10,351 ಹೆಕ್ಟೇರ್, ಬಿತ್ತನೆಯ ಸಾಧನೆ 2526 ಹೆಕ್ಟೇರ್, ತೀರ್ಥಹಳ್ಳಿ ಬಿತ್ತನೆಯ ಗುರಿ 13,058 ಹೆಕ್ಟೇರ್, ಬಿತ್ತನೆಯ ಸಾಧನೆ 52 ಹೆಕ್ಟೇರ್, ಸಾಗರ ಬಿತ್ತನೆಯ ಗುರಿ 19,220 ಹೆಕ್ಟೇರ್ ಬಿತ್ತನೆಯ ಸಾಧನೆ 7160 ಹೆಕ್ಟೇರ್, ಹೊಸನಗರ ಬಿತ್ತನೆಯ ಗುರಿ 11,324 ಹೆಕ್ಟೇರ್ ಬಿತ್ತನೆಯ ಸಾಧನೆ 875 ಹೆಕ್ಟೇರ್, ಶಿಕಾರಿಪುರ ಬಿತ್ತನೆಯ ಗುರಿ 41,825 ಹೆಕ್ಟೇರ್, ಬಿತ್ತನೆಯ ಸಾಧನೆ 22,430. ಸೊರಬ ಬಿತ್ತನೆಯ ಗುರಿ 37,615 ಹೆಕ್ಟೇರ್ ಹಾಗೂ ಬಿತ್ತನೆ ಕ್ಷೇತ್ರದ ಸಾಧನೆ 18,201 ಹೆಕ್ಟೇರ್ ಆಗಿದೆ.
ರೈತರಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಿಸಾನ್ ಸಮ್ಮಾನ್ ಯೋಜನೆ ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ. ಈ ಯೋಜನೆಯು ಅರ್ಹ ರೈತ ಫಲಾನುಭವಿ ಕುಟುಂಬಗಳಿಗೆ ಮೂರು ಕಂತುಗಳಲ್ಲಿ ವಾರ್ಷಿಕ 6 ಸಾವಿರ ರೂಗಳನ್ನು ನೀಡುವ ಯೋಜನೆಯಾಗಿದೆ. ಕಿಸಾನ್ ಸಮ್ಮಾನ್ ಯೋಜನೆಗೆ ಹೆಸರು ನೋಂದಾಯಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಇದುವರೆಗೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಆನ್‌ಲೈನ್‌ನಲ್ಲಿ ನೋಂದಣಿಗೊಂಡ ರೈತರ ಅಂಕಿ-ಅಂಶಗಳು ಹೀಗಿದೆ. ಶಿವಮೊಗ್ಗ 21,114, ಭದ್ರಾವತಿ 21,617, ತೀರ್ಥಹಳ್ಳಿ 15,515, ಸಾಗರ 19001, ಹೊಸನಗರ 12,019, ಶಿಕಾರಿಪುರ 26,936, ಸೊರಬ 26,852 ಜಿಲ್ಲೆಯಲ್ಲಿ ಒಟ್ಟು ಸಲ್ಲಿಸಲಾದ ಅರ್ಜಿಗಳ ಸಂಖ್ಯೆ 14,43,054 ಆಗಿರುತ್ತದೆ.
ಕಿಸಾನ್ ಸಮ್ಮಾನ್

ಫಸಲ್ ಬಿಮಾ ಯೋಜನೆ
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ. ಬೆಳೆ ಸಾಲ ಪಡೆಯಲು ಬೆಳೆ ವಿಮೆ ಕಡ್ಡಾಯವಾಗಿದ್ದು ರೈತರು ಹತ್ತಿರದ ಸೇವಾಕೇಂದ್ರಗಳಲ್ಲಿ (ಸಿಎಸ್‌ಸಿ), ಡಿಸಿಸಿ ಮತ್ತು ಇತರೆ ಬ್ಯಾಂಕ್‌ಗಳಲ್ಲಿ ನೋಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ. ಬೆಳೆ ವಿಮೆ ನೋಂದಾಯಿಸಲು ಕೊನೆಯ ದಿನಾಂಕ ಆ. 14 ಆಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣಕುಮಾರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.