ಮಳೆ ನೀರಿಗೆ ತುಕ್ಕು ಹಿಡಿಯುತ್ತಿವೆ ಆಟಿಕೆ
•ನಿರ್ವಹಣೆ ಮರೆತ ಪುರಸಭೆ ಅಧಿಕಾರಿಗಳು •ಸರ್ಕಾರದ ಲಕ್ಷಾಂತರ ರೂ. ವ್ಯರ್ಥ
Team Udayavani, Jul 21, 2019, 1:12 PM IST
ಕುಮಟಾ: ವಿವೇಕನಗರ ಉದ್ಯಾನವನದಲ್ಲಿ ಮಳೆ ನೀರು ಸಂಗ್ರಹವಾಗಿರುವುದು.
ಕುಮಟಾ: ಪಟ್ಟಣ ವ್ಯಾಪ್ತಿಯ ವಿವೇಕನಗರ ಉದ್ಯಾನವನಕ್ಕೆ ಪುರಸಭೆ ಕಳೆದ ವರ್ಷ ಲಕ್ಷಾಂತರ ರೂ. ವ್ಯಯಿಸಿ ವಾಕಿಂಗ್ ಟ್ರ್ಯಾಕ್ ಹಾಗೂ ಮಕ್ಕಳ ಆಟಿಕೆ ಸಾಮಗ್ರಿ ಅಳವಡಿಸಿತ್ತು. ಆದರೆ ಮಳೆಗಾಲದಲ್ಲಿ ಸರಿಯಾದ ನಿರ್ವಹಣೆ ಇಲ್ಲದೇ ಮಳೆನೀರು ನಿಂತು ಈಗಲೇ ಸಾಮಗ್ರಿಗಳೆಲ್ಲ ತುಕ್ಕು ಹಿಡಿಯಲಾರಂಭಿಸಿದೆ.
ಪುರಸಭೆಗೆ ಸಂಬಂಧಪಟ್ಟ ಈ ಗಾರ್ಡ್‌ನಿನಲ್ಲಿ ಪ್ರತೀವರ್ಷ ಒಂದಿಲ್ಲೊಂದು ಸಮಸ್ಯೆ ಉದ್ಭವವಾಗುತ್ತಲೇ ಇರುತ್ತದೆ. ಕಾರಣ ಪುರಸಭೆ ನಿರ್ಲಕ್ಷ ಧೋರಣೆ. ಗಾರ್ಡ್‌ನಿನ ಒಳಭಾಗದಲ್ಲಿ ಮಣ್ಣಿನ ರಾಶಿ ಒಂದೆಡೆಯಾದರೆ, ಗಿಡಗಳ ರಾಶಿ ಇನ್ನೊಂದೆಡೆ. ನಿರ್ವಹಣೆಗೆಂದು ಸರ್ಕಾರದಿಂದ ಬರುವ ಹಣವೆಲ್ಲ ಎಲ್ಲಿ ಪೋಲಾಗುತ್ತಿದೆ ಎಂಬುದು ಪ್ರತಿಯೊಬ್ಬರ ಪ್ರಶ್ನೆ. ಕಳೆದ ವರ್ಷ ಪುರಸಭೆ ಲಕ್ಷಾಂತರ ರೂ. ವ್ಯಯಿಸಿ ವಾಕಿಂಗ್ ಟ್ರ್ಯಾಕ್ ನಿರ್ಮಿಸಿ, ಮಕ್ಕಳ ಆಟಿಕೆಗಳನ್ನೂ ಅಳವಡಿಸಿತ್ತು. ಆದರೆ ಏರು ತಗ್ಗುಗಳಿರುವ ಈ ಗಾರ್ಡ್‌ನಿನೊಳಗೆ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಅಲ್ಲಲ್ಲೇ ನೀರು ನಿಂತು ಈಗಲೇ ಸಾಮಗ್ರಿಗಳೆಲ್ಲ ತುಕ್ಕು ಹಿಡಿಯಲಾರಂಭಿಸಿದೆ. ಹೀಗಾದರೆ ಸಾರ್ವಜನಿಕರ ಹಿತಕ್ಕಾಗಿ ಸರ್ಕಾರ ಖರ್ಚು ಮಾಡಿದ ಹಣ ಉಪಯೋಗವಾಗುವುದಾರೂ ಹೇಗೆ.
ಗಾರ್ಡನಿನಲ್ಲಿ ಮಕ್ಕಳ ಆಟಿಕೆ ವಸ್ತುಗಳನ್ನು ಅಳವಡಿಸಿರುವ ಜಾಗ ತಗ್ಗು ಪ್ರದೇಶವಾಗಿದ್ದು, ಸುರಿದ ಮಳೆನೀರು ಆ ಭಾಗಕ್ಕೇ ಹೋಗುತ್ತದೆ. ಗಾರ್ಡನ್ನಿನ ಒಳಭಾಗದಲ್ಲಿನ ನೀರು ಹೊರ ಭಾಗದಲ್ಲಿರುವ ಗಟಾರಕ್ಕೆ ಸರಾಗವಾಗಿ ಹರಿದು ಹೋಗಲು ಯಾವುದೇ ವ್ಯವಸ್ಥೆ ಕಲ್ಪಿಸದಿರುವುದರಿಂದ ಸಾಮಗ್ರಿಗಳಿರುವ ಭಾಗದಲ್ಲೇ 1 ಫೀಟ್‌ಗೂ ಅಧಿಕ ನೀರು ಸಂಗ್ರಹವಾಗುತ್ತದೆ. ಇದರಿಂದಾಗಿ ಆ ಭಾಗ ಕೆಸರು ಗದ್ದೆಯಂತಾಗಿದ್ದು, ಅಲ್ಲಿರುವ ಸಾಮಗ್ರಿಗಳು ನಿಂತ ನೀರಿನಿಂದ ತುಕ್ಕು ಹಿಡಿಯಲಾರಂಭಿಸಿದೆ.
ಉದ್ಯಾನವನದ ನಿರ್ವಹಣೆಗೆಂದು ಪ್ರತಿವರ್ಷ ಸಾಕಷ್ಟು ಅನುದಾನಗಳು ಬಿಡುಗಡೆಯಾಗುತ್ತದೆ. ಆದರೆ ಆ ಹಣ ಎಲ್ಲಿ ಪೋಲಾಗುತ್ತಿದೆ ಎಂಬ ಪ್ರಶ್ನೆಗೆ ಪುರಸಭೆಯೇ ಉತ್ತರ ನೀಡಬೇಕಾಗಿದೆ. ಗಾರ್ಡನ್ ಮಧ್ಯದಲ್ಲಿ ಒಂದು ನೀರಿನ ಬಾವಿ, ಹೈಮಾಸ್ಕ್ ಲೈಟ್, ಗೇಟ್, ಪ್ರವೇಶ ದ್ವಾರ ಸೇರಿದಂತೆ ಎಲ್ಲವೂ ಹೆಸರಿಗೆ ಮಾತ್ರ ಎಂಬಂತಾಗಿದೆ. ಅದರ ಪ್ರಯೋಜನಗಳು ಮಾತ್ರ ಜನ ಸಾಮಾನ್ಯರಿಗೆ ದೊರೆಯುತ್ತಿಲ್ಲ. ಪುರಸಭೆ ಈಗಲಾದರೂ ಎಚ್ಚೆತ್ತು ಸರ್ಕಾರದಿಂದ ವ್ಯಯಿಸಿದ ಹಣದ ಪ್ರಯೋಜನ ಸಾರ್ವಜನಿಕರಿಗೆ ದೊರೆಯುವಂತೆ ಮಾಡಬೇಕೆಂಬುದು ಹಲವರ ಅಭಿಪ್ರಾಯ
ಮಳೆಗಾಲ ಪೂರ್ವದಲ್ಲಿ ಗಾರ್ಡನ್ನಿನ ಒಳಭಾಗದ ನೀರು ಹೊರ ಹೋಗುವಂತೆ ಸುತ್ತಲೂ ಕಾಲುವೆ ತೆಗೆದು, ಹರಿದು ಹೋಗುವಂತೆ ಮಾಡಿದರೆ ಇಲ್ಲಿ ನೀರು ಸಂಗ್ರಹವಾಗುತ್ತಿರಲಿಲ್ಲ. ನೀರು ಒಳಭಾಗದಲ್ಲೇ ಸಂಗ್ರಹವಾಗುತ್ತಿರುವುದರಿಂದ ಕೆಲ ಆಟಿಕೆ ಸಾಮಗ್ರಿಗಳು ಸೇರಿದಂತೆ ಹಲವು ಉಪಕರಣಗಳು ಈಗಲೇ ತುಕ್ಕು ಹಿಡಿಯಲಾರಂಭಿಸಿದೆ. ಈಗಲಾದರೂ ಪುರಸಭೆ ಈ ಬಗೆಗೆ ಸೂಕ್ತ ಕ್ರಮಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಲಿ.•ವಿಶ್ವನಾಥ ನಾಯ್ಕ ಹೊದ್ಕೆ ನಿವಾಸಿ.
ಸರ್ಕಾರ ಯಾವುದೇ ಯೋಜನೆಗಳನ್ನು ಜಾರಿಗೆ ತಂದರೂ ಸರಿಯಾದ ನಿರ್ವಹಣೆಯಿಲ್ಲದಿದ್ದರೆ ಅದರ ಪ್ರಯೋಜನಗಳು ಸಾರ್ವಜನಿಕರಿಗೆ ದೊರೆಯುವುದಿಲ್ಲ ಎಂಬುದಕ್ಕೆ ವಿವೇಕನಗರದ ಉದ್ಯಾನವೇ ನಿದರ್ಶನ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ, ಇಲ್ಲಿನ ಸಮಸ್ಯೆ ಬಗೆಹರಿಸಬೇಕು.•ನಟರಾಜ ಗದ್ದೇಮನೆ ಹೆಗಡೆ ನಿವಾಸಿ
•ದಿನೇಶ ಗಾಂವಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ
ಮುಂಡಗೋಡ: ಮಂಗನಬಾವು ಉಲ್ಬಣ-ಮೂರು ದಿನ ಶಾಲೆಗೆ ರಜೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.