ಮ್ಯೂಚುವಲ್ ಫಂಡ್: ಹೂಡಿಕೆದಾರರ 5 ತಪ್ಪುಗಳು!
Team Udayavani, Jul 22, 2019, 5:00 AM IST
ಭಾರತದಲ್ಲಿ ಬಂಡವಾಳ ಹೂಡುವ ವಿಶ್ವಾಸನೀಯ ಮಾರ್ಗಗಳಲ್ಲಿ ಮ್ಯೂಚುವಲ್ ಫಂಡ್ ಪ್ರಮುಖವಾದುದು. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಂದಿ ಮ್ಯೂಚುವಲ್ ಫಂಡ್‌ನತ್ತ ಆಕರ್ಷಿತರಾಗುತ್ತಿದ್ದಾರೆ. ಮ್ಯೂಚುವಲ್ ಫಂಡ್ ಯೋಜನೆಗಳು ಅದೆಷ್ಟೇ ಸರಳ ಮತ್ತು ಲಾಭಕರವಾಗಿದ್ದರೂ ಹೂಡಿಕೆದಾರರು, ತಮ್ಮ ಬಂಡವಾಳವನ್ನು ಸೂಕ್ತವಾಗಿ ನಿರ್ವಹಣೆ ಮಾಡದಿದ್ದರೆ ನಷ್ಟವಾಗುತ್ತದೆ. ತಪ್ಪು ನಿರ್ಧಾರಗಳು ಹಾಗೂ ಅಶಿಸ್ತಿನ ಹೂಡಿಕೆಗಳಿಂದಾಗಿ ಆರ್ಥಿಕ ಅಸ್ಥಿರತೆ ಉಂಟಾಗಬಹುದು. ಹೂಡಿಕೆ ಮಾಡಿದ ಬಂಡವಾಳ ಲಾಭ ತರಬೇಕು. ಹೀಗಾಗಿ ಕಷ್ಟಪಟ್ಟು ಗಳಿಸಿದ ಹಣವನ್ನು ವ್ಯವಸ್ಥಿತವಾಗಿ ಬಳಸಬೇಕು. ಮ್ಯೂಚುವಲ್ ಫಂಡ್ ಹೂಡಿಕೆದಾರರು ಎಸಗುವ 5 ಸಾಮಾನ್ಯ ತಪ್ಪುಗಳು ಇವು.
1. ಲಾಭದ ಗುರಿ ಹಾಕಿಕೊಳ್ಳದಿರುವುದು
ಬಂಡವಾಳ ಹೂಡಿಕೆ ಮಾಡುವುದೇ ಲಾಭಕ್ಕೋಸ್ಕರ. ಹೀಗಾಗಿ ನಿರ್ದಿಷ್ಟ ಮೊತ್ತದಷ್ಟು ಲಾಭದ ಗುರಿಯನ್ನು ಹೂಡಿಕೆದಾರ ಹಾಕಿಕೊಂಡಿರಬೇಕು. ನಮ್ಮ ಆರ್ಥಿಕ ಶಕ್ತಿಗೆ ತಕ್ಕಂತೆ, ಹೆಚ್ಚು ಪ್ರಯೋಜನಗಳನ್ನು ಒದಗಿಸುವ ಯೋಜನೆಗಳನ್ನು ಹುಡುಕಿ, ಪರಾಮರ್ಶಿಸಿ, ಬಳಿಕವೇ ಬಂಡವಾಳ ಹೂಡಬೇಕು.
2. ಕಡಿಮೆ ಅವಧಿಯ ಹೂಡಿಕೆ
ಮ್ಯೂಚುವಲ್ ಫಂಡ್ಸ್‌ನಲ್ಲಿ ದೀರ್ಘಾವಧಿಗೆ ಹೂಡಿಕೆ ಮಾಡಿದಷ್ಟೂ ಹೆಚ್ಚು ಲಾಭ ದೊರೆಯುತ್ತದೆ. ಕಡೇ ಪಕ್ಷ 5 ರಿಂದ 7 ವರ್ಷಗಳ ಅವಧಿಗಾದರೂ ಹೂಡಿಕೆ ಮಾಡುವುದು ಉತ್ತಮ. ದೀರ್ಘಾವಧಿಯ ಕಾಲ ಬಂಡವಾಳ ಹೂಡಿಕೆ ಮಾಡುವುದರಿಂದ, ಒಳಹೊರಗು ತಿಳಿಯುವುದರ ಜೊತೆಗೆ, ಮಾರುಕಟ್ಟೆಯಲ್ಲಿ ನಿಯಂತ್ರಣ ಸಾಧಿಸಬಹುದಾಗಿದೆ.
3. ಎನ್‌ಎವಿಗೆ ಹೋಲಿಸಿಕೊಂಡು ಬಂಡವಾಳ ಹೂಡಿಕೆ
“ದಿ ಚೀಪರ್, ದಿ ಬೆಟರ್’ ಎಂಬ ಮಾತನ್ನು ನೀವು ಕೇಳಿರುತ್ತೀರಿ. ಮ್ಯೂಚುವಲ್ ಫಂಡ್ಸ್ ವಿಷಯದಲ್ಲಿ ಹಾಗನ್ನಲು ಸಾಧ್ಯವೇ ಇಲ್ಲ. ಸಾಮಾನ್ಯವಾಗಿ ಹೊಸ ಹೂಡಿಕೆದಾರರು ಈ ತಪ್ಪನ್ನು ಮಾಡುತ್ತಾರೆ. ಅವರು ಮ್ಯೂಚುವಲ್ ಫಂಡ್‌ನ ನಿವ್ವಳ ಆಸ್ತಿ ಮೌಲ್ಯ(NAV- Net Asset Value)ಕ್ಕೆ ತಕ್ಕಂತೆ ಬಂಡವಾಳ ಹಾಕುತ್ತಾರೆ. ಅದು ತಪ್ಪು. ಮ್ಯೂಚುವಲ್ ಫಂಡ್ಸ್‌ಗಳನ್ನು ಯೂನಿಟ್ ಲೆಕ್ಕದಲ್ಲಿ ಖರೀದಿಸಲಾಗುತ್ತದೆ. ಪ್ರತಿ ಯುನಿಟ್‌ನ ಬೆಲೆಯೇ NAV- Net Asset Value. ಪ್ರತಿ ಯೂನಿಟ್‌ನ ಬೆಲೆ ಎಷ್ಟಿದೆ ಎಂಬುದನ್ನು ಹೂಡಿಕೆದಾರರು ತಿಳಿದಿರಬೇಕು. ಹೂಡಿಕೆಗಳ ಬೆಲೆ ನಿರ್ಧರಿತವಾಗುವುದು, ಭದ್ರತಾ ಠೇವಣಿ, ಅವುಗಳ ವ್ಯವಸ್ಥಿತ ಬಳಕೆ ಹಾಗೂ ಕೈಗೊಳ್ಳುವ ನಿರ್ಧಾರಗಳ ಮೇಲೆ.
4. ಅನೇಕ ಕಡೆ ಹಣ ಹೂಡುವುದು
ವಿವಿಧ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ಲಾಭ ಹೆಚ್ಚಿಗೆ ಸಿಗುತ್ತದೆ ಎನ್ನುವ ತಪ್ಪು ಕಲ್ಪನೆ ಹಲವರಲ್ಲಿದೆ. ಆದರೆ ಈ ರೀತಿ ಹೂಡಿಕೆ ಮಾಡುವುದರಿಂದ ನಷ್ಟವಾಗುವ ಸಾಧ್ಯತೆಯೇ ಹೆಚ್ಚು. ಕೆಲ ಯೋಜನೆಗಳು ನಮ್ಮ ಹೂಡಿಕೆಗೆ ತಕ್ಕಂತೆ ಲಾಭ ತಂದುಕೊಡದೇ ಇರಬಹುದು. ಅಲ್ಲದೆ, ಹಲವು ಯೋಜನೆಗಳಲ್ಲಿ ಹೂಡಿಕೆ ಮಾಡಿದಾಗ ವಿವಿಧ ದಿನಾಂಕಗಳಲ್ಲಿ ಹಣ ಕಡಿತಗೊಳ್ಳುವ ಕಾರಣ ಹೂಡಿಕೆದಾರನ ಖಾತೆಯೂ ಖಾಲಿಯಾಗುತ್ತದೆ. ಅದೇ ರೀತಿ, ಎಲ್ಲ ಹಣವನ್ನೂ ಒಂದೇ ಯೋಜನೆಯಲ್ಲಿ ಹೂಡಿಕೆ ಮಾಡುವುದೂ ಆರೋಗ್ಯಕರವಲ್ಲ.
5. ನಷ್ಟದ ಸಾಧ್ಯತೆ ಕುರಿತು ನಿರ್ಲಕ್ಷ್ಯ
ಮ್ಯೂಚುವಲ್ ಫಂಡ್ಸ್ ಹೂಡಿಕೆ ಏರಿಳಿತಗಳ ಗೂಳಿ ಆಟವಿದ್ದಂತೆ. ಕೆಲವು ಸಾರಿ ಮೂಲ ಬಂಡವಾಳವೇ ಕೈತಪ್ಪಿ ಹೋಗುವ ಅಪಾಯವೂ ಇರುತ್ತದೆ. ಇಂಥ ಸಂದರ್ಭಗಳಲ್ಲಿ ನಿರ್ಲಕ್ಷ್ಯ ವಹಿಸಬಾರದು. ನಷ್ಟವಾಗುವ ಸಾಧ್ಯತೆಗಳಿದ್ದರೆ ಅದನ್ನು ಖಾತರಿ ಪಡಿಸಿಕೊಂಡು ಈಕ್ವಿಟಿ ಫಂಡ್ಸ್ ಅಥವಾ ಇನ್ನಿತರ ಯೋಜನೆಗಳಿಂದ ಹೂಡಿಕೆ ವಾಪಸ್ ಪಡೆಯುವ ಬಗ್ಗೆ ಚಿಂತನೆ ನಡೆಸಬಹುದು. ಇಲ್ಲವೇ, ಸದ್ಯಕ್ಕೆ ನಷ್ಟ ಅನುಭವಿಸಿದರೂ ಸಹ, ಮುಂದಿನ ಆರು ತಿಂಗಳಿಗೆ ತೊಂದರೆಯಿಲ್ಲದೆ ಸಾಗುವಂತೆ ನಿಮ್ಮ ಖಾತೆಯಲ್ಲಿ ಹಣ ಇರುವಂತೆ ನೋಡಿಕೊಳ್ಳಿ.
– ಮಲ್ಲಪ್ಪ ಪಾರೆಗಾಂವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.