ಪ್ರಶಸ್ತಿ ಪಡೆವ ಕನಸು ನನಸಾಗಲೇ ಇಲ್ಲ


Team Udayavani, Jul 22, 2019, 3:08 AM IST

prashasti

ಬೆಂಗಳೂರು: ಆ ಹಿರಿಯ ಜೀವ ಸರ್ಕಾರದ ಗೌರವಕ್ಕಾಗಿ ಕಾದಿತ್ತು. ರಂಗಭೂಮಿ ಕ್ಷೇತ್ರದ ಉನ್ನತ ಪ್ರಶಸ್ತಿ (ಬಿ.ವಿ.ಕಾರಂತ ಹೆಸರಿನಲ್ಲಿ)ಗೆ ತನ್ನ ಹೆಸರನ್ನು ಸರ್ಕಾರ ಎಂದು ಘೋಷಿಸುತ್ತೋ ಎಂಬ ಕನವರಿಕೆಯಲ್ಲಿತ್ತು. ಆದರೆ ಸರ್ಕಾರದ ತಪ್ಪುಗಳಿಂದಾಗಿ ಕೊನೆಗೂ ಆ ಆಸೆ ಈಡೇರಲೇ ಇಲ್ಲ! ಪ್ರಸಕ್ತ ವರ್ಷ ಏಪ್ರಿಲ್‌ 1ರಂದು 67ರ ಹರೆಯದ ಆ ಹಿರಿಯ ಜೀವ ಇಹಲೋಕವನ್ನೇ ತ್ಯಜಿಸಿದ್ದು, ರಂಗಭೂಮಿ ಕ್ಷೇತ್ರದ ಶ್ರೇಷ್ಠ ಪ್ರಶಸ್ತಿ ಪಡೆಯುವ ಅವರ ಕನಸು “ಕನಸಾಗಿಯೆ ಉಳಿಯಿತು’.

ಇಂತಹ ಮನ ಮಿಡಿಯುವ ನೋವಿನ ಕಥೆಗೆ ಹಿರಿಯ ವೃತ್ತಿರಂಗಭೂಮಿ ಕಲಾವಿದೆ ದಿ.ಎಸ್‌.ಮಾಲತಿ ಸಾಗರ ಅವರ ಬದುಕು ಸಾಕ್ಷಿಯಾಗಿದೆ. ಈ ಹಿಂದೆ (ಫೆ.5ರಂದು) ಸಭೆ ಸೇರಿದ್ದ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶೇಖ್‌ ಮಾಸ್ತರ್‌ ನೇತೃತ್ವದ ಆಯ್ಕೆ ಸಮಿತಿ, 2018ನೇ ಸಾಲಿನ “ಡಾ.ಗುಬ್ಬಿವೀರಣ್ಣ ಮತ್ತು “ಬಿ.ವಿ.ಕಾರಂತರ’ ಪ್ರಶಸ್ತಿಗೆ ರಂಗಭೂಮಿ ಸಾಧಕರ ಹೆಸರನ್ನು ಅಂತಿಮಗೊಳಿಸಿತ್ತು.

ಹವ್ಯಾಸಿ ರಂಗಭೂಮಿ ಕಲಾವಿದರಿಗೆ ನೀಡಲಾಗುವ “ಬಿ.ವಿ.ಕಾರಂತ’ ಪ್ರಶಸ್ತಿಗೆ ಶಿವಮೊಗ್ಗ ಜಿಲ್ಲೆ ಸಾಗರ ಮೂಲದ ಮಾಲತಿ ಸಾಗರ ಅವರ ಹೆಸರು ಈ ಪಟ್ಟಿಯಲ್ಲಿತ್ತು. ಆಯ್ಕೆ ಸಮಿತಿ ಕೂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪಟ್ಟಿಯನ್ನು ಹಸ್ತಾಂತರಿಸಿತ್ತು. ಆದರೆ ಸರ್ಕಾರ ರಂಗ ಸಾಧಕರ ಪಟ್ಟಿಯನ್ನು ತಕ್ಷಣ ಘೋಷಿಸಲೇ ಇಲ್ಲ.

ವಿಳಂಬಕ್ಕೆ ಕಾರಣಗಳೇನು?: ಫೆಬ್ರವರಿಯಲ್ಲಿ ಆಯ್ಕೆ ಸಮಿತಿ, ಪ್ರಶಸ್ತಿ ಪುರಸ್ಕೃತರ ಹೆಸರನ್ನು ಅಂತಿಮಗೊಳಿಸಿ ತಕ್ಷಣದಲ್ಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಳುಹಿಸಿಕೊಟ್ಟಿತ್ತು. ಆದರೆ ಇದಾದ ಕೆಲ ದಿನಗಳಲ್ಲಿ ವಿವಿಧ ಚುನಾವಣೆಗಳು ಎದುರಾದವು. ಚುನಾವಣೆ ಬಳಿಕವೂ ಸರ್ಕಾರ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಿಸುವ ಗೋಜಿಗೆ ಹೋಗಲೇ ಇಲ್ಲ.

ಆಯ್ಕೆ ಸಮಿತಿ ಬೇಸರ: ಇತ್ತೀಚೆಗಷ್ಟೇ ರಂಗವಲಯದ ವಿವಿಧ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಸರ್ಕಾರ ಘೋಷಿಸಿದೆ. ಆದರೆ ಮಾಲತಿ ಸಾಗರ ಹೆಸರು ಪಟ್ಟಿಯಲ್ಲಿರಲಿಲ್ಲ. ಮಾಲತಿ ಅವರು ಪ್ರಶಸ್ತಿ ಘೋಷಿಸುವ ಮೊದಲೇ ಮರಣ ಹೊಂದಿದ್ದರಿಂದ ಈ ಪ್ರಶಸ್ತಿಗೆ ಅವರನ್ನು ಪರಿಗಣಿಸಿಲ್ಲ ಎಂದು ಹೇಳಲಾಗುತ್ತಿದೆ.

ಆದರೆ ಸರ್ಕಾರದ ನಡೆಗೆ ಪ್ರಶಸ್ತಿ ಆಯ್ಕೆ ಸಮಿತಿ ಕೂಡ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ “ಉದಯವಾಣಿ’ಯೊಂದಿಗೆ ಮಾತನಾಡಿದ ಪ್ರಶಸ್ತಿ ಆಯ್ಕೆ ಸಮಿತಿ ಮುಖ್ಯಸ್ಥ ಶೇಖ್‌ ಮಾಸ್ತರ್‌, ಮಾಲತಿ ಅವರು ಬದುಕಿದ್ದಾಗಲೇ ಕಾರಂತ ಪ್ರಶಸ್ತಿಗೆ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಆದರೆ ಸರ್ಕಾರದ ವಿಳಂಬ ನೀತಿಯಿಂದಾಗಿ ಪ್ರಶಸ್ತಿ ಘೋಷಣೆ ತಡವಾಗಿದೆ. ಇದಕ್ಕೆ ಸರ್ಕಾರ ನೇರ ಹೊಣೆ ಎಂದು ಹೇಳಿದರು.

ಹವ್ಯಾಸಿ ರಂಗಭೂಮಿ ಕ್ಷೇತ್ರಕ್ಕೆ ಮಾಲತಿ ಸಾಗರ ಅವರ ಕೊಡುಗೆ ಅಪಾರ. ರಂಗತಂಡಗಳನ್ನು ಕಟ್ಟಿ ಅವರು ರಂಗಸೇವೆ ಮಾಡಿದ್ದಾರೆ. ಆ ಹಿನ್ನೆಲೆಯಲ್ಲೇ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಇದೊಂದು “ವಿಶೇಷ ಪ್ರಕರಣ’ಎಂದು ಸರ್ಕಾರ ಪರಿಗಣಿಸಿ ಮಾಲತಿ ಅವರಿಗೆ ಕಾರಂತ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಸರ್ಕಾರಕ್ಕೆ ಮನವಿ ಸಲ್ಲಿಕೆ: ಮಾಲತಿ ಅವರಿಗೆ ಬಿ.ವಿ.ಕಾರಂತ ಪ್ರಶಸ್ತಿ ನೀಡದೇ ಇರುವುದಕ್ಕೆ ರಂಗಭೂಮಿ ವಲಯದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ನೇತೃತ್ವದ ಹಿರಿಯ ರಂಗಕರ್ಮಿಗಳ ನಿಯೋಗ ಇತ್ತೀಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಪತ್ರವನ್ನು ಸಲ್ಲಿಸಿದೆ.

ಸರ್ಕಾರದ ವಿಳಂಬ ನೀತಿಯಿಂದಾಗಿ ಮಾಲತಿ ಅವರಿಗೆ ಪ್ರಶಸ್ತಿ ಕೈತಪ್ಪಿಹೋಗಿದೆ. ಆ ಹಿನ್ನೆಲೆಯಲ್ಲಿ ಕಾರಂತರ ಪ್ರಶಸ್ತಿಗೆ ಮಾಲತಿ ಅವರನ್ನು ಪರಿಗಣಿಸಬೇಕೆಂದು ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಲ್ಲಿ ಒಬ್ಬರಾಗಿರುವ ಮಲ್ಲಿಕಾರ್ಜುನ ಕಾಡಕೋಳ ಆಗ್ರಹಿಸಿದ್ದಾರೆ.

ಆನಂದ ಪಟ್ಟಿದ್ದರು: ಕಾರಂತರ ಪ್ರಶಸ್ತಿಗೆ ಹೆಸರು ಅಂತಿಮಗೊಂಡಿರುವುದರಿಂದ ಅವರು ಖುಷಿಯಲ್ಲಿದ್ದರು. ನನ್ನ ಹೆಸರು ಕಾರಂತರ ಪ್ರಶಸ್ತಿಗೆ ಅಂತಿಮಗೊಂಡಿದೆಯಂತೆ ಎಂದು ಎಲ್ಲರಲ್ಲೂ ಹೇಳಿಕೊಳ್ಳುತ್ತಿದ್ದರು. ಆದರೆ ಅನಾರೋಗ್ಯದಿಂದ ಬಳಲುತ್ತಿದ್ದ ಮಾಲತಿ ಅವರು ಏ.1ರಂದು ಇಹಲೋಕ ತ್ಯಜಿಸಿದರು. ಹೀಗಾಗಿ ಪ್ರಶಸ್ತಿ ಸ್ವೀಕರಿಸುವ ಆ ಆಸೆ ಕನಸಾಗಿಯೇ ಉಳಿಯಿತು ಎಂದು ಮಾಲತಿ ಅವರ ಪತಿ ಪುರುಷೋತ್ತಮ ತಲವಾಟ ಬೇಸರ ವ್ಯಕ್ತಪಡಿಸಿದರು.

ಹಿರಿಯ ಹವ್ಯಾಸಿ ರಂಗಭೂಮಿ ಕಲಾವಿದೆ ದಿ.ಎಸ್‌.ಮಾಲತಿ ಸಾಗರ ಅವರಿಗೆ ಕಾರಂತರ ಪ್ರಶಸ್ತಿ ನೀಡಬೇಕೆಂದು ಹಿರಿಯ ರಂಗಕರ್ಮಿಗಳು ಮನವಿ ಸಲ್ಲಿಸಿದ್ದಾರೆ. ಈ ಮನವಿ ಪತ್ರವನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ.
-ಕೆ.ಎಂ.ಜಾನಕಿ ನಿರ್ದೇಶಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

* ದೇವೇಶ ಸೂರಗುಪ್ಪ

ಟಾಪ್ ನ್ಯೂಸ್

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

17-

Bengaluru: ದೆಹಲಿಯ ನೇಲ್‌ ಆರ್ಟಿಸ್ಟ್ ನೇಣಿಗೆ

16-cm

Bengaluru: ತ್ಯಾಜ್ಯ ವರ್ಗಾವಣೆ ಘಟಕಕ್ಕೆ ಸಿದ್ದರಾಮಯ್ಯ ಚಾಲನೆ

15-ccb

Bengaluru: ಜೀವಾ ಆತ್ಮಹತ್ಯೆ: ಡಿವೈಎಸ್ಪಿಗೆ ಸಿಸಿಬಿ ನೋಟಿಸ್‌ ಸಾಧ್ಯತೆ

14-fruad

Bengaluru: ಸಾಲ ಕೊಡಿಸುವುದಾಗಿ 37 ಲಕ್ಷ ವಂಚನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

byndoor

Bantwal: ಅಪಘಾತ; ಗಾಯಾಳು ಸಾವು

POlice

Kumble: ಬುರ್ಖಾಧಾರಿ ಯುವಕ ವಶಕ್ಕೆ; ಕುಖ್ಯಾತ ಕಳವು ತಂಡದ ಸದಸ್ಯನೇ ಎಂಬ ಬಗ್ಗೆ ತನಿಖೆ

5

Mangaluru: ಎಎಸ್‌ಐಗೆ ಗಾಯ; ಡಿವೈಎಫ್ಐ ವಿರುದ್ಧ ಪ್ರಕರಣ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Untitled-1

Missing case: ಎರಡು ಪ್ರತ್ಯೇಕ ನಾಪತ್ತೆ ಪ್ರಕರಣ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.