ಭೂಮಿಗೆ ಬಿದ್ದ ನೀರಿಗೆ ನಾವೇ ಹಕ್ಕುದಾರರು
|ಅಂತರ್ಜಲ ಮರುಪೂರಣಕ್ಕೆ ಸಹಕರಿಸಲು ಮನವಿ |ಜಲ ಹಕ್ಕು ಕಸಿಯುವ ಕಾಯ್ದೆ ವಿರುದ್ಧ ಆಂದೋಲನಕ್ಕೆ ಕರೆ
Team Udayavani, Jul 22, 2019, 10:20 AM IST
ಬೆಳಗಾವಿ: ನಮ್ಮ ಭೂಮಿ ನಮ್ಮ ನೀರು ಎಂಬ ಪರಿಕಲ್ಪನೆಯಡಿ ಕರ್ನಾಟಕ ಬರ ಮುಕ್ತವಾಗಬೇಕಾಗಿದೆ. ರೈತರು ತಮ್ಮ ಭೂಮಿಯಲ್ಲಿ ಬಿದ್ದ ನೀರನ್ನು ಸಂಗ್ರಹಿಸಿ ಸದ್ಬಳಕೆ ಮಾಡಿಕೊಂಡರೆ ಬರ ಎನ್ನುವುದೇ ಇರುವುದಿಲ್ಲ. ಜತೆಗೆ ದೇಶದಲ್ಲಿ ಆಹಾರ ಭದ್ರತಾ ಕಾಯ್ದೆ ಮಾದರಿಯಲ್ಲಿ ನೀರು ಭದ್ರತಾ ಕಾಯ್ದೆ ಜಾರಿಗೆ ತರುವ ಮೂಲಕ ರೈತರನ್ನು ಉಳಿಸುವ ಕಾರ್ಯ ಕೇಂದ್ರ ಸರ್ಕಾರ ಮಾಡಬೇಕು ಎಂದು ಜಲತಜ್ಞ ಡಾ| ರಾಜೇಂದ್ರ ಸಿಂಗ್ ಆಗ್ರಹಿಸಿದರು.
ನಗರದ ಮಹಾತ್ಮ ಗಾಂಧಿ ಭವನದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ 39ನೇ ರೈತ ಹುತಾತ್ಮ ದಿನದ ನಿಮಿತ್ತ ರವಿವಾರ ನಡೆದ ರೈತರ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಭೂಮಿಯಲ್ಲಿ ಬಿದ್ದ ನೀರಿಗೆ ನಾವೇ ಹಕ್ಕುದಾರರು. ಅಂತರ್ಜಲ ಮಟ್ಟ ಹೆಚ್ಚಿಸುವ ಸಂಕಲ್ಪ ಪ್ರತಿಯೊಬ್ಬರ ರೈತರೂ ಮಾಡಬೇಕು. ಭೂಮಿಯೊಳಗಿನ ನೀರು ರಿಸರ್ವ್ ಬ್ಯಾಂಕ್ ತರಹ ಅವಿತುಕೊಂಡಿದೆ. ಅದನ್ನು ರಿಚಾರ್ಜ್ ಮಾಡುವ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.
ಕೇಂದ್ರ ಸರ್ಕಾರ ನೀರಿನ ಹಕ್ಕನ್ನು ಪಡೆಯಲು ಪ್ರಯತ್ನಿಸುತ್ತಿದೆ. ಅದಕ್ಕೆ ಆಸ್ಪದ ನೀಡಬಾರದು. ನೀರು ಕಾಯ್ದೆ ವಿರುದ್ಧ ಆಂದೋಲನ ಆಗಬೇಕಿದೆ. ಕರ್ನಾಟಕದಲ್ಲಿ ಜಲಸಂಕಟ ಅಧಿಕ ಆಗಿದ್ದು, ಅದಕ್ಕೆ ತಿಲಾಂಜಲಿ ಹೇಳಬೇಕಾಗಿದೆ. ನೀರು, ಭೂಮಿ ಮತ್ತು ಅರಣ್ಯ ಸಂರಕ್ಷಣೆಗೆ ಮುಂದಾಗಬೇಕು. ನೀರಿನ ವ್ಯಾಪಾರಕ್ಕೆ ಷಡ್ಯಂತ್ರ ರೂಪಿಸಿದ್ದು, ತಡೆಯಲು ಮುಂದಾಗಬೇಕು ಎಂದು ಹೇಳಿದರು.
ರೈತ ಸಂಘದ ಮುಖಂಡ ಪ್ರೊ| ರವಿವರ್ಮ ಕುಮಾರ ಮಾತನಾಡಿ, ದೇಶದ ಸಂವಿಧಾನದಲ್ಲಿ ಕಾರ್ಮಿಕರು, ಅಲ್ಪಸಂಖ್ಯಾತರು, ಬುಡಕಟ್ಟು ನಿವಾಸಿಗಳು, ಕಾರ್ಮಿಕರು, ಆದಿವಾಸಿಗಳು ಸೇರಿದಂತೆ ಅನೇಕರಿಗೆ ಹಕ್ಕುಗಳನ್ನು ನೀಡಲಾಗಿದೆ. ಆದರೆ ರೈತರಿಗೆ ಸಂವಿಧಾನದಲ್ಲಿ ಏನೂ ನೀಡಿಲ್ಲ. ವಿಶ್ವಸಂಸ್ಥೆ ಎನ್ನುವುದು ರೈತರನ್ನು ಸುಲಿಗೆ ಮಾಡುವ ಅಂತಾರಾಷ್ಟ್ರೀಯ ಸಂಸ್ಥೆ ಎಂದು ದೂರಿದರು.
ವಿಶ್ವಸಂಸ್ಥೆ ಎದುರು ಜಿನೇವಾಗೆ ರೈತರನ್ನು ಭಾರತದಿಂದ ಕಟ್ಟಿಕೊಂಡು ಹೋಗಿ ಒಂದು ವಾರ ಕಚೇರಿ ಬಂದ್ ಮಾಡಿಸಿದ್ದ ಕೀರ್ತಿ ಪ್ರೊ| ನಂಜುಂಡಸ್ವಾಮಿ ಅವರದ್ದಾಗಿತ್ತು. ಅಂದು ರೈತರ ಹಕ್ಕುಗಳ ಘೋಷಣೆಗೆ ಜಗತ್ತಿನ 123 ದೇಶಗಳು ಬೆಂಬಲ ವ್ಯಕ್ತಪಡಿಸಿದ್ದವು. ಆದರೆ ಅಮೆರಿಕ ಹಾಗೂ ಇಂಗ್ಲೆಂಡ್ ಮಾತ್ರ ಇದನ್ನು ವಿರೋಧಿಸಿವೆ ಎಂದು ದೂರಿದರು.
ರೈತರು ತಮ್ಮ ಸಮಸ್ಯೆಗಳಿಗೆ ಸಂವಿಧಾನಾತ್ಮಕ ಪರಿಹಾರ ಕಂಡುಕೊಳ್ಳಲು ಕೂಡಲೇ ಕೇಂದ್ರ ಸರಕಾರ ವಿಶೇಷ ಕಾಯ್ದೆ ರಚಿಸಬೇಕು. ವಿಶೇಷ ಇಲಾಖೆ ರಚಿಸಬೇಕು. ಸಂವಿಧಾನ ತಿದ್ದುಪಡಿ ಮಾಡಿ ರೈತ ಕಲ್ಯಾಣ ಅಂಶಗಳನ್ನು ಅದರಲ್ಲಿ ಅಳವಡಿಸಬೇಕು. ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ರೈತರ ಹಕ್ಕುಗಳನ್ನು ಪ್ರತಿಪಾದಿಸಿದವರು ಪ್ರೊ| ನಂಜುಂಡಸ್ವಾಮಿ. ಆಗ ಬಿತ್ತಿದ ಬೀಜಗಳು ಈಗ ಮೊಳಕೆ ಒಡೆಯುತ್ತಿವೆ. ನೆಲ ಹಾಗೂ ಜಲ ರಕ್ಷಣೆ ಸಿಗುವಂತಾಗಬೇಕು ಎಂದರು.
ಚಾಮರಸ ಮಾಲೀ ಪಾಟೀಲ ಪ್ರಾಸ್ತಾವಿಕ ಮಾತನಾಡಿ, ರೈತರು ಸಂಕಷ್ಟದಲ್ಲಿದ್ದಾಗ ಶಾಸಕರು ರೆಸಾರ್ಟ್‌ನಲ್ಲಿ ಇದ್ದಾರೆ. ಕರ್ನಾಟಕವನ್ನು ಬರ ಮುಕ್ತ ಮಾಡಬೇಕಿದೆ. ಮಳೆ ನೀರು ಸಂಗ್ರಹ ಮಾಡಲು ಆಂದೋಲನ ಆಗಬೇಕಿದೆ. ಇದು ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ. ಕೆಲವರು ರೈತ ಚಳವಳಿ ದುರ್ಬಳಕೆ ಮಾಡುತ್ತಿದ್ದು, ಅಕ್ರಮ ಹಣ ಮಾಡುವಲ್ಲಿ ನಿರತರಾಗಿದ್ದು ದುರದೃಷ್ಟಕರ. ಇದಕ್ಕೆ ಕಡಿವಾಣ ಹಾಕಬೇಕಿದೆ. ಮಹದಾಯಿ ನದಿ ನೀರು ಹಂಚಿಕೆ ತೀರ್ಪು ಗೆಜೆಟ್ ನೋಟಿಫಿಕೇಶನ್‌ಗಾಗಿ ಹೋರಾಟ ನಡೆಸಬೇಕಾಗಿದೆ. ಜನಪತಿನಿಧಿಗಳಿಗೆ ಬುದ್ಧಿ ಕಲಿಸಲು ಪರ್ಯಾಯ ರಾಜಕಾರಣ ಅವಶ್ಯವಿದೆ ಎಂದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಶಾಸಕ ಬಿ.ಆರ್. ಪಾಟೀಲ, ತಮಿಳುನಾಡಿನ ರೈತ ಮುಖಂಡ ಮುತ್ತು ಸೇಲ್ವಂ, ಪಂಚನಗೌಡ ದ್ಯಾಮನಗೌಡ ಮಾತನಾಡಿದರು. ರೈತ ಮುಖಂಡರಾದ ಎ.ಎಚ್. ಸಾಹುಕಾರ, ಕೆ.ಪಿ. ಸಿಂಗ್, ಅಭಿರುಚಿ ಗಣೇಶ, ಸೋಮು ರೈನಾಪುರ, ಮುತ್ತಪ್ಪ ಕೋಮಾರ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi case:ಬೆಳಗಾವಿ ಕೋರ್ಟ್ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ
Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ
Dinesh Gundu Rao; ಬಾಣಂತಿಯರ ಸಾ*ವು ಪ್ರಕರಣ ನ್ಯಾಯಾಂಗ ತನಿಖೆಗೆ
ರಾತ್ರಿಯಿಡೀ ಸಿ.ಟಿ. ರವಿಯನ್ನು ಸುತ್ತಾಡಿಸಿದ ಪೊಲೀಸರು: ಮಧ್ಯರಾತ್ರಿ ರಸ್ತೆಯಲ್ಲೇ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.