ವರ್ಷದಿಂದ ನಿಂತೇ ಇರುವ ತಹಶೀಲ್ದಾರ್‌ ವಾಹನ


Team Udayavani, Jul 22, 2019, 11:38 AM IST

uk-tdy-1

ಜೋಯಿಡಾ: ತಾಲೂಕಿನ ದಂಡಾಧಿಕಾರಿಗಳಿಗೆ ಕರ್ತವ್ಯ ಪಾಲನೆಗಾಗಿ ಹಾಗೂ ತಾಲೂಕಿನ ಜನರ ಸಮಸ್ಯೆಗೆ ಶೀಘ್ರ ಸ್ಪಂದನೆಗಾಗಿ ಓಡಾಡಲು ಸರಕಾರ ನೀಡಿರುವ ವಾಹನ ಕಳೆದ ಒಂದು ವರ್ಷದಿಂದ ಕೆಟ್ಟು ನಿಂತಿದೆ. ಇದರಿಂದಾಗಿ ತಾಲೂಕಿನಾದ್ಯಂತ ಓಡಾಟಕ್ಕೆ ತೊಂದರೆ ಉಂಟಾಗಿದೆ.

ವರ್ಷದಿಂದ ರಿಪೇರಿ ಎಂದು ಸರಿಪಪಡಿಸಲು ಏಷ್ಟೇ ಪ್ರಯತ್ನಿಸಿದರೂ ಸರಿಯಾಗುತ್ತಿಲ್ಲ. ಇದನ್ನು ಕಳೆದ ಹಲವಾರು ವರ್ಷಗಳಿಂದ ರಿಪೇರಿ ಮಾಡಿ ಓಡಿಸುತ್ತಲೇ ಬರಲಾಗಿತ್ತು. ಆದರೆ ಹಲವು ಬಾರಿ ರಿಪೇರಿ ಮಾಡಿ ದೂರದ ಹಳ್ಳಿಗಳಿಗೆ ಹೋದಾಗ ದಾರಿ ಮಧ್ಯೆ ಕೈಕೊಟ್ಟು, ಬೇರೆ ವಾಹನಗಳಲ್ಲಿ ತಹಶೀಲ್ದಾರರು ಕಚೇರಿ ತಲುಪಿದ ಘಟನೆ ಕೆಲಬಾರಿ ನಡೆದಿದೆ.

ಜೋಯಿಡಾ ತಾಲೂಕು ವಿಸ್ತಿರ್ಣದಲ್ಲಿ ಅತ್ಯಂತ ದೊಡ್ಡದು. ಯಾವುದೇ ಆಡಳಿತಾತ್ಮಕ ಕಾರ್ಯದಲ್ಲಿ ಒಂದು ತುದಿಯಿಂದ ಇನ್ನೊಂದು ತುದಿಗಳಿಗೆ ಹೋಗಲು ಸುಮಾರು 50ರಿಂದ 100 ಕಿ.ಮೀ. ಹೋಗಬೇಕಾಗುತ್ತಿದೆ. ಕೊಡಸಳ್ಳಿಯಂತ ದೂರದ ಪ್ರದೇಶಕ್ಕೆ ಹೋಗಲು ಜೋಯಿಡಾದಿಂದ ಕದ್ರಾ ಮೂಲಕ ನೂರಾರು ಕಿ.ಮೀ. ದೂರ ಸಾಗಬೇಕಿದೆ. ಇಂತಹ ಸಂದರ್ಭದಲ್ಲಿ ವಾಹನವಿಲ್ಲದೆ ತಹಶೀಲ್ದಾರರು ಅಗತ್ಯ ಕರ್ತವ್ಯ ನಿಮಿತ್ತ ಖಾಸಗಿ ವಾಹನದ ಮೊರೆ ಹೋಗಬೇಕಾದ ಅನಿವಾರ್ಯತೆಯಿದೆ. ಇದಲ್ಲದೆ ಸಚಿವರ ಸಭೆ, ಜಿಲ್ಲಾಮಟ್ಟದ ಸಭೆ, ತಾಲೂಕು ಅಧಿಕಾರಿಗಳ ಸಭೆ ಹೀಗೆ ಹಲವು ಆಡಳಿತಾತ್ಮಕ ಕಾರ್ಯದಲ್ಲಿ ವಾಹನವಿಲ್ಲದೇ ಪರದಾಡುತ್ತಿದ್ದಾರೆ.

ಸ್ವಂತ ವಾಹನದಲ್ಲಿ ಸಂಚಾರ: ಮಳೆಗಾಲ ಸೇರಿದಂತೆ ಇನ್ನಿತರ ಸಮಸ್ಯೆ ಎದುರಿಸಲು ತೊಂದರೆಯಾಗಬಾರದೆಂದು ಈಗಿನ ತಹಶೀಲ್ದಾರ್‌ ಸಂಜಯ ಕಾಂಬಳೆ ತಮ್ಮ ಸ್ವಂತ ವಾಹನದಲ್ಲಿಯೇ ಕಳೆದ ಕೆಲ ತಿಂಗಳುಗಳಿಂದ ಓಡಾಡಿಕೊಂಡಿದ್ದಾರೆ. ಕೆಲ ಗ್ರಾಪಂಗಳಿಗೆ ಅವರ ವಾಹನ ಕೂಡಾ ಹೋಗದೆ ಕಷ್ಟ ಎದುರಿಸುತ್ತಿದ್ದಾರೆ. ಆದರೆ ಕರ್ತವ್ಯ ಪಾಲನೆಯ ಜರೂರ ಇರುವ ಸಂದರ್ಭದಲ್ಲಿ ಅನೇಕ ಸಾರಿ ತಮ್ಮ ವಾಹನದ ಉಪಯೋಗ ಮಾಡಿಕೊಂಡು ತಮ್ಮ ಜವಾಬ್ದಾರಿ ನಿಭಾಯಿಸಿರುತ್ತಾರೆ.

ಮಳೆಗಾಲದಲ್ಲಿ ತೀರಾ ಅಗತ್ಯ: ಮಳೆಗಾಲದ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ, ಸೂಪಾ ಡ್ಯಾಮ್‌ ಹಿನ್ನೀರನ ಪ್ರದೇಶದ ಗ್ರಾಮಗಳಲ್ಲಿ ಹಿನ್ನಿರಿನಿಂದ ಉದ್ಭವಿಸುವ ಸಮಸ್ಯೆಗಳು, ಅತಿ ವೃಷ್ಟಿ, ಅನಾವೃಷ್ಟಿಯಿಂದಾಗುವ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳು ಉದ್ಭವಿಸುತ್ತಿದ್ದು, ಇಂತಹ ಸಮಸ್ಯೆಗಳಿಗೆ ತ್ವರಿತವಾಗಿ ಕಾರ್ಯೋ ನ್ಮೂಖರಾಗಬೇಕಾದ ಅನಿವಾರ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ವಾಹನವಿಲ್ಲದೆ ಪರದಾಡು ವಂತಾದರೆ ಜನಸಾಮಾನ್ಯರಿಗೆ ಆಗುವ ಹಾನಿಗೆ ತಹಶೀಲ್ದಾರರ ಕರ್ತವ್ಯಲೋಪ ಕಾರಣವಾಗುವಂತ ಪರಿಸ್ಥಿತಿ ನಿರ್ಮಾಣವಾಗಲಿದೆ.

ಸರಕಾರ ಈ ಬಗ್ಗೆ ಗಮನ ಹರಿಸಿ ಜೋಯಿಡಾ ತಾಲೂಕಿನ ದುರ್ಗಮ ಪ್ರದೇಶ, ದಟ್ಟ ಕಾಡಿನ ಮಧ್ಯದ ಗ್ರಾಮೀಣ ಪ್ರದೇಶ ಮತ್ತು ವಿಸ್ತಾರದ ದೃಷ್ಟಿಯಿಂದ ಅತ್ಯಂತ ಸುರಕ್ಷಿತ ಹಾಗೂ ಕಾಲಮಿತಿಯಲ್ಲಿ ಶೀಘ್ರ ತಲುಪಲು ಅಗತ್ಯ ವಿರುವ ವಿಶೇಷ ವಾಹನ ವ್ಯವಸ್ಥೆ ಮಾಡಬೇಕಿದೆ.

ಟಾಪ್ ನ್ಯೂಸ್

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!

Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!

ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ

ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ

1-wwewqe

Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ

5

Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.