ಗುರು ಸ್ಮರಣೆಯಿಂದ ಬದುಕು ಸಾರ್ಥಕ
ಚನ್ನಬಸವಾಶ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆಯೋಜನೆ
Team Udayavani, Jul 22, 2019, 2:55 PM IST
ಭಾಲ್ಕಿ: ಚನ್ನಬಸವಾಶ್ರಮದಲ್ಲಿ ನಡೆದ ಶ್ರೀ ಗುರು ಪೂಜಾ ಉತ್ಸವ ಕಾರ್ಯಕ್ರಮದಲ್ಲಿ ಧ್ವಜ ವಂದನ ನೆರವೇರಿಸಲಾಯಿತು.
ಭಾಲ್ಕಿ: ಗುರು ಎಂದರೆ ಜ್ಞಾನದ ಆಗರ. ಗುರುವಿನ ಸ್ಮರಣೆಯಲ್ಲಿ ಜೀವನ ಸಾಗಿಸಿದರೆ ಬದುಕು ಸಾರ್ಥಕವಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಕರ್ನಾಟಕ ಪ್ರಾಂತ ಸಹ ಸೇವಾ ಪ್ರಮುಖ, ಹಗರಿಬೊಮ್ಮನ ಹಳ್ಳಿಯ ದುರ್ಗಣ್ಣ ಹೇಳಿದರು.
ಪಟ್ಟಣದ ಚನ್ನಬಸವಾಶ್ರಮದಲ್ಲಿ ರವಿವಾರ ಆಷಾಢ ಕೃಷ್ಣ ಚತುರ್ಥಿ ನಿಮಿತ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆಯೋಜಿಸಿದ್ದ ಶ್ರೀ ಗುರು ಪೂಜಾ ಉತ್ಸವ ಕಾರ್ಯಕ್ರಮದಲ್ಲಿ ಅವರು ಬೌದ್ಧಿಕ್ ಪ್ರವಚನ ನೀಡಿದರು.
ನಮ್ಮ ದೇಶದ ಋಷಿಮುನಿಗಳ ಪರಂಪರೆ ಅಗಾಧವಾಗಿದೆ. ಅವರು ಜಗತ್ತಿಗೆ ಸಾಕಷ್ಟು ಜ್ಞಾನ ನೀಡಿದ್ದಾರೆ. ಆದರೆ ಅವರು ಯಾರೂ ತಮ್ಮ ಹೆಸರು ಹೇಳಿಕೊಂಡಿಲ್ಲ, ಆದರೆ ಜಗತ್ತಿನ ಅನೇಕ ದಾರ್ಶನಿಕರು ತಾವು ತಿಳಿಸಿದ ಜ್ಞಾನಕ್ಕೆ ತಮ್ಮ ಹೆಸರು ಕೊಟ್ಟಿದ್ದಾರೆ. ಮಾರ್ಕೋನಿಗಿಂತಲೂ ಮೊದಲೇ ರೇಡಿಯೋ ತರಂಗಳ ಬಗ್ಗೆ ಮಾಹಿತಿ ನೀಡಿದ್ದು ನಮ್ಮವರೇ ಆದ ವಿಜ್ಞಾನಿ ಸರ್ ಜಗದೀಶ ಚಂದ್ರ ಭೋಷ್. ಆದರೆ ಅವರು ಅದಕ್ಕೆ ತಮ್ಮ ಹೆಸರು ಕೊಟ್ಟಿಲ್ಲ. ಇಂತಹ ಮಹಾನ್ ಜ್ಞಾನಿಗಳು ನಮ್ಮಲ್ಲಿದ್ದಾರೆ. ಅವರ ಪರಂಪರೆಯೇ ನಮ್ಮ ಭಾರತ. ಇಂತಹ ಜ್ಞಾನಿಗಳ ನಾಡಿನಲ್ಲಿ ಜನಸಿದ ನಾವೇ ಧನ್ಯರು ಎಂದರು.
ನಮಗೆ ಹುಟ್ಟು ಗೊತ್ತಿಲ್ಲ, ಆದರೆ ಸಾವು ನಿಶ್ಚಿತ. ಜೀವನ ಸಾರ್ಥಕತೆ ಮಾಡಿಕೊಳ್ಳುವುದೇ ಬದುಕು. ಗುರುವಿಲ್ಲದೇ ಯಾರ ಜೀವನವೂ ಪರಿಪೂರ್ಣವಲ್ಲ. ಗುರುವಿಗೆ ಪ್ರಾಧಾನ್ಯತೆ ಇರುವುದು ಹಿಂದೂ ಧರ್ಮದಲ್ಲಿ ಮಾತ್ರ. ನಮ್ಮಿಂದ ಸಮಾಜಕ್ಕೇನಾದರೂ ಪುಣ್ಯದ ಕೆಲಸ ಮಾಡುವುದೇ ಸಾರ್ಥಕ ಜೀವನ. ಈ ಜೀವನದ ಅಂತಿಮ ಲಕ್ಷ ಮುಟ್ಟಿಸುವಾತನೆ ಗುರು. ಅದಕ್ಕಾಗಿ ಗುರುವಿಗೆ ಶರಣು ಹೋದರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಮಕ್ಕಳ ತಜ್ಞ ಡಾ|ಯುವರಾಜ ಜಾಧವ, ಆತ್ಮ ಪರಮಾತ್ಮನನ್ನು ಸೇರುವ ಮಾರ್ಗ ತಿಳಿಸುವಾತನೇ ಗುರು. ಹೀಗಾಗಿ ನಮ್ಮ ಅಂತಿಮ ಲಕ್ಷ ಮುಟ್ಟಲು ಗುರುವಿಗೆ ಶರಣು ಹೋಗಬೇಕು ಎಂದು ಹೇಳಿದರು.
ಮಾಜಿ ಶಾಸಕ ಪ್ರಕಾಶ ಖಂಡ್ರೆ, ಬಿಜೆಪಿ ಪ್ರಮುಖ ಡಿ.ಕೆ.ಸಿದ್ರಾಮ, ಸುರೇಶ ಬಿರಾದಾರ, ಶಿವರಾಜ ಗಂದಗೆ, ಸೂರಜಸಿಂಗ್ ರಜಪೂತ, ಧನರಾಜ ನೀಲಂಗೆ, ಪ್ರಕಾಶ ಮಾಶೆಟ್ಟೆ ಮತ್ತಿತರರು ಇದ್ದರು. ಪ್ರಾರಂಭದಲ್ಲಿ ಧ್ವಜ ವಂದನ ಕಾರ್ಯಕ್ರಮ ನಡೆಯಿತು. ಭಗವಾ ಧ್ವಜಕ್ಕೆ ಎಲ್ಲರೂ ವಂದನೆ ಸಲ್ಲಿಸಿದರು. ಶಿವಕುಮಾರ ಕಂಜೋಳಗೆ ಸ್ವಾಗತಿಸಿದರು. ಶಿವಲಿಂಗ ಕುಂಬಾರ ನಿರೂಪಿಸಿದರು. ಈಶ್ವರ ರುಮ್ಮಾ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.