ಇಸ್ರೋ ಸಾಧನೆಗೆ ಸಲಾಂ;16 ನಿಮಿಷದಲ್ಲಿ ಕಕ್ಷೆಗೆ ,48 ದಿನದ ಬಳಿಕ ಚಂದ್ರನ ಅಂಗಳ ಪ್ರವೇಶ
Team Udayavani, Jul 22, 2019, 3:36 PM IST
ಆಂಧ್ರಪ್ರದೇಶ:ಚಂದ್ರಯಾನ 2 ರಾಕೆಟ್ ಅನ್ನು ಜಿಎಸ್ ಎಲ್ ವಿ ಎಂಕೆIII-ಎಂ1 ಯಶಸ್ವಿಯಾಗಿ ನಭಕ್ಕೆ ಹೊತ್ತೊಯ್ದಿದ್ದು, ವಿಜ್ಞಾನಿಗಳ ತಂಡಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ.
ಚಂದ್ರನ ಮೇಲ್ಮೈಯನ್ನು ಅಧ್ಯಯನ ನಡೆಸುವ ಭಾರತದ ಐತಿಹಾಸಿಕ ಸಾಧನೆಗೆ ಮೊದಲ ಹಂತದ ಜಯ ಸಿಕ್ಕಂತಾಗಿದೆ. ವಿಜ್ಞಾನಿಗಳ ತಂಡ ತಮ್ಮ ವೈಯಕ್ತಿಕ ಸಮಯ ಬದಿಗಿಟ್ಟು ಚಂದ್ರಯಾನ 2 ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ವಿಜ್ಞಾನಿಗಳ ಶ್ರಮ ದೇಶ ಹೆಮ್ಮೆ ಪಡುವಂತಾದ್ದು ಎಂದು ಚಂದ್ರಯಾನ 2 ಉಡ್ಡಯನದ ಯಶಸ್ವಿ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಚಂದ್ರಯಾನ 2ರ ಮೊದಲ ಹಂತ ಯಶಸ್ವಿಯಾಗಿದ್ದು, ರಾಕೆಟ್ ಭೂಕಕ್ಷೆಯನ್ನು ಸೇರಿದ್ದು, 48 ದಿನಗಳ ಬಳಿಕ ರಾಕೆಟ್ ಚಂದ್ರನ ಅಂಗಳ ಪ್ರವೇಶಿಸಲಿದೆ ಎಂದು ವಿವರಿಸಿದರು.
ಜಿಎಸ್ ಎಲ್ ವಿ ಎಂಕೆIII-ಎಂ1 ರಾಕೆಟ್ ಮೂರು ಹಂತವನ್ನು ಒಳಗೊಂಡಿದ್ದು, ಒಟ್ಟು 43.3 ಮೀಟರ್ ನಷ್ಟು ಎತ್ತರವಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮೋಡ ಮುಸುಕಿದ ಆಕಾಶದತ್ತ ಮುಖಮಾಡಿದ್ದ “ಬಾಹುಬಲಿ ರಾಕೆಟ್ 2.43ಕ್ಕೆ ನಭಕ್ಕೆ ಚಿಮ್ಮಿತ್ತು. 3850 ಕೆಜಿ ತೂಕದ ಚಂದ್ರಯಾನ 2 ರಾಕೆಟ್ 16 ನಿಮಿಷಗಳಲ್ಲಿ ವ್ಯೂಮನೌಕೆ ಭೂ ಕಕ್ಷೆ ಸೇರಿತ್ತು ಎಂದು ಶಿವನ್ ಮಾಹಿತಿ ನೀಡಿದರು.
ಆಧುನಿಕ ವೈಜ್ಞಾನಿಕ ಸಂಶೋಧನೆಗೆ ಸಹಕಾರಿಯಾಗಲಿರುವ ಚಂದ್ರಯಾನ 2 ಯಶಸ್ವಿ ಉಡ್ಡಯನದಿಂದ ಚಂದ್ರನ ಮೇಲ್ಮೈ ಅಧ್ಯಯನ ನಡೆಸಲಿದೆ. ಬಾಹುಬಲಿ ರಾಕೆಟ್ ಸೆಪ್ಟೆಂಬರ್ 6ರಂದು ಚಂದ್ರನ ಅಂಗಳ ತಲುಪಲಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.