ಚಂದ್ರಯಾನ 2ರಲ್ಲಿ ಗ್ರಾಮೀಣ ಪ್ರತಿಭೆ ಚಂದ್ರಕಾಂತ್ ಶ್ರಮ
ಕಲ್ಕತ್ತಾದ ಶಿಬ್‌ಪುರ್ ಗ್ರಾಮದ ಕೃಷಿಕನ ಮಗ
Team Udayavani, Jul 22, 2019, 8:54 PM IST
ಮಣಿಪಾಲ: ‘ಭಾರತದ ಕನಸಿನ ಯೋಜನೆ ಚಂದ್ರಯಾನ 2 ಯಶಸ್ವಿಯಾಗಿ ಉಡ್ಡಯನಗೊಂಡಿದೆ. ಇದಕ್ಕಾಗಿ ಇಡೀ ವಿಶ್ವವೇ ‘ಭಾರತದತ್ತ ನೋಡುತ್ತಿತ್ತು. ಈ ಯೋಜನೆಯ ಹಿಂದೆ ಹಲವಾರು ವಿಜ್ಞಾನಿಗಳು ಕೆಲಸಮಾಡಿದ್ದಾರೆ. ಅವರ ಶ್ರಮ ಪ್ರಾಥಮಿಕವಾಗಿ ಯಶಸ್ವಿಯಾಗಿದೆ. ಆ ತಂಡದಲ್ಲಿ ಕೊಲ್ಕತಾದ ಕೃಷಿಕನ ಮಗನೂ ಸೇರಿದ್ದ ಎಂಬ ಸಂಗತಿ ಬಯಲಾಗಿದೆ.
ಕೊಲ್ಕತಾದ ಹೂಗ್ಲಿಯ ಶಿಬ್‌ಪುರ್ ಗ್ರಾಮದ ಕೃಷಿಕ ಮಧುಸೂದನ್ ಅವರ ಪುತ್ರ ಚಂದ್ರಕಾಂತನ ಪಾತ್ರ ಮಹತ್ವದ್ದಾಗಿತ್ತು. ಬಡ ರೈತ ಕುಟುಂಬ ಅವರದು. ತಮ್ಮ ಮಗನಿಗೆ ಸೂರ್ಯಕಾಂತ್ ಎಂದು ಹೆಸರು ಇಡಲು ಇಚ್ಚೆ ಹೊಂದಿದ್ದರಂತೆ. ಆದರೆ, ಶಿಕ್ಷಕರೊಬ್ಬರು ಚಂದ್ರಕಾಂತ್ ಎಂದು ಹೆಸರು ಇಡಲು ಸೂಚಿಸಿದ್ದರು. ಆ ಪ್ರಕಾರ ಚಂದ್ರಕಾಂತ್ ಎಂದು ಹೆಸರು ಇಟ್ಟಿದ್ದರು.
ಇದೀ ಚಂದ್ರಯಾನ 2ರ ತಂಡದಲ್ಲಿ ಚಂದ್ರಕಾಂತ್ ಎಂಬ ಹೆಸರಿನ ವಿಜ್ಞಾನಿ ಸೇರಿಕೊಂಡಿದ್ದು, ಕಾಕತಾಳೀಯವಾಗಿದೆ. ಚಂದ್ರಕಾಂತ್ ಚಂದ್ರಯಾನದಲ್ಲಿ ಹಿರಿಯ ವಿಜ್ಞಾನಿಯಾಗಿ ಬದಲಾಗಿದ್ದಾರೆ. ಚಂದ್ರಕಾಂತ್ ಅವರು ಉಪಗ್ರಹದ ಅಂಟೇನಾ ಸಿಸ್ಟಮ್ ಅನ್ನು ರೂಪಿಸಿದ್ದಾರೆ. ಚಂದ್ರಯಾನ-1, ಜಿಎಸ್‌ಎಟಿ-12 ಸೇರಿ ಮೊದಲಾದ ಕಾರ್ಯಗಳಲ್ಲಿ ಇವರು ಬಹಳ ಮುಖ್ಯಪಾತ್ರ ವಹಿಸಿದ್ದಾರೆ. ಪ್ರಸ್ತುತ ಚಂದ್ರಕಾಂತ್ ಉಪ ಯೋಜನಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
2001ರಲ್ಲಿ ಇಸ್ರೋ ಸೇರಿದ ಇವರು ತಮ್ಮ ಪರಿಶ್ರಮ ಮತ್ತು ಕಾರ್ಯ ಬದ್ಧತೆಗೆ ಗುರುತಿಸಿಕೊಂಡಿದ್ದರು. ಚಂದ್ರಕಾಂತ್ ಅವರ ಹಿರಿಯ ಸಹೋದರ ಶಶಿಕಾಂತ್ ಅವರೂ ವಿಜ್ಞಾನಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
MUST WATCH
ಹೊಸ ಸೇರ್ಪಡೆ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.