ಕಣ್ಣಲ್ಲಿನ ಬೆಳಕು ಆರುವ ಮುನ್ನ ಬಾ
Team Udayavani, Jul 23, 2019, 5:00 AM IST
ಪ್ರಾರ್ಥಿಸುವ, ನಿನ್ನನ್ನು ಆರಾಧಿಸುವ, ಅಭಿಮಾನದಿಂದ ನೋಡುವ, ನಿನಗಾಗಿ ಒಂದೆರೆಡು ಕಣ್ಣೀರು ಹಾಕೋ ಒಂದು ಜೀವ ಇದೆ ಅನ್ನೋದನ್ನ ಯಾವತ್ತೂ ಮರಿಬೇಡ ಕಣೋ.
ಡಿಯರ್ ಈಡಿಯಟ್,
ಯಾಕೋ ಒಂದು phone ಇಲ್ಲ? ಅಟ್ಲೀಸ್ಟ್ ಒಂದು ಎಸ್ಸೆಮ್ಮೆಸ್ಸಾದ್ರು ಬೇಡ್ವೇನೊ? ಅಂದ ಹಾಗೆ, ನಿನ್ನೆ ರಾತ್ರಿ ಕನಸಿಗ್ಯಾಕೆ ಬರಲಿಲ್ಲ? ನನ್ನ ಇಷ್ಟಿ ಷ್ಟಿಷ್ಟಿಷ್ಟೇ ಕಾಡುವ ಕೆಲಸ ಬಾಕಿ ಉಳಿಯಿತಲ್ಲೋ ? ಅದ್ಯಾರು ಹೊಸ ಗೆಳತಿ? ನೀನು- ಶ್ರೀ ಕೃಷ್ಣನ ಚಿಕ್ಕಪ್ಪನ ಮಗನ ತರ ಆಡ್ತೀಯಲ್ಲೋ? ಕಾಲೇಜಿಗೆ ಹೊಸ ಹುಡುಗಿ ಬಂದ್ರೆ ಸಾಕು, ನಿನಗೆ ಮೈಯೆಲ್ಲ ಕೊಳಲಾಗುತ್ತೆ ಅಲ್ವ? ಹೊಸ ಸುದ್ದಿ ಕೇಳಿದೆ ನಿಜಾನ? ನೀವಿಬ್ರೂ ಮೊನ್ನೆ ಪಿವಿಆರ್ ಮಾಲ್‌ನಲ್ಲಿ ಸಿನಿಮಾ ನೊಡಿದ್ರಂತೆ ? ಕಾಫೀ ಡೇ ನಲ್ಲಿ ಐನೂರ್ ರುಪಾಯಿ ಬಿಲ್ ಬೇರೆ ಮಾಡಿದ್ಯಂತೆ? ಬಿಲ್ ಕೊಟ್ಟವರು ಯಾರು? ಮೊದಲೆ ಸಲ ಅಲ್ವ? ನೀನೇ ಬಿಲ್ ಕೊಟ್ಟು ಬಿಲ್ಡಪ್ ತಗಂಡಿರ್ತೀಯ. ನಿನ್ನ ಆಟಗಳು ಅಂಥವೇ ಅಲ್ವ?
ನಿನ್ನಷ್ಟು ಮರೆವು ನನಗಿಲ್ಲಪ್ಪ ಕೇಳಿಸ್ಕೊ, ಇಲ್ಲಿಯವರೆಗೆ ನಾನು ನಿನಗೆ ಹಾಕಿಸಿದ ಕರೆನ್ಸಿಯ ಒಟ್ಟು ಬಾಬ್ತು ಒಂದು ಸಾವಿರದ ನಾನೂರ ಇಪ್ಪತ್ತು ರೂಪಾಯಿಗಳೂ..! ನಿನ್ನ ಜೊತೆ ನೋಡಿದ ಸಿನಿಮಾಗಳ ಸಂಖ್ಯೆ ಒಟ್ಟು ಆರು ! ಆ ಎಲ್ಲ ಸಿನಿಮಾಗಳ ಟಿಕೇಟಿನ ದುಡ್ಡನ್ನು ನನ್ನ ಪರ್ಸಿಂದಾನೆ ಕಕ್ಕಿಸಿದ್ದೀಯ! ಸಿನಿಮಾದ ಕತ್ತಲಲ್ಲಿ ಎರಡು ಸಲ ನನ್ನ ಜೊತೆ ಕೆಟ್ಟದಾಗಿ ನಡೆದುಕೊಳ್ಳೋಕೆ ಪ್ರಯತ್ನ ಪಟ್ಟೆ ನೀನು, ಆದರೆ ಸುಮ್ಮನೆ ಗದರಿಸಿದಕ್ಕೇನೆ ಸ್ಸಾರಿ ಡಿಯರ್ ಅಂದವನೇ ಬೆಕ್ಕಿನ ಹಾಗೆ ಮುದುರಿ ಕುಳಿತು ಬಿಟ್ಟೆ ಅಲ್ವ ? ಬರೀ ನಿನ್ನ ತಪ್ಪುಗಳನ್ನ ತೋರಿಸಿಕೊಡೊದಕ್ಕೆ ಅಂತಾನೇ ನಾನು ಈ ಪತ್ರ ಬರಿತಾ ಇಲ್ಲ ಕಣೋ, ನನಗೂ ಬರೀ ನಿನ್ನ ತಪ್ಪುಗಳನ್ನೇ ತೋರಿಸಿಕೊಡ್ತ ಇರೋದಕ್ಕೆ ತುಂಬಾನೆ ಹಿಂಸೆ ಆಗ್ತಾ ಇದೆ ಕಣೊ, ಏನು ಮಾಡಲಿ ಹೇಳು, ತುಂಬಾ ನೆನಪಾಗ್ತ ಇದ್ದೀಯ ನೀನು. ನಿನಗೇನು? ನಿನ್ನ ಬಿಂದಾಸ್ ಹುಡುಗಿಯರ ಜೊತೆ ಅರಾಮಾಗಿರ್ತೀಯ. ಆದ್ರೆ ನಾನು? ಹೇಳ್ಳೋ ರಾಜಕುಮಾರ…
ನಿನ್ನಥರಾನೇ ನಾನೂ ಫ್ಲರ್ಟ್ ಮಾಡಬೇಕಾ? ಇಷ್ಟಗಲ ನಗ್ತ ನಗ್ತ ಇರೋ ನಿನ್ನ ಗೆಳತಿಯರ ಮಧ್ಯೆಯೇ, ನಿನ್ನ ಒಳಿತಿಗಾಗಿ ಪ್ರಾರ್ಥಿಸುವ, ನಿನ್ನನ್ನು ಆರಾಧಿಸುವ, ಅಭಿಮಾನದಿಂದ ನೋಡುವ, ನಿನಗಾಗಿ ಒಂದೆರೆಡು ಕಣ್ಣೀರು ಹಾಕೋ ಒಂದು ಜೀವ ಇದೆ ಅನ್ನೋದನ್ನ ಯಾವತ್ತೂ ಮರಿಬೇಡ ಕಣೋ. ಈ ಕಣ್ಣುಗಳಲ್ಲಿರುವ ಬೆಳಕು ಆರಿ ಹೋಗುವ ಮುನ್ನಬಂದು ಬಿಡು.
ಸ್ವಲ್ಪ ಹೊತ್ತು ಮಾತಾಡೋಣ, ಮಾತು ಮುಗಿವ ಮುನ್ನ ಜಗಳ ಆಡೋಣ
ನಾನು ನಾನು…
ಗೀತಾಂಜಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.