“ಪರಂಪರೆಯ ಜೀವನ ಸತ್ಯ ನೆನಪಿಸುವ ಆಟಿ ಆಚರಣೆ ಅನಿವಾರ್ಯ’


Team Udayavani, Jul 23, 2019, 5:51 AM IST

22VNRPIC01

ವಿದ್ಯಾನಗರ: ಮನುಷ್ಯ ಮತ್ತು ಪ್ರಕೃತಿಯೊಂದಿಗಿನ ಅವಿನಾಭಾವ ಸಂಬಂಧವನ್ನು. ಪರಂಪರೆಯ ಆಳವಾದ ಜೀವನ ಸತ್ಯವನ್ನು ನೆನಪಿಸುವ ಆಟಿ ಆಚರಣೆಯು ಇಂದಿನ ಕಾಲಘಟ್ಟದಲ್ಲಿ ಅನಿವಾರ್ಯ.ಎಂದು ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ತಿಳಿಸಿದರು

ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾಸರಗೋಡು ಜಿಲ್ಲಾ ಘಟಕ ಮತ್ತು ಪ್ರಗತಿಬಂಧು-ಸ್ವಸಹಾಯ ಸಂಘಗಳ ಒಕ್ಕೂಟ ಪಾವಳ ಪೈವಳಿಕೆ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ವರ್ಕಾಡಿಯ ಸೆ„ಂಟ್‌ ಜೋಸೆಫ್‌ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಆಟಿಟೊಂಜಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಠಿನ ಕಾಲಘಟ್ಟದಲ್ಲಿ ತಯಾರಿಸುತ್ತಿದ್ದ ವಿವಿಧ ಗಿಡಮೂಲಿಕೆಗಳ, ಹಲಸು ಮುಂತಾದ ಕಾಯಿ ಹಣ್ಣುಗಳ ಆಹಾರವು ಔಷಧದ ಕಣಜವಾಗಿತ್ತು. ಬಗೆಬಗೆಯ ಮದ್ದಿನ ತಿನಿಸುಗಳು, ಪ್ರಕೃತಿಯನ್ನೇ ಅವಲಂಬಿಸಿರುವ ಜೀವನಕ್ರಮ ಸತ್ವಯುತವಾದ ಸಾರವನ್ನೊಳಗೊಂಡ ಆಚರಣೆಗಳಲ್ಲಿ ಕಂಡುಬರುತ್ತಿತ್ತು. ಆದರೆ ಆಧುನಿಕತೆ ನಮ್ಮ ಜೀವನದ ಹಾದಿಯನ್ನೇ ಬದಲಾಯಿಸುವಲ್ಲಿ ಸಫಲವಾಗಿದೆ. ಆದುದರಿಂದ ಜಾನಪದ ಸಂಸ್ಕೃತಿ ಸಂವರ್ಧನೆಗೆ ಉತ್ತು ನೀಡದಿದ್ದಲ್ಲಿ ಭವಿಷ್ಯದ ತಲೆಮಾರಿಗೆ ಅಪಾಯವಿದೆ. ತುಳು ಭಾಷೆ, ಸಂಸ್ಕೃತಿಯೊಂದಿಗೆ ಹೆಜ್ಜೆಹಾಕಿ ಬೆಳೆದುಬಂದ ಕನ್ನಡ ನಾಡು-ನುಡಿ ತೌಳವ-ಕನ್ನಡ ಸಮಾಗಮವಾಗಿ ವಿಶಿಷ್ಟವೆನಿಸಿದೆ. ಎಂದರು.

“ಜಾಗೃತರಾಗಬೇಕು’
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಅವರು ಮಾತನಾಡಿ, ಸ್ಪಷ್ಟತೆ, ಶುದ್ಧತೆಯಿಂದ ಕೂಡಿದ ನಮ್ಮ ಸಂಸ್ಕೃತಿಯ ಬಗ್ಗೆ ಜಾಗೃತಾವಸ್ಥೆಗೆ ಹೋಗಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ಗ್ರಾಮಾಭಿವೃದ್ದಿ ಯೋಜನೆಯ ದಕ್ಷಿಣ ಕನ್ನಡ-ಕಾಸರಗೋಡು ಜಿಲ್ಲೆಯ ನಿರ್ದೇಶಕ ಸತೀಶ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದರು ಕರ್ನಾಟಕ ವಿಧಾನ ಪರಿಷತ್ತಿನ ಪ್ರತಿಪಕ್ಷದಮಾಜಿ ಮುಖ್ಯ ಸಚೇತಕ ಕ್ಯಾಪ್ಟನ್‌.ಗಣೇಶ್‌ ಕಾರ್ಣಿಕ್‌ ಅವರು ಮಾತನಾಡಿ, ಭಾರತೀಯ ಪರಂಪರೆಯ ಸಾವಿರಾರು ವರ್ಷಗಳ ಆಚರಣೆ-ನಂಬಿಕೆಗಳನ್ನು ಬೆಳೆಸಿ ಉಳಿಸುವಲ್ಲಿ ಇಂತಹ ಕಾರ್ಯಕ್ರಮಗಳು ಪರಿಣಾಮಕಾರಿ ಎಂದು ತಿಳಿಸಿದರು.

ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಅಶ್ವಥ್‌ ಪೂಜಾರಿ ಲಾಲ್‌ಬಾಘ…, ವರ್ಕಾಡಿ ಗ್ರಾ.ಪಂ.ಅಧ್ಯಕ್ಷ ಅಬ್ದುಲ್‌ ಮಜೀದ್‌, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎ.ಆರ್‌.ಸುಬ್ಬಯ್ಯಕಟ್ಟೆ, ಯಕ್ಷದ್ರುವ ಪಟ್ಲ ಫೌಂಡೇಶನ್‌ ಕುಂಬಳೆ ಘಟಕಾಧ್ಯಕ್ಷ ಎಸ್‌.ಜಗನ್ನಾಥ ಶೆಟ್ಟಿ ಕುಂಬಳೆ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ, ಜನಜಾಗƒತಿ ವೇದಿಕೆಯ ಹರೀಶ್‌ ಕಡಂಬಾರ್‌, ಶಂಕರ ಭಂಡಾರಿ, ಜಹೀರ್‌ ಅಹಮ್ಮದ್‌ ಬೆಳಪು, ರೋಟರಿ ಕ್ಲಬ್‌ ಅಧ್ಯಕ್ಷಸುನಿಲ್‌ ಶಿರ್ವ, ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಜಿಲ್ಲಾ ಘಟಕದ ಎಸ್‌.ವಿ.ಕರ್ಕೇರ, ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ವಿಶ್ವನಾಥ, ಜಾನಪದ ಪರಿಷತ್ತಿನ ಸಲಹೆಗಾರ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.

ಸ್ವಸಹಾಯ ಸಂಘಗಳ ಸದಸ್ಯೆಯರಿಂದ ವಿವಿಧ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಿತು.

ಕಳಂಜನ ಆಗಮನ
ಆಟಿಕಳಂಜ ಆಗಮಿಸಿ ಪಾಡªನ ಕುಣಿತಗಳ ಮೂಲಕ ಸಾಂಪ್ರದಾಯಿಕ ವೈವಿಧ್ಯಕ್ಕೆ ಚಾಲನೆ ನೀಡಲಾಯಿತು.. ಬಾಬು ಮೀಯಪದವು ಮತ್ತು ನಾರಾಯಣ ಅವರು ಆಟಿಕಳಂಜ ವೇಷಧಾರಿಯಾಗಿ ವೇದಿಕೆಗೆ ಆಗಮಿಸಿ ಸಾಂಪ್ರದಾಯಿಕವಾಗಿ ಡೋಲು ಬಡಿದು ಕುಣಿಸಲಾಯಿತು. ಈ ಸಂದರ್ಭ ಬಾಲಕೃಷ್ಣ ನಾಯ್ಕ-ಗೀತಾ ದಂಪತಿಗಳು ಗೆರಸೆಯಲ್ಲಿ ಆಟಿಯ ತಿಂಡಿ-ಪದಾರ್ಥಗಳನ್ನು ನೀಡಿ ಆಟಿಕಳಂಜನನ್ನು ಬೀಳ್ಕೊಟ್ಟರು.

ಸಮ್ಮಾನ, ಅಭಿನಂದನೆ
ಕುಬಳೆ ಸೀಮೆಯ ಪ್ರಧಾನ ದೆ„ವನರ್ತಕ ಡಾ.ರವೀಶ ಪರವ ಪಡುಮಲೆ, ಸಮಾಜ ಸೇವಕ ಮೊಹಮ್ಮದ್‌ ಫಾರೂಕ್‌ ಚಂದ್ರನಗರ ಅವರನ್ನು ವಿಶೇಷ ಸೇವೆಗಳನ್ನು ಪರಿಗಣಿಸಿ ಸನ್ಮಾನಿಸಿ ಗೌರವಿಸಲಾಯಿತು. ಕುನ್ನಿಲ್‌ ಎಜ್ಯುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಡಾ.ಪಕ್ರುದ್ದೀನ್‌ ಕುನ್ನಿಲ್‌ ಹಾಗೂ ಎಂ.ಫಿಲ್‌ ಪದವಿ ಪಡೆದ ಜಿಲ್ಲೆಯ ಕೊರಗ ಜನಾಂಗದ ಮಹಿಳೆ ಮೀನಾಕ್ಷಿ ಬೊಡ್ಡೋಡಿ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎ.ಆರ್‌.ಸುಬ್ಬಯ್ಯಕಟ್ಟೆಯವರನ್ನು ಅಭಿನಂದಿಸಲಾಯಿತು.ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಟ್‌ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ.ಸ್ವಾಗತಿಸಿ, ಜಾನಪದ ಪರಿಷತ್ತಿನ ಸಲಹೆಗಾರ ಪೊÅ.ಎ.ಶ್ರೀನಾಥ್‌ ವಂದಿಸಿದರು. ಕೋಶಾಧಿಕಾರಿ ರವಿ ನಾಯ್ಕಪು ಕಾರ್ಯಕ್ರಮ ನಿರೂಪಿಸಿದರು.

ಶ್ರೀಕಾಂತ್‌ ನೆಟ್ಟಣಿಗೆ, ಝಡ್‌.ಎ.ಕಯ್ನಾರು, ಪುಷ್ಪಾವತಿ ನೆಟ್ಟಣಿಗೆ ಗುತ್ತು, ಸಂಧ್ಯಾಗೀತ ಬಾಯಾರು, ಪೃಥ್ವಿ ಶೆಟ್ಟಿ ಕುಂಬಳೆ, ಗೋವಿಂದ ಭಟ್‌ ಗಿರಿ ಬಾಯಾರು, ಗಣೇಶ್‌.ಕೆ.ಬಿ ಮೊದಲಾದವರು ಸಹಕರಿಸಿದರು.

ಗಮನ ಸೆಳೆದ 107 ಬಗೆಯ ಆಟಿ ತಿನಸುಗಳು
ಸ್ವಸಹಾಯ ಸಂಘಗಳು ತಯಾರಿಸಿದ 107 ಬಗೆಯ ಆಟಿ ತಿನಸುಗಳ ಪ್ರದರ್ಶನ ಗಮನ ಸೆಳೆಯಿತು. ಉಪ್ಪಡ್‌ ಪಚ್ಚಿಲ್‌(ಉಪ್ಪು ಸೋಳೆ), ಹಲಸಿನ ಹಣ್ಣಿನ ದೋಸೆ, ಹಲಸಿನ ಹಣ್ಣಿನ ಗಾರಿಕೆ, ಗಟ್ಟಿ, ಹಪ್ಪಳ, ಹಲಸಿನ ಬೀಜದ ಚಟ್ನಿ, ಪಲ್ಯ, ಸಾಂತಾಣಿ, ಹಲಸಿನ ಬೀಜದ ದೋಸೆ, ಹಲಸಿನ ಕಾಯಿ ಪ್ರŒ„, ಕೊಚ್ಚಿ ಪದಾರ್ಥ, ಕಣಿಲೆ ಪಲ್ಯ,ಕಣಿಲೆ ಉಪ್ಪಿನಕಾಯಿ, ಕಡುಬು, ನೀರು ಕಡುಬು, ಬಾಳೆ ದಿಂಡಿನ ಪಲ್ಯ, ತಜಂಕ್‌ ಪಲ್ಯ, ತಜಂಕ್‌ ಅಂಬಡೆ, ಪತ್ರೊಡೆ , ಪಅಯಸ, ಆಕ್ಕಿ ಉಂಡೆ, ಮೊದಲಾದ ತಿಂಡಿ ತಿನಸುಗಳು ಗಮನ ಸೆಳೆದವು. ಕಷಾಯ, ಪಾನಕ ವ್ಯವಸ್ಥೆ ಮಾಡಲಾಗಿತ್ತು.

ಪ್ರಕೃತಿಯೊಂದಿಗಿನ ಹೆಜ್ಜೆ ಸಂಸ್ಕೃತಿ ಪ್ರಕೃತಿಯೊಂದಿಗಿನ ಹೆಜ್ಜೆ ಸಂಸ್ಕೃತಿಯಾಗಿದ್ದು, ಪ್ರಕೃತಿಯ ವಿರುದ್ದ ನಡೆ ವಿಕೃತಿಯಾಗುತ್ತದೆ. ಆಧುನಿಕ ಬದುಕಿಗೆತೆರೆದುಕೊಂಡಿರುವ ನಮ್ಮಲ್ಲಿ ಪರಂಪರೆ ಸಾಗಿಬಂದ ಪ್ರಕೃತಿಯೊಂದಿಗಿನ ಬದುಕು ಅಸಹ್ಯವಾಗದಿರಲಿ ಎಂದು ಕರೆನೀಡಿದರು. ಯುವ ತಲೆಮಾರಿಗೆ ಒಳಿತಿನ ಪಾಠ ನೀಡೋಣ,
-ಕ್ಯಾಪ್ಟನ್‌.ಗಣೇಶ್‌ ಕಾರ್ಣಿಕ್‌
ಕರ್ನಾಟಕ ವಿಧಾನ ಪರಿಷತ್ತಿನ ಪ್ರತಿಪಕ್ಷದ
ಮಾಜಿ ಮುಖ್ಯ ಸಚೇತಕ

ಟಾಪ್ ನ್ಯೂಸ್

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.