ಕಾಮನ್ವೆಲ್ತ್ ಟೇಬಲ್ ಟೆನಿಸ್: ಭಾರತದಿಂದ ಗೋಲ್ಡನ್ ಸ್ವೀಪ್
Team Udayavani, Jul 23, 2019, 5:12 AM IST
ಮಿಶ್ರ ಟಿಟಿ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಅರ್ಚನಾ ಕಾಮತ್- ಜಿ. ಸಥಿಯನ್.
ಕಟಕ್: 21ನೇ ಕಾಮನ್ವೆಲ್ತ್ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಆತಿಥೇಯ ಭಾರತ “ಗೋಲ್ಡನ್ ಸ್ವೀಪ್’ ಪೂರ್ತಿಗೊಳಿಸಿದೆ. ಎಲ್ಲ 7 ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದೆ.
ಸೋಮವಾರ ಹರ್ಮೀತ್ ದೇಸಾಯಿ ಮತ್ತು ಐಹಿಕಾ ಮುಖರ್ಜಿ ಕ್ರಮವಾಗಿ ಪುರುಷರ ಹಾಗೂ ವನಿತೆಯರ ಸಿಂಗಲ್ಸ್ ಪ್ರಶಸ್ತಿ ಜಯಿಸುವುದರೊಂದಿಗೆ ಭಾರತ ಈ ಸಾಧನೆಗೈದಿತು. ಫೈನಲಿಸ್ಟ್‌ಗಳೆಲ್ಲ ಭಾರತೀಯರೇ ಆಗಿದ್ದುದು ವಿಶೇಷ. 26ರ ಹರೆಯದ ಹರ್ಮೀತ್ ದೇಸಾಯಿ ತಮ್ಮದೇ ದೇಶದ ನೆಚ್ಚಿನ ಆಟಗಾರ ಜಿ. ಸಥಿಯನ್ ವಿರುದ್ಧ ಭಾರೀ ಹೋರಾಟ ನಡೆಸಿ 4-3 ಅಂತರದ ಗೆಲುವು ದಾಖಲಿಸಿದರು. 0-2 ಹಿನ್ನಡೆ ಬಳಿಕ ಹರ್ಮೀತ್ ತಿರುಗಿ ಬಿದ್ದ ರೀತಿ ಅಮೋಘವಾಗಿತ್ತು.
ಇದಕ್ಕೂ ಮುನ್ನ ಪುರುಷರ ಡಬಲ್ಸ್ ವಿಭಾಗದಲ್ಲಿ ಆ್ಯಂಟನಿ ಅಮಲ್‌ರಾಜ್-ಮಾನವ್ ಠಕ್ಕರ್ ಬಂಗಾರವನ್ನು ಬೇಟೆಯಾಡಿದ್ದರು. ಆಲ್ ಇಂಡಿಯನ್ ಫೈನಲ್‌ನಲ್ಲಿ ಅವರು ಅಗ್ರ ಶ್ರೇಯಾಂಕದ ಜಿ. ಸಥಿಯನ್-ಅಚಂತ ಶರತ್ ಕಮಲ್ ವಿರುದ್ಧ 3-1 ಅಂತರದ ಜಯ ಒಲಿಸಿಕೊಂಡರು.
ವನಿತಾ ಸಿಂಗಲ್ಸ್‌ನಲ್ಲಿ ಐಹಿಕಾ ಮುಖರ್ಜಿ ಮಾಜಿ ರಾಷ್ಟ್ರೀಯ ಚಾಂಪಿಯನ್ ಮಧುರಿಕಾ ಪಾಟ್ಕರ್ ಅವರನ್ನು 4-0 ಅಂತರದಿಂದ ಹಿಮ್ಮೆಟ್ಟಿಸಿದರು. ಇದು ಈ ಕೂಟದಲ್ಲಿ ಐಹಿಕಾ ಪಾಲಾದ ಮೊದಲ ಚಿನ್ನದ ಪದಕ. ವನಿತಾ ಡಬಲ್ಸ್ ಚಿನ್ನ ಪೂಜಾ ಸಹಸ್ರಬುಢೆ-ಕೃತ್ವಿಕಾ ಸಿನ್ಹಾ ರಾಯ್ ಪಾಲಾಯಿತು. ಭಾರತ ಒಟ್ಟು 7 ಚಿನ್ನ, 5 ಬೆಳ್ಳಿ ಮತ್ತು 3 ಕಂಚಿನ ಪದಕ ಗೆದ್ದು ಅಗ್ರಸ್ಥಾನ ಅಲಂಕರಿಸಿದೆ. ಇಂಗ್ಲೆಂಡ್ ದ್ವಿತೀಯ (2 ಬೆಳ್ಳಿ, 3 ಕಂಚು), ಸಿಂಗಾಪುರ ತೃತೀಯ (6 ಕಂಚು) ಸ್ಥಾನದಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.