‘ಸಂಜೋಶ್’ನಿಂದ ಎಂಜಿನಿಯರಿಂಗ್ ಶಿಕ್ಷಣ ತರಬೇತಿ
ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜು
Team Udayavani, Jul 23, 2019, 5:13 AM IST
ಮಂಗಳೂರು: ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಬೋಧನೆಮಾಡುವ ಉಪನ್ಯಾಸಕರು ಪರಿಣಾಮಕಾರಿ ಬೋಧನ ಕೌಶಲಗಳನ್ನು ಮೈಗೂಡಿಸಿಕೊಳ್ಳಲು ಅನುಕೂಲ ವಾಗುವಂತೆ ವಾಮಂಜೂರಿನ ಸೈಂಟ್ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇಂಡೊ ಯುನಿವರ್ಸಲ್ ಕೊಲಬರೇಶನ್ ಫಾರ್ ಎಂಜಿನಿಯರಿಂಗ್ ಎಜುಕೇಶನ್ (ಐಯುಸಿಇಇ) ಸಹಭಾಗಿತ್ವದಲ್ಲಿ ‘ಸಂಜೋಶ್’ ಎಂಬ ಹೆಸರಿನಲ್ಲಿ ಶಿಕ್ಷಣ ತರಬೇತಿ ಕೇಂದ್ರ (ಟಿಎಲ್ಸಿ)ವನ್ನು ಆರಂಭಿಸಲಾಗಿದೆ.
ಸೈಂಟ್ ಜೋಸೆಫ್ ಎಂಜಿನಿಯ ರಿಂಗ್ ಕಾಲೇಜಿನ 60 ಮಂದಿ ಉಪನ್ಯಾಸಕರು ಈ ಶಿಕ್ಷಣ ತರಬೇತಿಗೆ ಹೆಸರು ನೋಂದಾಯಿಸಿದ್ದು, 25 ಮಂದಿ ಮೊದಲ ಹಂತದಲ್ಲಿ ತರಬೇತಿ ಪಡೆದಿದ್ದಾರೆ. ಎರಡನೇ ಹಂತದಲ್ಲಿ ಮತ್ತೆ 30 ಮಂದಿ ತರಬೇತಿಯನ್ನು ಈಗ ಮುಗಿಸಿದ್ದಾರೆ. ಮೂರನೇ ಹಂತದಲ್ಲಿ ಆಸುಪಾಸಿನ ಎಂಜಿನಿಯರಿಂಗ್ ಕಾಲೇಜುಗಳ ಉಪನ್ಯಾಸಕರಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಈ ತರಬೇತಿ ಕೋರ್ಸು ಆಗಸ್ಟ್ 5ರಿಂದ 7ರ ತನಕ ನಡೆಯಲಿದೆ ಎಂದು ಕಾಲೇಜಿನ ನಿರ್ದೇಶಕ ವಂ| ವಿಲ್ಫ್ರೆಡ್ ಪ್ರಕಾಶ್ ಡಿ’ಸೋಜಾ ಅವರು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇದು ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ತರಬೇತಿ ಆಗಿದ್ದು, ತರಬೇತಿಯನ್ನು ಪೂರ್ತಿಗೊಳಿಸಿದವ ರಿಗೆ ಪ್ರಮಾಣ ಪತ್ರವನ್ನು ನೀಡಲಾಗು ತ್ತಿದೆ. ತರಬೇತಿಯು ಫೇಸ್ ಟು ಫೇಸ್ ಸೆಶನ್‌ಗಳು, ಆನ್‌ಲೈನ್ ಮೋಡ್ಯೂಲ್ಗಳನ್ನು ಒಳಗೊಂಡಿರುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ| ರಿಯೋ ಡಿ’ಸೋಜಾ ವಿವರಿಸಿದರು.
ಎಂಜಿನಿಯರಿಂಗ್ ಶಿಕ್ಷಣದಲ್ಲಿ ಸುಧಾರಣೆ ತರಲು ಮತ್ತು ಎಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಅಮೆರಿಕದ ಡಾ| ರಿಚರ್ಡ್ ಫೆಲ್ಡರ್ ಮತ್ತು ಡಾ| ರೆಬೆಕ್ಕಾ ಬ್ಲೆಂಟ್ ಅವರ ಪರಿಣಾಮಕಾರಿ ಬೋಧನಾ ಕಾರ್ಯಾಗಾರ ಮತ್ತು ಆಸ್ಟ್ರಿಯಾದ ಇಂಟರ್‌ನ್ಯಾಶನಲ್ ಸೊಸೈಟಿ ಫಾರ್ ಎಂಜಿನಿಯರಿಂಗ್ ಪೆಡಗೊಗಿ (ಐಜಿಐಒಇ)ಯ ಟೀಚರ್ ಸರ್ಟಿಫಿಕೇಶನ್ ಕೋರ್ಸ್‌ನ್ನು ಆಧರಿಸಿ ಐಯುಸಿಇಇ ಈ ಸರ್ಟಿಫಿಕೇಶನ್ ಕೋರ್ಸನ್ನು ವಿನ್ಯಾಸಗೊಳಿಸಿದೆ. ಭಾರತದ 120 ಎಂಜಿನಿಯರಿಂಗ್ ಕಾಲೇಜುಗಳು ಐಯುಸಿಇಇ ಸದಸ್ಯತ್ವ ಪಡೆದಿವೆ. ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜು 2013 ರಿಂದೀಚೆಗೆ ಇದರ ಸದಸ್ಯತ್ವ ಪಡೆದಿದ್ದು, ವಿವಿಧ ಕಾರ್ಯಕ್ರಮಗಳನ್ನು ನಡೆ ಸುತ್ತಿದೆ ಎಂದು ಐಯುಸಿಇಇ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಕೃಷ್ಣ ವೆದುಲಾ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಯ ರಾಕೇಶ್ ಲೋಬೊ, ಮಾಧ್ಯಮ ಸಲಹೆಗಾರ ಇ. ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.