ಹೃದಯ ಕಾಯಿಲೆಗೆ ವಾಟ್ಸ್‌ಆ್ಯಪ್ ಸಲಹೆಗೆ ಉತ್ತಮ ಪ್ರತಿಕ್ರಿಯೆ
Team Udayavani, Jul 23, 2019, 10:58 AM IST
ಹೊನ್ನಾವರ: ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಹೃದಯ ವಿಭಾಗದ ಮುಖ್ಯಸ್ಥರಾದ ಡಾ| ಪದ್ಮನಾಭ ಕಾಮತ್‌ರ ನೂತನ ಯೋಜನೆ ‘ಹೃದಯ ಸಮಸ್ಯೆಗೆ ವಾಟ್ಸ್‌ಆ್ಯಪ್ ಸಲಹೆ’ ಕುರಿತು ‘ಉದಯವಾಣಿ’ಯಲ್ಲಿ ಪ್ರಕಟವಾದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇವಲ 24 ತಾಸಲ್ಲಿ 82 ಸಾವಿರಕ್ಕೂ ಅಧಿಕ ಮಂದಿ ಇದನ್ನು ವೀಕ್ಷಿಸಿದ್ದು, ಆರುನೂರಕ್ಕೂ ಹೆಚ್ಚು ಜನರು ಶೇರ್ ಮಾಡಿದ್ದಾರೆ. ವೈದ್ಯರೂ ಸೇರಿದಂತೆ 60 ಜನ ಸ್ಪಂದಿಸಿದ್ದಾರೆ.
ಅಲ್ಲದೇ, ಅಗತ್ಯವುಳ್ಳ 20 ಜನರಿಗೆ ಡಾ| ಕಾಮತ್ ಚಿಕಿತ್ಸೆಯ ಮಾಹಿತಿ ರವಾನಿಸಿದ್ದಾರೆ. ಹಾವೇರಿ, ಚಿತ್ರದುರ್ಗ – 2, ಕಡೂರು, ತೀರ್ಥಹಳ್ಳಿ, ದೇವನಹಳ್ಳಿ, ಮೈಸೂರು, ಸುಳ್ಯ, ಪುತ್ತೂರು, ಯಾದಗಿರಿ ತಲಾ 1, ಬೆಂಗಳೂರು 3 ಹಾಗೂ ಅತಿ ಹೆಚ್ಚು ಎಂಟು ಮಂದಿ ಉತ್ತರಕನ್ನಡದಿಂದ ಅದರಲ್ಲೂ ಕುಮಟಾದಿಂದ ನಾಲ್ವರಿಗೆ ಸಮೀಪದ ಹೃದಯ ತಜ್ಞರಲ್ಲಿ ಚಿಕಿತ್ಸೆ ಪಡೆಯಲು ಸಲಹೆ ನೀಡಲಾಗಿದೆ. ಹೃದಯ ಸಮಸ್ಯೆ ಕುರಿತು ಗೊಂದಲದಲ್ಲಿದ್ದವರಿಗೆ ಸರಿಯಾಗಿ ಮಾರ್ಗದರ್ಶನ ನೀಡಲಾಗಿದೆ.
ಇದು ಹೃದಯ ಕಾಯಿಲೆಯ ಗಂಭೀರತೆ ಮತ್ತು ಸೂಕ್ತ ಚಿಕಿತ್ಸೆ ಅಲಭ್ಯತೆಯನ್ನು ತೋರಿಸುತ್ತಿದೆ. 9743287599 ನಂಬರಿಗೆ ವಾಟ್ಸ್‌ಆ್ಯಪ್ ಸಂದೇಶ ಕಳಿಸುವವರು ಇಸಿಜಿ ಜೊತೆ ಸ್ಥಳೀಯ ವೈದ್ಯರ ವರದಿ ಇದ್ದರೆ ಅದನ್ನು ಲಗತ್ತಿಸಿ ಹೆಸರು, ವಯಸ್ಸು ಹಾಗೂ ಊರು ತಿಳಿಸಬೇಕು. ಯಾವುದೇ ಕಾರಣಕ್ಕೂ ಅನಗತ್ಯ ಸಂದೇಶ ಕಳುಹಿಸಬಾರದು ಎಂದು ಡಾ| ಕಾಮತ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
MUST WATCH
ಹೊಸ ಸೇರ್ಪಡೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.