ಸೋಪ್ ಸೂಪರ್
ಸಿಂಪಲ್ ಟಿಪ್ಸ್
Team Udayavani, Jul 24, 2019, 5:00 AM IST
ಸೋಪು- ಸ್ನಾನಕ್ಕೆ, ಬಟ್ಟೆ- ಪಾತ್ರೆ ತೊಳೆಯೋಕೆ ಮಾತ್ರ ಬಳಸುವ ವಸ್ತು ಅಂತ ಭಾವಿಸಿದ್ದೀರ? ಹಾಗಾದ್ರೆ, ನೀವು ತಪ್ಪು ಭಾವಿಸಿದ್ದೀರಿ. ಸೋಪಿನಿಂದ ಬಹಳಷ್ಟು ಉಪಯೋಗಗಳಿವೆ. ಅದರಲ್ಲೂ, ಗೃಹಿಣಿಯರು ಒಂದು ತುಂಡು ಸೋಪ್‌ನಿಂದ ಬಹಳಷ್ಟು ಕೆಲಸಗಳನ್ನು ಸುಲಭವಾಗಿ ಮಾಡಬಹುದು.
– ಒಣ ಸಾಬೂನನ್ನು ಕಾಲು- ಕೈಗೆ ಉಜ್ಜಿದರೆ ಸೊಳ್ಳೆಗಳು ಹತ್ತಿರ ಬರುವುದಿಲ್ಲ
– ಕಪಾಟಿನ ಡ್ರಾವರ್‌ಗೆ ಸಾಬೂನು ಹಚ್ಚಿದರೆ ಬಾಗಿಲು ತೆರೆಯಲು ಸುಲಭ.
– ಬ್ಯಾಗಿನ ಜಿಪ್ ತೆಗೆಯಲು ಆಗದಿದ್ದರೆ, ಜಿಪ್ ಮೇಲೆ ಸಾಬೂನು ಹಚ್ಚಿ.
-ಸಣ್ಣ ಅಳತೆಯ ಉಂಗುರ, ಬಳೆ ಹಾಕಬೇಕಾದಾಗ ಕೈಯನ್ನು ಸಾಬೂನಿನ ನೊರೆಯಲ್ಲಿ ಅದ್ದಿ.
-ದಾರವನ್ನು ಸಾಬೂನಿಗೆ ಉಜ್ಜಿದರೆ, ಸೂಜಿಯೊಳಗೆ ದಾರ ಪೋಣಿಸಲು ಕಷ್ಟವೇ ಆಗುವುದಿಲ್ಲ.
-ಕಿಟಕಿಗೆ ಪೇಂಟ್ ಮಾಡುವಾಗ, ಸಾಬೂನನ್ನು ಕಿಟಕಿ ಫ್ರೆಮ್‌ಗೆ ಹಚ್ಚಿದರೆ, ಹೊರಗಡೆ ತಾಗಿದ ಬಣ್ಣವನ್ನು ಸುಲಭವಾಗಿ ಒರೆಸಬಹುದು.
-ಗೋಡೆ ಮೇಲಿನ ವಾಲ್ ಪೇಪರ್ ಅನ್ನು ತೆಗೆಯುವಾಗ, ಸೋಪಿನ ನೊರೆ ಹಚ್ಚಿದರೆ ಸುಲಭವಾಗಿ ತೆಗೆಯಬಹುದು.
-ಹೊಸ ಶೂ, ಚಪ್ಪಲಿ ಖರೀದಿಸಿದಾಗ ಅದರೊಳಗೆ ಸೋಪನ್ನು ಹಚ್ಚಿದರೆ ಚಪ್ಪಲಿ ಹಾಕುವಾಗ ನೋವಾಗುವುದಿಲ್ಲ.
-ಸ್ನಾನದ ಮನೆಯ ಕನ್ನಡಿಗೆ ಸಾಬೂನು ಹಚ್ಚಿ ತೊಳೆದು, ನಂತರ ಒಣಬಟ್ಟೆಯಿಂದ ಒರೆಸಿದರೆ ಗಾಜಿನ ಮೇಲಿನ ಕಲೆ ಮಾಯವಾಗುತ್ತದೆ.
– ಮನೆಯಲ್ಲಿ ಇರುವೆ, ಜಿರಳೆ, ಇಲಿಗಳು ಓಡಾಡುವ ಜಾಗದಲ್ಲಿ ಸಾಬೂನಿನ ತುಣುಕುಗಳನ್ನು ಇಟ್ಟರೆ, ಸಮಸ್ಯೆಗೆ ಪರಿಹಾರ ಸಿಗುತ್ತದೆ.
-ಕುರ್ಚಿ, ಮೇಜಿನ ಕಾಲನ್ನು ನಾಯಿಗಳು ಕಚ್ಚುವುದನ್ನು ತಡೆಯಲು, ಕಾಲುಗಳಿಗೆ ಸಾಬೂನು ಹಚ್ಚಿ.
– ಮನೆಯ ಬೀಗ ತೆಗೆಯಲು ಕಷ್ಟವಾಗುತ್ತಿದ್ದರೆ, ಕೀಲಿಕೈಗೆ ಸಾಬೂನು ಉಜ್ಜಿ.
-ಗಾಜಿನ ವಸ್ತು ಒಡೆದು ನೆಲದ ಮೇಲೆ ಬಿದ್ದಿದ್ದರೆ, ಸಾಬೂನನ್ನು ನೀರಿನಲ್ಲಿ ಹಾಕಿ ನೆಲದ ಮೇಲೆ ಆಚೀಚೆ ಆಡಿಸಿದರೆ ಗಾಜಿನ ತುಣುಕುಗಳು ಸಾಬೂನಿಗೆ ಅಂಟಿಕೊಳ್ಳುತ್ತವೆ.
-ಕನ್ನಡಕದ ಗಾಜನ್ನು ಸೋಪು ನೀರಿನಲ್ಲಿ ತೊಳೆದರೆ, ಫಳಫಳ ಹೊಳೆಯುತ್ತದೆ.
-ಹೀರಾ ರಮಾನಂದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.