ಫಸಲ್ ಬಿಮಾ ಯೋಜನೆಗೆ ಸಿಗದ ರೈತರ ಪ್ರೋತ್ಸಾಹ
ಅಧಿಕಾರಿಗಳ ನಿರ್ಲಕ್ಷ್ಯವೇ ಯೋಜನೆ ವಿಫಲತೆಗೆ ಕಾರಣ
Team Udayavani, Jul 24, 2019, 12:04 PM IST
ಸಿದ್ದಯ್ಯ ಪಾಟೀಲ
ಸುರಪುರ: ಬೆಳೆ ನಷ್ಟ ಪರಿಹಾರ ಒದಗಿಸಿಕೊಡುವ ಮೂಲಕ ರೈತರ ಸಂಕಷ್ಟಕ್ಕೆ ನೆರವಾಗಲೂ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಫಸಲ್ ಬಿಮಾ ಯೋಜನೆಗೆ ತಾಲೂಕಿನಲ್ಲಿ ರೈತರಿಂದ ಪ್ರೋತ್ಸಾಹ ದೊರೆಯುತ್ತಿಲ್ಲ. ಹೀಗಾಗಿ ಕೇಂದ್ರದ ಮಹತ್ವಾಕಾಂಕ್ಷೆ ಯೋಜನೆಗೆ ಹಿನ್ನಡೆ ಕಂಡು ಬರುತ್ತಿದೆ.
ಕೃಷಿಕರು ಅತಿವೃಷ್ಟಿ, ಅನಾವೃಷ್ಟಿ, ಕೀಟ ಬಾಧೆ, ಆಲಿ ಕಲ್ಲು ಮಳೆ, ಪ್ರವಾಹ, ಭೂ ಕುಸಿತ, ಸಿಡಿಲು, ಅಗ್ನಿ ದುರಂತ ಸೇರಿದಂತೆ ನೈಸರ್ಗಿಕ ವಿಪತ್ತುಗಳಿಂದ ಬೆಳೆ ನಷ್ಟವಾದಲ್ಲಿ ರೈತರಿಗೆ ಪರಿಹಾರ ಭರಿಸಿಕೊಡುವುದು ಈ ಯೋಜನೆ ಉದ್ದೇಶವಾಗಿದೆ.
ಯೋಜನೆಗೆ ಒಳಪಡುವ ಬೆಳೆಗಳು: ಭತ್ತ, ತೊಗರಿ, ಹತ್ತಿ, ಶೇಂಗಾ, ಜೋಳ, ಸಜ್ಜೆ, ಮುಸುಕಿನ ಜೋಳ, ನವಣೆ, ಉದ್ದು, ಸೂರ್ಯಕಾಂತಿ, ಹೆಸರು, ಹುರಳಿ, ಎಳ್ಳು, ಅಲಸಂದೆ ಯೋಜನೆಗೆ ಒಳಪಡುವ ಬೆಳೆಗಳಾಗಿವೆ. ನೀರಾವರಿ ಮತ್ತು ಖುಷ್ಕಿ ಬೆಳೆಗೆ ಪ್ರತ್ಯೇಕ ವಿಮೆ ದರ ನಿಗದಿ ಮಾಡ ಲಾಗಿದೆ.
ನೋಂದಣಿ: ಕೃಷಿ ಕಚೇರಿ ಹಾಗೂ ರೈತ ಕೇಂದ್ರಗಳಲ್ಲಿ ಅರ್ಜಿ ಪಡೆದು ಬೆಳೆಗೆ ಸಂಬಂಧಿಸಿದ ಪಹಣಿ ಲಗತ್ತಿಸಿ, ಆಯಾ ಪ್ರದೇಶವಾರು ನಿಗದಿಪಡಿಸಿದ ಬ್ಯಾಂಕ್‌ಗೆ ತೆರಳಿ ರೈತ ತನ್ನ ಶಕ್ತಿಯನುಸಾರ ವಿಮೆ ಮೊತ್ತ ಭರಿಸಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಯಾಗುತ್ತಿದ್ದಂತೆ ಕೃಷಿ ಇಲಾಖೆ ವೆಬ್‌ಸೈಟ್ನಿಂದ ಮಾಹಿತಿ ಹೋಗುತ್ತದೆ.
ಸಾಧನೆ: ಬೆಳೆ ವಿಮೆ ಕಳೆದ ಸಾಲಿಗೆ ಹೋಲಿಸಿದಲ್ಲಿ ಪ್ರಸಕ್ತ ಸಾಲಿನಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. ಕಳೆದ ಬಾರಿ ಸರಿ ಸುಮಾರು 8,270 ರೈತರು ವಿಮೆಗೆ ಒಳಪಟ್ಟಿದ್ದರು. ಇ ಪೈಕಿ 4,693 ಫಲಾನುಭವಿಗಳು ಯೋಜನೆಗೆ ಅರ್ಹರಾಗಿದ್ದಾರೆ. 7.70 ಕೋಟಿ ರೂ. ವಿಮೆ ಪರಿಹಾರ ಮೊತ್ತ ಬಂದಿದೆ. ಪ್ರಸಕ್ತ ಸಾಲಿನಲ್ಲಿ 2,011 ರೈತರು ವಿಮೆ ನೋಂದಣಿ ಮಾಡಿದ್ದಾರೆ.
ಮಾಹಿತಿ ಕೊರತೆ: ಈ ಮಹತ್ವಾಕಾಂಕ್ಷೆ ಯೋಜನೆಗೆ ಸರಕಾರ, ಕೃಷಿ ಇಲಾಖೆ, ಜನಪ್ರತಿನಿಧಿಗಳು ಹೆಚ್ಚಿನ ಗಮನ ಕೊಟ್ಟಿಲ್ಲ. ಸಂಬಂಧಿತ ಅಧಿಕಾರಿಗಳು ಹೆಚ್ಚಿನ ಪ್ರಚಾರ ನೀಡಿಲ್ಲ. ಯಾವುದೇ ಜಾಗೃತಿ ಶಿಬಿರ ಆಯೋಜಿಸಿ ಅರಿವು ಮೂಡಿಸಲಿಲ್ಲ. ರೈತರನ್ನು ಯೋಜನೆಯತ್ತ ಸೆಳೆಯುವ ಗಮನಾರ್ಹ ಕೆಲಸ ಎಲ್ಲಿಯೂ ನಡೆಯಲಿಲ್ಲ. ಹೀಗಾಗಿ ರೈತರಿಗೆ ಮಾಹಿತಿ ಕೊರತೆಯಿಂದ ಯೋಜನೆಗೆ ತಾಲೂಕಿನಲ್ಲಿ ನಿರಾಸಕ್ತಿ ವ್ಯಕ್ತವಾಗಿದ್ದು, ನಿಗದಿತ ಪ್ರಮಾಣದಲ್ಲಿ ಯಶಸ್ಸು ಕಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವೇ ಯೋಜನೆ ವಿಫಲತೆಗೆ ಕಾರಣ ಎಂಬುದು ರೈತರ ಆರೋಪವಾಗಿದೆ.
ನಿರಾಸಕ್ತಿ: ಪ್ರಸಕ್ತ ಸಾಲಿನಲ್ಲಿ ಬೆಳೆ ನಷ್ಟವಾದಲ್ಲಿ ವಿಮೆ ಅನ್ವಯವಾಗುವುದಿಲ್ಲ. ಆದರೆ, ಆಯಾ ಗ್ರಾಪಂ, ಹೋಬಳಿವಾರು ಪ್ರದೇಶಗಳಲ್ಲಿ ಹಿಂದಿನ 5 ವರ್ಷಗಳ ಸರಾಸರಿ ಅತ್ಯುತ್ತಮ ಇಳುವರಿ ಪರಿಗಣಿಸಿ ವಿಮೆ ಭರಿಸುವ ನಿಯಮ ಅಳವಡಿಸಿರುವುದರಿಂದ ರೈತರು ನಿರಾಸಕ್ತಿ ತೋರುತ್ತಿದ್ದಾರೆ.
ವಿಮೆಗೆ ಕೊನೆ ದಿನ: ಸಾಲ ಪಡೆಯುವ ಮತ್ತು ಪಡೆಯದಿರುವ ರೈತರು ತಮ್ಮ ಬೆಳೆ ವಿಮೆ ಮಾಡಿಸಿಕೊಳ್ಳಲು ಹೋಬಳಿ ಮಟ್ಟದಲ್ಲಿ ಜುಲೈ 31, ಗ್ರಾಪಂ ಮಟ್ಟದಲ್ಲಿ ಆಗಸ್ಟ್ 14 ಕೊನೆ ದಿನವಾಗಿದೆ.
• ಸುರೇಶ ಅಂಕಲಗಿ,
ತಹಶೀಲ್ದಾರ್ ಸುರಪುರ
• ದಾನಪ್ಪ ಕತ್ನಳ್ಳಿ,
ಸಹಾಯಕ ಕೃಷಿ ನಿರ್ದೇಶಕ, ಸುರಪುರ
• ವೆಂಕೋಬ ದೊರೆ,
ಶೋಷಿತ ಪರ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.