ಪಟ್ಟಾ ಕೊಡದಿದ್ದರೆ ಸೇವೆ ಸ್ಥಗಿತ

•ಮೀನಮೇಷ ಎಣಿಸುತ್ತಿರುವ ಕಂದಾಯ ಇಲಾಖೆ•ವರ್ಷದಿಂದ ತಪ್ಪದ ಅಲೆದಾಟ

Team Udayavani, Jul 24, 2019, 12:51 PM IST

uk-tdy-02

ಶಿರಸಿ: ನಗರ ಸ್ವಚ್ಛಗೊಳಿಸುವ ಪೌರ ಕಾರ್ಮಿಕರು ಶತಮಾನಗಳಿಂದ ವಾಸ ಇರುವ ಪ್ರದೇಶ

ಶಿರಸಿ: ಶತಮಾನಗಳಿಂದ ವಾಸವಿರುವ ಪೌರ ಕಾರ್ಮಿಕರು ನಗರ ಸರ್ವೇ ನಂಬರ್‌ನ ಕಂದಾಯ ಭೂಮಿಯಲ್ಲಿದ್ದರೂ ಅವರಿಗೆ ಈವರೆಗೆ ನ್ಯಾಯಯುತವಾಗಿ ಸಿಗಬೇಕಿದ್ದ ಪಟ್ಟಾ ಲಭಿಸಿಲ್ಲ. ಕಳೆದೆರಡು ವರ್ಷಗಳಿಂದ ಅಲೆದಾಟ ನಡೆಸಿದರೂ ಸಣ್ಣ ಸಣ್ಣ ಕಾರಣ ಇಟ್ಟು ಹಿಂಬರಹ ನೀಡುತ್ತಿದ್ದಾರೆ. ಜು.31 ರೊಳಗೆ ಪಟ್ಟಾ ಕುರಿತು ಅಧಿಕೃತ ತೀರ್ಮಾನ ಹೊರ ಬೀಳದೇ ಇದ್ದರೆ ಆ.1 ರಿಂದ ಅನಿರ್ದಿಷ್ಟ ಅವಧಿಗೆ ಪೌರ ಕಾರ್ಮಿಕ ಸೇವೆ ಸ್ಥಗಿತಗೊಳಿಸುವ ತೀರ್ಮಾನಕ್ಕೆ ಬಂದಿದ್ದಾರೆ.

ರಾಜೀವ ನಗರದ ಪೌರ ಕಾರ್ಮಿಕರ ವಸತಿ ಪ್ರದೇಶದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ನಗರಸಭೆ ಮಾಜಿ ಅಧ್ಯಕ್ಷ, ವಾರ್ಡ್‌ ಸದಸ್ಯ ಪ್ರದೀಪ ಶೆಟ್ಟಿ, ಇಡೀ ನಗರದ ಆರೋಗ್ಯ, ಸ್ವಚ್ಛತೆ ಕಾಪಾಡುವವರ ಸ್ಥಿತಿ ಹೀಗಾಗಿದೆ. ಅವರಿಗೆ ಸ್ವಂತ ಭೂಮಿಯಲ್ಲಿ ಸೂರೂ ಇಲ್ಲದಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪೌರ ಕಾರ್ಮಿಕರ ಪಾದ ತೊಳೆಯುತ್ತಾರೆ. ಕೇಂದ್ರ, ರಾಜ್ಯ ಸರಕಾರದ ನೆರವಿನ ಯೋಜನೆ ಇದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾರ್ಮಿಕರ ತನಕ ಬಾರದೇ ಕಲ್ಯಾಣ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಳಗ್ಗೆ ಆರಕ್ಕೆ ನಗರ ಸ್ವಚ್ಛಗೊಳಿಸಲು ಮುಂದಾಗುವ ಪೌರ ಕಾರ್ಮಿಕರಿಗೆ ಪಟ್ಟಾ ಪಡೆಯಬೇಕು ಎಂಬ ಜ್ಞಾನ, ತಿಳಿವಳಿಕೆ ಕೂಡ ಇರಲಿಲ್ಲ. ಒಂದು ಎಕರೆ ಪ್ರದೇಶದಲ್ಲಿ ಸಿಟಿ ಸರ್ವೆ ನಂ.26/37ನಲ್ಲಿ 35 ಕುಟುಂಬಗಳು ವಾಸ್ತವ್ಯ ಮಾಡಿವೆ. ಕಳೆದೆರಡು ವರ್ಷದ ಹಿಂದೆ ತಹಶೀಲ್ದಾರ್‌ಗೆ ಮನವಿ ಮಾಡಿಕೊಂಡಿದ್ದೆವು. ಅವರು ಹೋಗಲು ರಸ್ತೆ ಇಲ್ಲ ಎಂದು ಅರ್ಜಿ ತಿರಸ್ಕಾರ ಮಾಡಿದ್ದರು. ಉಳಿದ ಅನೇಕರಿಗೆ ಅದೇ ಅವಧಿಯಲ್ಲಿ ಆಗಿತ್ತಾದರೂ ಪೌರ ಕಾರ್ಮಿಕರಿಗೆ ಈ ಭಾಗ್ಯ ಸಿಗಲಿಲ್ಲ. ಈಗಿನ ತಹಶೀಲ್ದಾರ್‌ಗೆ ಮನವಿ ಮಾಡಿದಾಗ ಸಹಾಯಕ ಆಯುಕ್ತರಿಗೆ ಮೇಲ್ಮನವಿ ಹಾಕಲು ಸೂಚಿಸಿದ್ದರು. ಅಂದಿನ ಸಹಾಯಕ ಆಯುಕ್ತ ರಾಜು ಮೊಗವೀರರು ಮೂರು ವಿಚಾರಣೆ ನಡೆಸಿ ಆದೇಶ ಬರೆಯುವ ಮೊದಲು ವರ್ಗಾವಣೆ ಆಗಿ ಹೋದರು ಎಂದರು.

ಈಗಿನ ಎಸಿ ಈಶ್ವರ ಉಳ್ಳಾಗಡ್ಡಿ ಅವರು ರಸ್ತೆ ಇದೆ ಎಂಬ ದಾಖಲೆ ಕೊಡಿ ಎಂದು ಕೇಳಿದ್ದರು. ತಲುಪಿಸಿದ ಬಳಿಕ ನಗರಸಭೆಗೆ ಈ ರಸ್ತೆ ಹಸ್ತಾಂತರ ಆದ ದಾಖಲೆ ಕೇಳಿದ್ದಾರೆ. ನಿತ್ಯವೂ ನಗರ ಸ್ವಚ್ಛತೆಯೇ ಧ್ಯೇಯವಾಗಿಟ್ಟುಕೊಂಡು ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ನಿಜವಾಗಿ ಪಟ್ಟಾ ಸಿಗಬೇಕು. ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸಿದರೆ ಮೇಲಿನ ಹಂತದ ತನಕ ದೂರು ಒಯ್ಯಲಾಗುತ್ತದೆ. ಇಂಥ ಬಡವರಿಗೂ ನ್ಯಾಯ ಕೊಡಲಾಗದೇ ಇದ್ದರೆ ಹೇಗೆ ಎಂದೂ ಪ್ರದೀಪ ಶೆಟ್ಟಿ ಕೇಳಿದ್ದಾರೆ. ವೇದಿಕೆಯಲ್ಲಿ ಪೌರ ಕಾರ್ಮಿಕರಿಗೆ ನ್ಯಾಯ ಕೊಡಿಸುವ ಮಾತುಗಳನ್ನು ಆಡುತ್ತಾರೆ. ಆದರೆ ವಾಸ್ತವ ಬೇರೆ. ಬಡ ಪೌರ ಕಾರ್ಮಿಕರಿಗೆ ಪಟ್ಟ ಪ್ರಕ್ರಿಯೆ ಆರಂಭವಾಗದೇ ಇದ್ದರೆ ನಗರದಲ್ಲಿ ಇವರಿಂದ ಸ್ವಚ್ಛತಾ ಕಾರ್ಯ ನಿಲುತ್ತದೆ. ಇದಕ್ಕೆ ಅಧಿಕಾರಿಗಳೇ ಹೊಣೆ ಆಗುತ್ತಾರೆ ಎಂದೂ ಹೇಳಿದರು. ಸುಭಾಸ ಮಂಡೂರು ಇತರರು ಇದ್ದರು.

ಟಾಪ್ ನ್ಯೂಸ್

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

1-gttt

Politicians ಜಾತಿ, ಧರ್ಮಗಳ ಮೂಲಕ ನಮ್ಮನ್ನು ಪ್ರತ್ಯೇಕಿಸುತ್ತಿದ್ದಾರೆ: ತುಷಾರ್‌ ಗಾಂಧಿ

1-joshi

Tirupati Laddu; ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದ ಪರೀಕ್ಷಿಸಬೇಕು: ಜೋಶಿ ಆಗ್ರಹ

16-flipkart

Flipkart Big Billion Day ಸೆ. 27 ರಿಂದ ಆರಂಭ

FollowUp:Tirupati Laddoo ವಿವಾದ- ಆಂಧ್ರ ಸಿಎಂ ಬಳಿ ವಿಸ್ತೃತ ವರದಿ ಕೇಳಿದ ಕೇಂದ್ರ ಸರ್ಕಾರ

FollowUp:Tirupati Laddoo ವಿವಾದ- ಆಂಧ್ರ ಸಿಎಂ ಬಳಿ ವಿಸ್ತೃತ ವರದಿ ಕೇಳಿದ ಕೇಂದ್ರ ಸರ್ಕಾರ

ಸಂಸದ ಜಗದೀಶ್ ಶೆಟ್ಟರ್

Belagavi: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ‌: ಶೆಟ್ಟರ್

15-ankola

Ankola: ಶಿರೂರು ಗುಡ್ಡ ಕುಸಿತ ಪ್ರಕರಣ; ಗೋವಾದಿಂದ ಯಂತ್ರ; ಇಂದಿನಿಂದ ಶೋಧ ಕಾರ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-ankola

Ankola: ಶಿರೂರು ಗುಡ್ಡ ಕುಸಿತ ಪ್ರಕರಣ; ಗೋವಾದಿಂದ ಯಂತ್ರ; ಇಂದಿನಿಂದ ಶೋಧ ಕಾರ್ಯ

ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

Karwar: ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

dandeli

Dandeli: ನಗರದಲ್ಲಿ ಸರಣಿ ಕಳ್ಳತನ… ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು, ಪೊಲೀಸರ ಭೇಟಿ

2-yellapur

Yellapur: ರಸ್ತೆಯಲ್ಲಿ ಭಾರೀ ಗಾತ್ರದ ಹೊಂಡ; ನಿಯಂತ್ರಣ ತಪ್ಪಿ ಲಾರಿ ಪಲ್ಟಿ

Sirsi: ಬಸ್‌ – ಕಾರು ಮುಖಾಮುಖಿ ಢಿಕ್ಕಿ; ಚಾಲಕ ಮೃತ್ಯು

Sirsi: ಬಸ್‌ – ಕಾರು ಮುಖಾಮುಖಿ ಢಿಕ್ಕಿ; ಚಾಲಕ ಮೃತ್ಯು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

1-gttt

Politicians ಜಾತಿ, ಧರ್ಮಗಳ ಮೂಲಕ ನಮ್ಮನ್ನು ಪ್ರತ್ಯೇಕಿಸುತ್ತಿದ್ದಾರೆ: ತುಷಾರ್‌ ಗಾಂಧಿ

1-joshi

Tirupati Laddu; ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದ ಪರೀಕ್ಷಿಸಬೇಕು: ಜೋಶಿ ಆಗ್ರಹ

16-flipkart

Flipkart Big Billion Day ಸೆ. 27 ರಿಂದ ಆರಂಭ

FollowUp:Tirupati Laddoo ವಿವಾದ- ಆಂಧ್ರ ಸಿಎಂ ಬಳಿ ವಿಸ್ತೃತ ವರದಿ ಕೇಳಿದ ಕೇಂದ್ರ ಸರ್ಕಾರ

FollowUp:Tirupati Laddoo ವಿವಾದ- ಆಂಧ್ರ ಸಿಎಂ ಬಳಿ ವಿಸ್ತೃತ ವರದಿ ಕೇಳಿದ ಕೇಂದ್ರ ಸರ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.