ಪತ್ರಿಕೆಗಳಿಂದ ಸಮಾಜಕ್ಕೆ ಬೆಳಕು: ವಾಮದೇವ ಶ್ರೀ
ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ
Team Udayavani, Jul 24, 2019, 4:11 PM IST
ಕಂಪ್ಲಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಹೊಸಪೇಟೆ ಉಪ ವಿಭಾಗದ ಸಹಾಯಕ ಆಯುಕ್ತ ಪಿ.ಎನ್.ಲೋಕೇಶ್ ಮಾತನಾಡಿದರು.
ಕಂಪ್ಲಿ: ಪತ್ರಕರ್ತರ ಸೇವೆ ಅನನ್ಯ ಹಾಗೂ ಪತ್ರಿಕೆಗಳು ಸಮಾಜಕ್ಕೆ ಬೆಳಕು ನೀಡುತ್ತಿವೆೆ ಎಂದು ಎಮ್ಮಿಗನೂರು ಹಂಪಿ ಸಾವಿರ ದೇವರ ಮಹಾಂತರ ಮಠದ ವಾಮದೇವ ಶಿವಾಚಾರ್ಯ ಶ್ರೀ ಹೇಳಿದರು.
ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಂಪ್ಲಿ ತಾಲ್ಲೂಕು ಘಟಕದ ನೇತೃತ್ವದಲ್ಲಿ ಹಾಗೂ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಓರೆ ಕೋರೆಗಳನ್ನು ತಿದ್ದುವ ಜತೆಗೆ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ಇಂದಿನ ದಿನಮಾನದಲ್ಲಿ ಪತ್ರಕರ್ತರು ಹಲವಾರು ಸವಾಲುಗಳನ್ನು ಎದುರಿಸಿ ಕೆಲಸ ಮಾಡಬೇಕಾದ ಅನಿವಾರ್ಯತೆಯಿದೆ. ಪತ್ರಕರ್ತರು ತಮ್ಮ ಬರವಣಿಗೆಯಲ್ಲಿ ಅಭಿವೃದ್ಧಿ ಪರ ವಿಚಾರಗಳಿಗೆ ಒತ್ತು ನೀಡಬೇಕು. ವೃತ್ತಿಯಲ್ಲಿ ಬದ್ಧತೆ ಮತ್ತು ಪ್ರಾಮಾಣಿಕತೆಯಿದ್ದಲ್ಲಿ ಸಮಾಜದಲ್ಲಿ ಮನ್ನಣೆ ಪ್ರಾಪ್ತಿಯಾಗುತ್ತದೆ ಎಂದರು.
ಹೊಸಪೇಟೆ ಉಪ ವಿಭಾಗದ ಸಹಾಯಕ ಆಯುಕ್ತ ಪಿ.ಎನ್.ಲೋಕೇಶ್ ಕಾರ್ಯಕ್ರಮ ಅಧ್ಯಕ್ಷತೆವಹಿಸಿ ಮಾತನಾಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ ಇವರು ವಿಶೇಷ ಸನ್ಮಾನ ಸ್ವೀಕರಿಸಿ ಮಾತನಾಡಿ, ಪತ್ರಕರ್ತರ ಸೌಲಭ್ಯಗಳಿಲ್ಲದೇ, ದಿನವಿಡಿ ಕೆಲಸ ಕಾರ್ಯಗಳನ್ನು ಮಾಡುವ ಜತೆಗೆ ಸಮಾಜದ ಬದಲಾವಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ನಿವೇಶನ, ಉಚಿತ ಬಸ್ ಪಾಸ್, ಜೀವವಿಮೆ ಸೇರಿದಂತೆ ಸರ್ಕಾರದಿಂದ ಅನೇಕ ಸೌಲಭ್ಯಗಳನ್ನು ಪತ್ರಕರ್ತರಿಗೆ ಒದಗಿಸಬೇಕಾಗಿದೆ. ಪತ್ರಕರ್ತರಿಗೆ ಪ್ರತಿಯೊಂದು ಯೋಜನೆಗಳನ್ನು ಹಾಗೂ ಸೌಲತ್ತುಗಳನ್ನು ರಾಜ್ಯ ಮಟ್ಟದಲ್ಲಿ ಹೋರಾಟದ ಮೂಲಕ ಪಡೆದುಕೊಳ್ಳಬೇಕಾಗಿದೆ. ಕಂಪ್ಲಿಯಲ್ಲಿ ಪತ್ರಕರ್ತರ ಭವನ ನಿರ್ಮಾಣಕ್ಕೆ ಅಕಾರಿಗಳು ಹಾಗೂ ಜನಪ್ರತಿನಿಗಳು ಮುಂದಾಗಬೇಕು ಎಂದರು. ಸಿಪಿಐ ಡಿ.ಹುಲುಗಪ್ಪ, ಪಿಎಸ್‌ಐ ಕೆ.ಬಿ. ವಾಸುಕುಮಾರ್, ಪ್ರಾಂಶುಪಾಲ ಕೆ.ನಾಗೇಂದ್ರಪ್ಪ, ಪುರಸಭೆ ಅಧ್ಯಕ್ಷ ಎಂ.ಸುಧಿಧೀರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಸಾಧನೆಗೈದ ಬಯಲಾಟ ಕಲಾವಿದ ಬಳ್ಳಾರಿ ಕಲ್ಲಪ್ಪ, ಸಾಹಿತಿ ಜಿ.ಪ್ರಕಾಶ್ ವಕೀಲರು, ಕೃಷಿಕ ಜಿ.ಸಂಗಪ್ಪ, ಶಿಕ್ಷಕ ಕೆ.ವಿರುಪಾಕ್ಷಪ್ಪ, ಕಾರ್ಮಿಕ ಡಿ. ಮುನಿಸ್ವಾಮಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮತ್ತು ಗಣ್ಯರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎಂ. ರೇಣುಕಾ, ಕ.ಕಾ.ಪ.ಸಂ ಜಿಲ್ಲಾ ಉಪಾಧ್ಯಕ್ಷ ಭಾವೈಕ್ಯ ವೆಂಕಟೇಶ್, ಕಂಪ್ಲಿ ತಾಲೂಕು ಅಧ್ಯಕ್ಷ ಸೈಯದ್ ಜಾನಿ, ಗೌರವಾಧ್ಯಕ್ಷ ಎಂ.ಎಸ್. ವಿರೂಪಾಕ್ಷಯ್ಯಸ್ವಾಮಿ, ಉಪಾಧ್ಯಕ್ಷರಾದ ಬಂಗಿ ದೊಡ್ಡಮಂಜುನಾಥ, ಎಚ್.ಎಂ. ಪಂಡಿತಾರಾಧ್ಯಸ್ವಾಮಿ, ಬೋವೇರ್ ಚಂದಶೇಖರ್, ಪ್ರಧಾನ ಕಾರ್ಯದರ್ಶಿ ಬಿ.ರಸೂಲ್, ಖಜಾಂಚಿ ಪಿ.ದ್ಯಾಮನಗೌಡ, ಕಾರ್ಯದರ್ಶಿ ರವಿ ಮಣ್ಣೂರು, ಸದಸ್ಯರಾದ ಜಿ.ಚಂದ್ರಶೇಖರಗೌಡ, ಕರಿ ವಿರೂಪಾಕ್ಷಿ ಹಾಗೂ ವರದಿಗಾರರಾದ ಬಸಯ್ಯಸ್ವಾಮಿ, ಜೀರ್ ಗಾದಿಲಿಂಗ ಸೇರಿದಂತೆ ಪತ್ರಕರ್ತರು, ಕಾಲೇಜು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ
Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.