ಹಳೇ ಬೇರು ಹೊಸ ಉಗುರು
Team Udayavani, Jul 25, 2019, 5:00 AM IST
ಉಗುರು ಅಲಂಕಾರಕ್ಕಷ್ಟೇ ಅಲ್ಲ. ಪ್ರಕೃತಿ ಮನುಷ್ಯನಿಗೆ ಉಗುರುಗಳನ್ನು ದಯಪಾಲಿಸಿರುವುದರ ಹಿಂದೆ ಒಂದು ಉದ್ದೇಶವಿದೆ. ಅದರದ್ದೇ ಆದ ಮಿಲಿಯ ವರ್ಷಗಳ ವಿಕಾಸ ಪಥದಲ್ಲಿ ನಾವೆಲ್ಲರೂ ಬಲು ದೂರ ಸಾಗಿ ಬಂದಿದ್ದೇವೆ. ಅದರತ್ತ ಒಂದು ನೋಟ…
ಬೆರಳುಗಳ ಸೌಂದರ್ಯ ಹೆಚ್ಚಿಸುವಲ್ಲಿ ಉಗುರು ಪ್ರಮುಖ ಪಾತ್ರವಹಿಸುತ್ತವೆ. ಅದರಲ್ಲೂ ಹೆಣ್ಣು ಮಕ್ಕಳು ತಮ್ಮ ಉಗುರುಗಳಿಗೆ ಆಕರ್ಷಕ ಬಣ್ಣಗಳನ್ನು ಹಚ್ಚಿಕೊಂಡು ತಮ್ಮ ಸೌಂದರ್ಯವನ್ನು ಉಗುರುಗಳಿಂದ ಮತ್ತಷ್ಟು ಮೆರುಗುಗೊಳಿಸಿಕೊಳ್ಳುತ್ತಾರೆ. ಆದರೆ ಉಗುರುಗಳ ಮಹತ್ವ ಕೇವಲ ಅಲಂಕಾರಕ್ಕೆ ಸೀಮಿತವಾಗುವುದಿಲ್ಲ. ಪ್ರಾಚೀನ ಕಾಲದ ಮಾನವ ಉಗುರುಗಳನ್ನು ಆಯುಧವಾಗಿ ಬಳಸಿಕೊಳ್ಳುತ್ತಿದ್ದ. ಅಷ್ಟು ಮಾತ್ರವಲ್ಲ, ಮರ ಏರಲು, ವಸ್ತುಗಳನ್ನು ಹಿಡಿದುಕೊಳ್ಳಲು ಉಗುರುಗಳು ಸಹಕರಿಸುತ್ತಿದ್ದವು. ಆ ಕಾಲಘಟ್ಟದಿಂದ ಮಾವನ ಬಹಳ ದೂರ ಸಾಗಿ ಬಂದಿದ್ದಾನೆ.
ಗರ್ಭದಲ್ಲಿ ಮಗುವಿನ ಬೆಳವಣಿಗೆ ಕಾಣಿಸಿಕೊಂಡ 20 ವಾರದಲ್ಲೇ ಸಣ್ಣ ಸಣ್ಣ ಉಗುರಿನ ಅಂಕೆಗಳು ಚಿಗುರುತ್ತವಂತೆ. ಮಗು ಹುಟ್ಟುವ ಹೊತ್ತಿಗೆ ಕೈ ಬೆರಳುಗಳು ಹಾಗೂ ಕಾಲ್ಬೆರಳುಗಳು ಸಂಪೂರ್ಣವಾಗಿ ರೂಪುಗೊಂಡು, ಉಗುರುಗಳ ಕಿರೀವನ್ನೇ ಹೊಂದಿರುತ್ತವೆ. ಒಮ್ಮೆ ಮೂಡಿದ ಉಗುರುಗಳು ಜೀವನ ಪರ್ಯಂತ ನಮ್ಮ ಜೊತೆ ಶಾಶ್ವತವಾಗಿ ಉಳಿಯುವುದು ಅಚ್ಚರಿಯೇ ಸರಿ. ಏಕೆಂದರೆ, ದೇಹದ ಅನೇಕ ಭಾಗಗಳು ವಯಸ್ಸಿಗೆ ತಕ್ಕಂತೆ ಬೆಳವಣಿಗೆಯನ್ನು ಸ್ಥಗಿತಗೊಳಿಸಿದರೆ, ಉಗುರು ಮಾತ್ರ ಕಡೆಯವರೆಗೂ ಬೆಳೆಯುತ್ತಲೇ ಇರುತ್ತದೆ. ಚಿವುಟಿದಷ್ಟೂ ಮತ್ತೆ ಮತ್ತೆ ಚಿಗುರುತ್ತಲಿರುತ್ತವೆ.
ಅವು ಏಕೆ ಬೆಳೆಯುತ್ತವೆ!?
ಉಗುರುಗಳು ಕೆರಾಟಿನ್ ಎಂಬ ವಸ್ತುವಿನಿಂದ ರೂಪಿಸಲ್ಪಟ್ಟಿದೆ. ಅದೇ ಕೆರಾಟಿನ್‌ನಿಂದ ನಮ್ಮ ಕೂದಲು ಕೂಡಾ ರೂಪಿಸಲ್ಪಟ್ಟಿದೆ. ಕೆರಾಟಿನ್ ಎನ್ನುವುದು ಜೀವರಹಿತವಾದ ವಸ್ತು ಎಂದು ಪರಿಗಣಿಸಲ್ಪಟ್ಟಿದೆ. ಆದರೆ, ಇವು ಶುರುವಿನಲ್ಲಿ ಜೀವವುಳ್ಳ ಕೋಶಗಳೇ ಆಗಿರುತ್ತವೆ. ಈ ಕೋಶಗಳೇ ಅಗತ್ಯ ಪೋಷಕಾಂಶಗಳನ್ನು ಪಡೆದುಕೊಂಡು ಮುಂದೆ ಉಗುರುಗಳಾಗಿ ಮಾರ್ಪಾಡಾಗುತ್ತವೆ. ಇವುಗಳು ನರಮಂಡಲದೊಂದಿಗೆ ಸಂಪರ್ಕ ಹೊಂದಿರುತ್ತವೆ. ಅದರಿಂದಲೇ ಉಗುರು ತನ್ನ ಬೆಳವಣಿಗೆಗೆ ಬೇಕಾದ ಪೋಷಕಾಂಶಗಳನ್ನು ಪಡೆದುಕೊಳ್ಳುವುದು. ಅಂದ ಹಾಗೆ ಉಗುರು ಬೆಳೆಯಲು ಬೇಕಾದ ಅಗತ್ಯ ಪೋಷಕಾಂಶ ಎಂದರೆ ಗ್ಲುಕೋಸ್. ದಿನಕ್ಕೆ 0.1 ಮಿಲಿಮೀಟರ್‌ನಷ್ಟು ಬೆಳೆವುದಂತೆ.
ಸತ್ತ ನಂತರವೂ ಉಗುರು ಬೆಳೆಯುತ್ತಾ?
ನಮ್ಮಲ್ಲಿ ಅದೊಂದು ನಂಬಿಕೆ ಇದೆ. ಸತ್ತ ನಂತರವೂ ಉಗುರು ಬೆಳೆಯುತ್ತದೆ ಎಂದು. ಆದರೆ, ಅದು ಸುಳ್ಳು ಎಂದು ಸಂಶೋಧಕರು ದೃಢಪಡಿಸಿದ್ದಾರೆ. ಭೂಮಿಯಲ್ಲಿ ಹೂತು ಹಾಕಿದ್ದ ದೇಹದ ಉಗುರುಗಳು ನೀಳವಾಗಿರುವಂತೆ ಕಂಡದ್ದರಿಂದಲೇ ಉಗುರು ಬೆಳೆಯುತ್ತೆ ಎಂಬ ಪುಕಾರು ಹರಡಿತ್ತು. ಆದರೆ ವಸ್ತುಸ್ಥಿತಿಯೇ ಬೇರೆ. ಮೃತ ದೇಹ ದಿನ ಕಳೆದಂತೆ ಕೃಶವಾಗುತ್ತಾ, ಚಪ್ಪಟೆಯಾಗುತ್ತಾ ಹೋಗುತ್ತದೆ. ಆಗ ಚರ್ಮದ ಅಡಿ ಸೇರಿ ಹೋಗಿದ್ದ ಉಗುರಿನ ಭಾಗ ಹೊರಗೆ ಕಾಣಲು ಶುರುವಾಗುತ್ತದೆ. ಇದರಿಂದಾಗಿ ಉಗುರು ಬೆಳೆಯುತ್ತಿರುವಂತೆ ತೋರುತ್ತದೆ. ಅಲ್ಲದೆ ಅದರ ಬೆಳವಣಿಗೆಗೆ ಬೇಕಾದ ಪೋಷಕಾಂಶ ಸತ್ತ ನಂತರ ಸಿಗದಿರುವುದರಿಂದ ಉಗುರು ಬೆಳೆಯಲು ಸಾಧ್ಯವೇ ಇಲ್ಲ ಎಂದು ತಜ್ಞರು ಖಡಾಖಂಡಿತವಾಗಿ ಹೇಳುತ್ತಾರೆ.
– ಯೋಗೇಶ್ ಎಂ. ಜಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.