ಪ್ರವಾಸಿಗರತ್ತ ಕೈ ಬೀಸುತ್ತಿರುವ ಭರಚುಕ್ಕಿ
Team Udayavani, Jul 25, 2019, 3:00 AM IST
ಕೊಳ್ಳೇಗಾಲ: ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಪುಷ್ಯ ಮಳೆ ಅಬ್ಬರಕ್ಕೆ ಕೃಷ್ಣರಾಜಸಾಗರ ಮತ್ತು ಕಬಿನಿ ಡ್ಯಾಂಗಳಿಗೆ ನೀರು ಹರಿದು ಬಂದ ಪರಿಣಾಮ ಇಷ್ಟು ದಿನ ನೀರಿಲ್ಲದೆ ಬಣಗುಡುತ್ತಿದ್ದ ತಾಲೂಕಿನ ಭರಚುಕ್ಕಿ ಜಲಪಾತ ಧುಮ್ಮಿಕ್ಕಿ ಹರಿದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ತಾಲೂಕಿನ ಭರಚುಕ್ಕಿ ಜಲಪಾತ ಪ್ರವಾಸಿಗರನ್ನು ಆಕರ್ಷಿಸುವ ಹೆಸರಾಂತ ಜಲಪಾತವಾಗಿದೆ. ಶಿವನಸಮುದ್ರದ ಸಮೀಪ ಗಗನಚುಕ್ಕಿ ಜಲಪಾತವಿದೆ. ಭರಚುಕ್ಕಿ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ಗಗನಚುಕ್ಕಿ ಜಲಪಾತವನ್ನು ವೀಕ್ಷಣೆ ಮಾಡಿ ತೆರಳುವುದು ವಾಡಿಕೆಯಾಗಿದೆ.
ಮಳೆಯ ಅಬ್ಬರ: ಮಲೆನಾಡು ಕರಾವಳಿ ಪ್ರದೇಶಗಳಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು, ನದಿಗಳ ಭರ್ತಿಯಿಂದಾಗಿ ನೀರು ಹರಿದು ಕೃಷ್ಣರಾಜಸಾಗರ ಡ್ಯಾಂ ಮತ್ತು ಕಬಿನಿ ಡ್ಯಾಂ ತುಂಬಲಾರಂಭಿಸಿದಂತೆ ಅಧಿಕಾರಿಗಳು ಕೃಷ್ಣರಾಜಸಾಗರ ಡ್ಯಾಂನಿಂದ 5 ಸಾವಿರ ಕ್ಯೂಸೆ ಕ್, ಕಬಿನಿಯಿಂದ 3 ಸಾವಿರ ಕ್ಯೂಸೆ ಕ್ ನೀರು ಬಿಡಲಾಗುತ್ತಿದೆ. ಜಲಪಾತಕ್ಕೆ ನೀರು ಹರಿದು ಬಂದು ಭರಚುಕ್ಕಿ ಜಲಪಾತ ಹಾಲಿನ ನೊರೆಯಂತೆ ಹರಿಯಲಾರಂಭಿಸಿದೆ.
ಕುಡಿಯುವ ನೀರು ಪೂರೈಕೆಗಾಗಿ: ಕೇಂದ್ರ ಜಲನೀತಿ ಆಯೋಗ ತಮಿಳುನಾಡಿನಲ್ಲಿ ಕುಡಿಯಲು ನೀರಿಲ್ಲದೆ ರೈಲುಗಳ ಮೂಲಕ ಕರ್ನಾಟಕದಿಂದ ತಮಿಳುನಾಡಿಗೆ ಸಾಗಿಸಲಾಗುತ್ತಿದೆ. ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಮಳೆ ಬೀಳುತ್ತಿರುವುದರಿಂದ ತಮಿಳುನಾಡಿಗೆ ಮಾನವೀಯತೆಯ ದೃಷ್ಟಿಯಿಂದ ಕುಡಿಯುವ ನೀರು ಪೂರೈಕೆಗೆ ಕೆಆರ್‌ಎಸ್ ಮತ್ತು ಕಬಿನಿ ಡ್ಯಾಂಗಳಿಗೆ 8 ಸಾವಿರ ಕ್ಯೂಸೆ ಕ್ ನೀರು ಬಿಡಲಾಗುತ್ತಿದೆ. ನೀರು ಹರಿದು ಬಂದು ಭರಚುಕ್ಕಿ ಜಲಪಾತದ ಮೂಲಕವೇ ಹರಿದು ಹೋಗುವುದರಿಂದ ಜಲಪಾತ ಪ್ರವಾಸಿಗರಿಗೆ ಆಕರ್ಷಣೆಯವಾಗಿ ಗೋಚರವಾಗುತ್ತಿದೆ.
ಕೈ ಬೀಸಿ ಕರೆಯುವ ಜಲಪಾತ: ಭರಚುಕ್ಕಿ ಜಲಪಾತ ಬಣಗುಡುತ್ತಿದ್ದು, ಪ್ರವಾಸಿಗರು ವೀಕ್ಷಣೆ ಮಾಡಿ ಬರಿದಾದ ಜಲಪಾತವನ್ನು ಕಂಡು ಅಸಮಾಧಾನದಿಂದ ತೆರಳುತ್ತಿದ್ದ ಹೊತ್ತಿನಲ್ಲೇ ಕೆಆರ್‌ಎಸ್ ಮತ್ತು ಕಬಿನಿ ನಾಲೆಯಿಂದ ನೀರು ಬಿಡುತ್ತಿದ್ದಂತೆ ಜಲಪಾತದಲ್ಲಿ ಹರಿದು ಜನರನ್ನು ಕೈಬೀಸಿ ಕರೆಯುವಂತೆ ಧುಮ್ಮಿಕ್ಕುತ್ತಿದೆ.
ಬಾರಿ ಸಂಖ್ಯೆಯಲ್ಲಿ ಜನರು: ಕಳೆದ ವರ್ಷ ಕಾವೇರಿ ಮತ್ತು ಕಬಿನಿ ಡ್ಯಾಂಗಳಿಂದ ಅತಿಯಾದ ಹೊರಹರಿವು ನೀರಿನಿಂದಾಗಿ ಕಾವೇರಿ ನದಿಯಲ್ಲಿ ಪ್ರವಾಹ ಉಕ್ಕಿ ವಿವಿಧ ಗ್ರಾಮಗಳು ಜಲಾವೃತಗೊಂಡಿತ್ತು. ನಂತರ ನದಿಯ ನೀರು ಭರಚುಕ್ಕಿಯಲ್ಲಿ ಮತ್ತಷ್ಟು ರಮಣೀಯವಾಗಿ ಬೀಳುತ್ತಿದ್ದಂತೆ ಪ್ರವಾಸಿಗರ ದಂಡು ಬಾರಿ ಸಂಖ್ಯೆಯಲ್ಲಿ ಆಗಮಿಸಿ ಜಲಪಾತ ವೀಕ್ಷಣೆ ಮಾಡಿ ಕಣ್ತುಂಬಿಕೊಂಡಿದ್ದರು.
ಸಿಸಿ ಕ್ಯಾಮೆರಾ ಅಳವಡಿಕೆ: ಜಲಪಾತದಲ್ಲಿ ನೀರು ಧುಮ್ಮಿಕ್ಕಿ ಹರಿಯುವುದನ್ನು ವೀಕ್ಷಣೆ ಮಾಡುವ ಸಲುವಾಗಿ ಪ್ರವಾಸಿಗರ ದಂಡೇ ಆಗಮಿಸುತ್ತಿದ್ದಂತೆ ಎಚ್ಚೆತ್ತ ತಾಲೂಕು ಆಡಳಿತ ಮುಂಜಾಗ್ರತಾ ಕ್ರಮವಾಗಿ ಅಪಘಾತ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಮತ್ತು ತಿಳಿವಳಿಕೆಯ ಫಲಕ ಹಾಗೂ ಬ್ಯಾನರ್‌ಗಳನ್ನು ಅಳವಡಿಸಿ ಜಲಪಾತದಲ್ಲಿ ಯಾವುದೆ ತರಹದ ಸಾವು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗಿದೆ.
ಸೆಲ್ಫೀಗಾಗಿ ಬರುವವರೇ ಹೆಚ್ಚು: ಜಲಪಾತವನ್ನು ವೀಕ್ಷಣೆ ಮಾಡಲು ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ಪ್ರವಾಸಿಗರು ಜಲಪಾತ ವೀಕ್ಷಣೆ ಮಾಡಿ ನಂತರ ಜಲಪಾತದೊಂದಿಗೆ ಸೆಲ್ಫೀ ಕ್ಲಿಕ್ಕಿಸಿಕೊಂಡು ತೀವ್ರ ಅಸಮಾಧಾನದಿಂಲೇ ಇಷ್ಟು ಬೇಗ ಹೋಗ ಬೇಕೆ ಎಂದು ಕೊಂಡು ತೆರಳಿದರು. ನೀರು ಧುಮ್ಮಿಕ್ಕಿ ಹರಿಯುವುದನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಯಾವುದೇ ತರಹದ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲು ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಜಲಪಾತದಲ್ಲಿ ನೀರು ಹರಿಯುತ್ತಿದ್ದಂತೆ ಪ್ರವಾಸಿಗರು ಆಗಮಿಸುವ ಮುನ್ಸೂಚನೆ ಇದ್ದು, ನೀರಿನ ತಳಭಾಗಕ್ಕೆ ತೆರಳದಂತೆ ಮತ್ತು ಜಲಪಾತವನ್ನು ಮೇಲ್ಭಾಗದಿಂದಲೇ ವೀಕ್ಷಣೆ ಮಾಡಿ ತೆರಳುವಂತೆ ಸಂಬಂಧಿಸಿದ ಸಿಬ್ಬಂದಿಗೆ ಸೂಕ್ತ ನಿರ್ದೇಶನ ನೀಡಲಾಗಿದ್ದು, ಜಲಪಾತದಲ್ಲಿ ಯಾವುದೇ ತರಹದ ಘಟನೆಗಳು ಸಂಭವಿಸಿದಂತೆ ಕ್ರಮ ಕೈಗೊಳ್ಳಲಾಗಿದೆ.
-ಏಡುಕೊಂಡಲು, ಡಿಎಫ್ಒ
* ಡಿ.ನಟರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ
Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.