ಮೆಸ್ಸಿಗೆ ಒಂದು ಪಂದ್ಯ ನಿಷೇಧ
Team Udayavani, Jul 25, 2019, 5:27 AM IST
ರಿಯೋ ಡಿ ಜನೈರೊ: ಆರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಅವರಿಗೆ ಒಂದು ಪಂದ್ಯ ನಿಷೇಧ ಮತ್ತು 1,500 ಡಾಲರ್ ದಂಡ ವಿಧಿಸಲಾಗಿದೆ.
ದಕ್ಷಿಣ ಅಮೆರಿಕನ್ ಫುಟ್ಬಾಲ್ ಕಾನೆ#ಡರೇಶನ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ ಮತ್ತು ಚಿಲಿ ವಿರುದ್ಧ ನಡೆದ “ಕೊಪಾ ಅಮೆರಿಕ’ ಕೂಟದ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದ ವೇಳೆ ರೆಡ್ ಕಾರ್ಡ್ ಪಡೆದು ಹೊರನಡೆದ ಕಾರಣಕ್ಕಾಗಿ ಮೆಸ್ಸಿಗೆ ನಿಷೇಧ ಮತ್ತು ದಂಡ ವಿಧಿಸಲಾಗಿದೆ. ನಿಷೇಧದಿಂದಾಗಿ 2022ರ ವಿಶ್ವಕಪ್ಗಾಗಿ ನಡೆಯುವ ಆರ್ಜೆಂಟೀನಾದ ಮೊದಲ ಅರ್ಹತಾ ಪಂದ್ಯದಲ್ಲಿ ಮೆಸ್ಸಿ ಆಡುವ ಸಾಧ್ಯತೆಯಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.