ಕುಡ್ಲದಲ್ಲಿ ‘ಗಿರಿಗಿಟ್’ ಕಮಾಲ್
ಕುಡ್ಲದಲ್ಲಿ 'ಗಿರಿಗಿಟ್' ಕಮಾಲ್
Team Udayavani, Jul 25, 2019, 5:00 AM IST
ಸದ್ಯ ಪೋಸ್ಟರ್ ಹಾಗೂ ಒಂದೊಂದು ಡೈಲಾಗ್ ಮೂಲಕವೇ ಸಾಮಾಜಿಕ ಜಾಲತಾಣದ ಮೂಲಕ ಸುದ್ದಿಯಲ್ಲಿರುವ ಸಿನೆಮಾ ‘ಗಿರಿಗಿಟ್’!
ವಿಭಿನ್ನ ಪ್ರಚಾರದಲ್ಲಿಯೇ ಗಮನಸೆಳೆದಿರುವ ‘ಗಿರಿಗಿಟ್’ ಕೋಸ್ಟಲ್ವುಡ್‌ನಲ್ಲಿ ಹೊಸ ನಿರೀಕ್ಷೆ-ಭರವಸೆಯೊಂದಿಗೆ ತೆರೆಗೆ ಬರಲು ಕಾತುರವಾಗಿದೆ. ಕೊಂಚ ಮಟ್ಟಿಗೆ ಸಪ್ಪೆ ಆಗಿರುವ ಕೋಸ್ಟಲ್ವುಡ್‌ಗೆ ಹೊಸ ಲುಕ್ ಹಾಗೂ ಭವಿಷ್ಯ ಕಲ್ಪಿಸುವ ನೆಲೆಯಲ್ಲಿಯೂ ಗಿರಿಗಿಟ್ ಮೇಲೆ ಮಹತ್ತರ ಜವಾಬ್ದಾರಿಯಿದೆ. ಹೀಗಾಗಿಯೇ ಕೋಸ್ಟಲ್ವುಡ್‌ನಲ್ಲಿ ಹೊಸ ಮೂಡ್ ಕ್ರಿಯೇಟ್ ಮಾಡುವ ತುಡಿತದಲ್ಲಿ ಗಿರಿಗಿಟ್ ಇದೆ.
ರೂಪೇಶ್ ಶೆಟ್ಟಿ ಅವರು ಮೊದಲು ಆ್ಯಕ್ಷನ್ ಕಟ್ ಹೇಳಿದ ಸಿನೆಮಾವಿದು. ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು ಸೇರಿದಂತೆ ಪ್ರಬುದ್ಧ ಕಲಾವಿದರು ಈ ಸಿನೆಮಾದಲ್ಲಿರುವ ಕಾರಣದಿಂದ ಗಿರಿಗಿಟ್ ಮೇಲೆ ಸಾಕಷ್ಟು ನಿರೀಕ್ಷೆ ಸುತ್ತಾಡುತ್ತಿದೆ.
ಅಂದಹಾಗೆ, ಸಿನೆಮಾವೊಂದು ಸದ್ಯ ಹೆಚ್ಚು ಜನರ ಬಳಿಗೆ ರೀಚ್ ಆಗುವುದು ಸೋಶಿಯಲ್ ಮೀಡಿಯಾ ಮೂಲಕ. ಸಿನೆಮಾದ ಪೋಸ್ಟರ್, ಟ್ರೇಲರ್ ಎಲ್ಲವೂ ಮೊಬೈಲ್ನಲ್ಲಿ ಹೆಚ್ಚು ಜನರಿಗೆ ಹತ್ತಿರವಾಗುವ ಕಾರಣದಿಂದ ಪ್ರಚಾರ ತಂತ್ರಕ್ಕೆ ಇದೊಂದು ಬೆಸ್ಟ್ ಮಾಧ್ಯಮ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಗಿರಿಗಿಟ್ ಚಿತ್ರತಂಡ ಒಂದೊಂದೇ ಶೈಲಿಯ ಪ್ರಚಾರ ತಂತ್ರದ ಮೂಲಕ ಗಿರಿಗಿಟ್ ಪ್ರಚಾರದಲ್ಲಿ ನಿರತವಾಗಿದೆ. ವಿಶೇಷವೆಂದರೆ; ಇಲ್ಲಿಯವರೆಗೆ ಗಿರಿಗಿಟ್‌ನ ಎಲ್ಲಾ ಪೋಸ್ಟರ್ ಹಾಗೂ ಟ್ರೇಲರ್ ಸಾಕಷ್ಟು ದಾಖಲೆ ಬರೆಯುವ ಜತೆಗೆ-ಕೋಸ್ಟಲ್ವುಡ್‌ನಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ ಎಂಬುದು ಕೂಡ ಅಷ್ಟೇ ಸತ್ಯ.
ಅರವಿಂದ ಬೋಳಾರ್ ಕೋದಂಡ ಎಂಬ ಲಾಯರ್ ಲುಕ್‌ನಲ್ಲಿದ್ದರೆ, ವಾಮಂಜೂರು ಯಕ್ಷಗಾನದ ವೇಷ ಹಾಕಿದ ಪೋಸ್ಟರ್ ಹಾಗೂ ಮೀಸೆ ಮಾಮನ ಲುಕ್‌ನಲ್ಲಿ ನವೀನ್ ಡಿ ಪಡೀಲ್ ಅವರ ಲುಕ್ ಚಿತ್ರದ ಪ್ರಚಾರಕ್ಕೆ ಹೆಚ್ಚು ಬಲ ನೀಡಿದೆ. ಅದರಲ್ಲಿಯೂ ಪೋಸ್ಟರ್ ರಿಲೀಸ್ ಮಾಡುವ ಮೊದಲ ದಿನ ಈ ಕುರಿತಂತೆ ಮಾಡಿದ ಕೆಲವೊಂದು ಹಾಸ್ಯದ ಸನ್ನಿವೇಶಗಳು ಕೂಡ ಕೋಸ್ಟಲ್ವುಡ್‌ನಲ್ಲಿ ಪ್ರಥಮ ಪ್ರಯೋಗ.
ಆ ಬಳಿಕ ಅರವಿಂದ ಬೋಳಾರ್, ನವೀನ್ ಡಿ ಪಡೀಲ್ ಹಾಗೂ ಈಗ ಭೋಜರಾಜ್ ವಾಮಂಜೂರು ಅವರ ಎಂಟ್ರಿಯ ಟ್ರೇಲರ್ ರಿಲೀಸ್ ಆಗಿ ಅದು ಇನ್ನಷ್ಟು ಕುತೂಹಲ ಸೃಷ್ಟಿಸಿದೆ. ವಿಭಿನ್ನ ಕ್ಯಾರೆಕ್ಟರ್‌ಗಳೊಂದಿಗೆ ಅವರು ಗಿರಿಗಿಟ್‌ನಲ್ಲಿ ಕಮಾಲ್ ಮಾಡುವುದು ಸತ್ಯ ಎಂಬುದು ಟ್ರೇಲರ್ ಕಂಡಾಗಲೇ ಅರ್ಥವಾಗುತ್ತದೆ.
ಅಂದಹಾಗೆ; ಕೋಸ್ಟಲ್ವುಡ್‌ನಲ್ಲಿ ಭರವಸೆಯ ನಟನಾಗಿ ಮಿಂಚಿರುವವರು ನಟ ರೂಪೇಶ್ ಶೆಟ್ಟಿ. ಹೊಸತನದೊಂದಿಗೆ ಹೊಸ ನಿರೀಕ್ಷೆಯಲ್ಲಿ ಸಿನೆಮಾ ಬರಬೇಕು ಎಂಬ ಲೆಕ್ಕ ಹಾಕಿಕೊಂಡವರು ಅವರು. ಹೀಗಾಗಿಯೇ ತುಳು ಹಾಗೂ ಕನ್ನಡದಲ್ಲಿಯೂ ನಾಯಕ ನಟನಾಗಿ ಮಿಂಚುವ ಅವಕಾಶ ಅವರಿಗೆ ದೊರಕಿದೆ. ‘ಐಸ್‌ಕ್ರೀಂ’, ‘ಅಮ್ಮೆರ್ ಪೊಲೀಸಾ’ ಸೇರಿದಂತೆ ಹಲವು ತುಳು ಸಿನೆಮಾ ಮಾಡಿದ ರೂಪೇಶ್ ಇದೀಗ ನೇರವಾಗಿ ‘ಗಿರಿಗಿಟ್’ ಸಿನೆಮಾಕ್ಕೆ ಆ್ಯಕ್ಷನ್ ಕಟ್ ಹೇಳುವಲ್ಲಿ ಯಶಸ್ವಿಯಾಗಿದ್ದಾರೆ. ಆಗಸ್ಟ್ ವೇಳೆಗೆ ಬಿಡುಗಡೆಯ ನಿರೀಕ್ಷೆಯಲ್ಲಿರುವ ಈ ಸಿನೆಮಾ ರೂಪೇಶ್ ಅವರ ಬಹುನಿರೀಕ್ಷೆಯ ಸಿನೆಮಾ.
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.