ವಿಶ್ಲೇಷಣೆ; 6 ದಿನದೊಳಗೆ ಸರ್ಕಾರ ರಚಿಸದಿದ್ರೆ ಸಂಬಳಕ್ಕೂ ಕತ್ತರಿ, ಮತ್ತೆ 113ರ ಗುಮ್ಮ
ನಾಗೇಂದ್ರ ತ್ರಾಸಿ, Jul 25, 2019, 1:07 PM IST
ಬೆಂಗಳೂರು:ಕಾಂಗ್ರೆಸ್, ಜೆಡಿಎಸ್ ನೇತೃತ್ವದ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆಯಲ್ಲಿ ಬಹುಮತ ಕಳೆದುಕೊಂಡ ಬಳಿಕ ಇದೀಗ ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತದಾ? ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರಾ? ಸ್ಪೀಕರ್ ನಡೆ ಏನು? ಬಿಜೆಪಿ ಹೈಕಮಾಂಡ್ ಚಿತ್ತ ಯಾರತ್ತ ಹೀಗೆ ಹತ್ತು, ಹಲವಾರು ಪ್ರಶ್ನೆಗಳ ಬಿಸಿ,ಬಿಸಿ ಚರ್ಚೆ ನಡೆಯುತ್ತಿದೆ.
ಬುಧವಾರ ಅಥವಾ ಗುರುವಾರವೇ ಪ್ರಮಾಣವಚನ ಸ್ವೀಕರಿಸಬೇಕೆಂಬ ತರಾತುರಿಯಲ್ಲಿದ್ದ ಬಿಎಸ್ ಯಡಿಯೂರಪ್ಪನವರ ಅತ್ಯುತ್ಸಾಹಕ್ಕೆ ಬಿಜೆಪಿ ಹೈಕಮಾಂಡ್ ತಣ್ಣಿರೇರಚಿದೆ. ಗುರುವಾರ ಬೆಳಗ್ಗೆ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ನಿಯೋಗ ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಿದೆ.
ಆದರೆ ಸರ್ಕಾರ ರಚನೆ ಬಗ್ಗೆ ಆತುರ ಬೇಡ ಎಂಬ ಸಂದೇಶ ನೀಡಿದ್ದಾರೆ. ಅಷ್ಟೇ ಅಲ್ಲ ಮತ್ತೊಂದು ಸುತ್ತಿನ ಮಾತುಕತೆ ಸಂಜೆ ನಡೆಸುವುದಾಗಿ ಬಿಜೆಪಿ ನಿಯೋಗ ತಿಳಿಸಿದ್ದಾರೆ. ಮತ್ತೊಂದೆಡೆ ಸರ್ಕಾರ ರಚನೆಗೆ ಬಹುಮತ ಬೇಕು ಎಂಬ ಹೇಳಿಕೆ ನೀಡುವ ಮೂಲಕ ರಾಜ್ಯರಾಜ್ಯಕಾರಣದ ಬಿಕ್ಕಟ್ಟು ಇನ್ನಷ್ಟು ದಿನಗಳ ಕಾಲ ಮುಂದುವರಿಯಲಿದೆ ಎಂಬುದಕ್ಕೆ ಸಾಕ್ಷಿಯಾದಂತಿದೆ.
ಏತನ್ಮಧ್ಯೆ ರಾಜೀನಾಮೆ ನೀಡಿರುವ ಬಂಡಾಯ ಶಾಸಕರ ಭವಿಷ್ಯ ಇದೀಗ ಸ್ಪೀಕರ್ ರಮೇಶ್ ಕುಮಾರ್ ಅವರ ಕೈಯಲ್ಲಿದೆ. ರಾಜೀನಾಮೆ ಅಂಗೀಕಾರವಾಗದೆ ಬಿಜೆಪಿ ಸರ್ಕಾರ ರಚನೆ ಮತ್ತಷ್ಟು ವಿಳಂಬವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಬಿಜೆಪಿ ನಿಯೋಗ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿಯಾಗಿ ಶೀಘ್ರವೇ ಶಾಸಕರ ರಾಜೀನಾಮೆ ಸ್ವೀಕರಿಸುವಂತೆ ಮನವಿ ಮಾಡಿಕೊಂಡಿದ್ದರು.
ಧನವಿನಿಯೋಗ ವಿಧೇಯಕ ಪಾಸ್ ಆಗದಿದ್ರೆ ಸರ್ಕಾರಿ ನೌಕರರಿಗೆ ಸಂಬಳಕ್ಕೂ ತತ್ವಾರ!
ಕಾಂಗ್ರೆಸ್, ಜೆಡಿಎಸ್ ಬಂಡಾಯ ಶಾಸಕರ ಅನರ್ಹತೆಗೆ ಕಾಂಗ್ರೆಸ್ ದೂರು ನೀಡಿದ್ದ ಹಿನ್ನೆಲೆಯಲ್ಲಿ ಇದೀಗ ಚೆಂಡು ಸ್ಪೀಕರ್ ಅಂಗಳಕ್ಕೆ ಬಂದು ನಿಂತಿದೆ. ಅತೃಪ್ತ ಶಾಸಕರ ರಾಜೀನಾಮೆ ಸ್ವೀಕಾರವಾಗದ ಹಿನ್ನೆಲೆಯಲ್ಲಿ 225 ಸದನದ ಬಲದಲ್ಲಿ ಬಹುಮತ ಸಾಬೀತುಪಡಿಸಲು ಬೇಕಾಗಿರುವ ಮ್ಯಾಜಿಕ ಸಂಖ್ಯೆ 113 ಆಗಿರುತ್ತದೆ. ಸದ್ಯ ಬಿಜೆಪಿ ಬಳಿ ಇರುವುದು 105 ಹಾಗೂ ಪಕ್ಷೇತರರು( ಆರ್.ಶಂಕರ್ ಅನರ್ಹತೆಗೂ ಕಾಂಗ್ರೆಸ್ ದೂರು ನೀಡಿದೆ) ಸೇರಿ 107. ಒಂದು ವೇಳೆ ರಾಜ್ಯಪಾಲರ ಬಳಿ ತೆರಳಿ ಸರ್ಕಾರ ರಚನೆಗೆ ಅವಕಾಶ ಕೇಳಿದರೂ ಬಿಜೆಪಿ 113 ಶಾಸಕರ ಬಲ ತೋರಿಸಬೇಕಾಗುತ್ತದೆ.
ಏತನ್ಮಧ್ಯೆ ಜುಲೈ 31ರೊಳಗೆ ಧನವಿನಿಯೋಗ ವಿಧೇಯಕ ವಿಧಾನಸಭೆಯಲ್ಲಿ ಮಂಡನೆಯಾಗಲೇಬೇಕಾಗಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದು, ಒಂದು ವೇಳೆ ಧನವಿನಿಯೋಗ ವಿಧೇಯಕ ಮಂಡನೆಯಾಗದಿದ್ದಲ್ಲಿ, ಸರ್ಕಾರಿ ನೌಕರರಿಗೆ ಸಂಬಳ ಕೊಡಲಿಕ್ಕೂ ಆಗವುದಿಲ್ಲ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ ಕಾರಣವಾಗಲಿದೆ. ರಾಜ್ಯದಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ಸಾಂವಿಧಾನಿಕ ಬಿಕ್ಕಟ್ಟು ಎದುರಾಗಿದೆ ಎಂದು ತಿಳಿಸಿದ್ದಾರೆ.
ಜುಲೈ 31ರೊಳಗೆ ಬಿಜೆಪಿ ಸರ್ಕಾರ ರಚನೆಯಾಗಿ ಧನವಿನಿಯೋಗ ವಿಧೇಯಕವನ್ನು ಮಂಡನೆ ಮಾಡಬೇಕಾದ ತುರ್ತು ಅಗತ್ಯ ಬಂದೊದಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ನಡೆ ಮೇಲೆ ಹೆಚ್ಚಿನ ಕುತೂಹಲ ಮೂಡಿದೆ. ಸರ್ಕಾರ ರಚನೆಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡುತ್ತಾ? ಸ್ಪೀಕರ್ ತೀರ್ಮಾನದ ನಂತರ ಸರ್ಕಾರ ರಚನೆಯಾಗುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KPS ಹೆಚ್ಚುವರಿ ಎಲ್‌ಕೆಜಿ, 1ನೇ ತರಗತಿ ತೆರೆಯಲು ಅವಕಾಶ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.