ಗಿಳಿವಿಂಡಿಗೆ ಹೋಗಿಬಂದೆವು !

Team Udayavani, Jul 26, 2019, 5:06 AM IST

aa

ಕನ್ನಡ ಸಾಹಿತಿಗಳ ಮನೆ ಸಂದರ್ಶಿಸುವುದೆಂದರೆ ನಮಗೆಲ್ಲ ಎಲ್ಲಿಲ್ಲದ ಉತ್ಸಾಹ. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳನ್ನು ಅರಿಯದವರಿದ್ದಾರೆಯೇ? ಸಾಹಿತ್ಯದಲ್ಲಿ ಇಂದಿಗೂ ಭದ್ರವಾಗಿ ನೆಲೆಯೂರಿ ಕನ್ನಡಿಗರ ಮನದಲ್ಲಿ ಇಂದಿಗೂ ಹಚ್ಚಹಸುರಾಗಿರುವ ಹೆಸರು ಪೈಗಳದ್ದು. ಮಂಜೇಶ್ವರದಲ್ಲಿರುವ ಪೈಗಳ ಮನೆ ಸಂದರ್ಶಿಸಬೇಕೆಂದು ತೀರ್ಮಾನಿಸಿ ತಿಂಗಳುಗಳೇ ಕಳೆದಿದ್ದುವು. ಆದರೆ, ಹಲವು ಕಾರಣಗಳಿಂದ ಸಂದರ್ಶನಕ್ಕೆ ತೊಡಕುಂಟಾಗುತ್ತಿತ್ತು.ಕೊನೆಗೊಂದು ದಿನ ಎಲ್ಲಾ ಕಾರ್ಯಗಳನ್ನು ಬದಿಗಿಟ್ಟು ಮಂಜೇಶ್ವರಕ್ಕೆ ಹೋಗಿಯೇ ಬರಬೇಕೆಂದು ದಿನ ನಿಗದಿಪಡಿಸಿದೆವು. ನಿಗದಿಪಡಿಸಿದ ದಿನದಂದು ಎಲ್ಲ ರೂ ಮಂಜೇಶ್ವರದಲ್ಲಿ ಜೊತೆಯಾದೆವು. ಸ್ವತಃ ಕಾಸರಗೋಡಿನವಳಾದರೂ ಇದುವರೆಗೆ ಪೈಗಳ ಮನೆ ಸಂದರ್ಶಿಸುವ ಭಾಗ್ಯ ನನಗೊದಗಿ ಬಂದಿರಲಿಲ್ಲ. ಆದ್ದರಿಂದ ಪೈಗಳ ಮನೆಯೂ ತಿಳಿದಿರಲಿಲ್ಲ. ಮನೆ ಹುಡುಕಲು ಹೆಚ್ಚು ಕಷ್ಟಪಡಬೇಕಾಗಿಯೂ ಬರಲಿಲ್ಲ ಬಿಡಿ. ಆಟೋರಿಕ್ಷಾದ ಮೊರೆಹೊಕ್ಕು ಪೈಗಳ ಮನೆ ತಲುಪಿಯೇ ಬಿಟ್ಟೆವು. ಆಟೋದಿಂದ ಇಳಿದ ನಮಗೆ ಅಚ್ಚರಿ ಕಾದಿತ್ತು. ಪೈಗಳ ಮನೆಯು ಭವ್ಯವಾಗಿ ಕಂಗೊಳಿಸುತ್ತಿತ್ತು. ಮನೆಯೊಳಗೆ ಪ್ರವೇಶಿಸುವ ತವಕ ಎಲ್ಲರಲ್ಲೂ ಎದ್ದು ನಿಂತಿತ್ತು.

ಮನೆಯ ಮುಂಭಾಗದ ಛಾವಣಿಯಲ್ಲಿ ಪೈಗಳ ಭವ್ಯವಾದ ಮೂರ್ತಿ ಕಣ್ಮನ ಸೂರೆಗೊಳಿಸಿತು. ಒಳಹೋದವರೇ ಅಲ್ಲಿದ್ದವರಲ್ಲಿ ನಮ್ಮ ಪರಿಚಯ ಹೇಳಿಕೊಂಡೆವು. ಮನೆಯೊಳಗೆ ಹೊಕ್ಕಾಗ ಹಲವಾರು ಹೊತ್ತಗೆಗಳನ್ನು ಹೊತ್ತ ಕಪಾಟುಗಳಿದ್ದುವು. ಅದರಲ್ಲಿ ಮಲಯಾಳ, ಕನ್ನಡ ಹೀಗೆ ಬಗೆಬಗೆಯ ಪುಸ್ತಕಗಳಿದ್ದುವು. ಮತ್ತೂ ಒಳಹೊಕ್ಕಾಗ ಅಂದವಾದ ಕಲಾಕೃತಿಗಳನ್ನು ಹೊಂದಿದ ಬಾಗಿಲೊಂದರ ಮೇಲೆ “ಯಕ್ಷದೇಗುಲ’ ಎಂದು ಬರೆದಿತ್ತು.ಎಲ್ಲರ ಮನದಲ್ಲೂ ಒಂದೇ ಪ್ರಶ್ನೆ, “ಇದರೊಳಗೇನಿರಬಹುದು?’ ಎಂದು. ಕೊನೆಗೂ ಬಾಗಿಲು ತೆರೆದು ಒಳಹೊಕ್ಕ ನಮಗೆ ವಿಸ್ಮಯ ಕಾದಿತ್ತು. ಹಲವು ತರದ ಯಕ್ಷಗಾನ ವೇಷಗಳು, ಮುಖವರ್ಣಿಕೆಯ ಮಾದರಿಗಳು, ಯಕ್ಷಗಾನದಲ್ಲಿ ಉಪಯೋಗಿಸುವ ಆಯುಧಗಳು, ಆಭರಣಗಳ ಆಗರ. ಈ ಕೋಣೆಯೊಳಗಿನ ಸೌಂದರ್ಯ ನಮ್ಮ ಮನಸ್ಸಿಗೂ ಕಣ್ಣಿಗೂ ಹಬ್ಬವನ್ನುಂಟುಮಾಡಿ ನಮ್ಮನ್ನು ಹೊರಬರದಂತೆ ಅಲ್ಲೇ ಬಂಧಿಸಿತು.

-ತೇಜಶ್ರೀ ಶೆಟ್ಟಿ
ತೃತೀಯ ಪತ್ರಿಕೋದ್ಯಮ
ಮಂಗಳೂರು ವಿ. ವಿ.

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.