ದೊಡ್ಡಣ್ಣನ ನಾಡಿನಲ್ಲಿ ಪಟ್ಲ ಯಕ್ಷಯಾನ
Team Udayavani, Jul 26, 2019, 5:00 AM IST
ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಅಮೇರಿಕಾ ಘಟಕದ ಆರಂಭೋತ್ಸವ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗಿ ಯಕ್ಷಗಾನ ಕಲಾವಿದರು ಸೇರಿದಂತೆ ಸುಮಾರು 36 ಮಂದಿ ಫೌಂಡೇಶನ್‌ನ ಸದಸ್ಯರು ಮತ್ತು ಹಿತೈಷಿಗಳು ಅಮೆರಿಕ ಯಾತ್ರೆ ಕೈಗೊಂಡರು. ಇದಕ್ಕೆ ಮೂಲ ಕಾರಣರಾದವರು ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಭಾಗವತ ಪಟ್ಲ ಸತೀಶ್ ಶೆಟ್ಟಿ ಮತ್ತು ಅಮೆರಿಕದ ನ್ಯೂಜೆರ್ಸಿಯಲ್ಲಿರುವ ಪುತ್ತಿಗೆ ಮಠ ಶ್ರೀ ಕೃಷ್ಣ ವೃಂದಾವನದ ಕಾರ್ಯನಿರ್ವಹಣಾಧಿಕಾರಿ ವಿ|ಯೋಗೇಂದ್ರ ಭಟ್ಟ ಉಳಿ.
ನ್ಯೂಜೆರ್ಸಿಯಲ್ಲಿ ಪುತ್ತಿಗೆ ಶ್ರೀಗಳು ಸ್ಥಾಪಿಸಿದ ಶ್ರೀಕೃಷ್ಣ ವೃಂದಾವನ ದೇಗುಲದ ಸಭಾಂಗಣದಲ್ಲಿ ಜುಲೈ 20ರಂದು ಪಟ್ಲ ಸತೀಶ್ ಶೆಟ್ಟರ ನೇತೃತ್ವದಲ್ಲಿ ಶ್ರೀಕೃಷ್ಣ ಲೀಲೆ-ಕಂಸವಧೆ ಯಕ್ಷಗಾನ ಪ್ರದರ್ಶನ ಜರಗಿತು.ಮರುದಿನ ಕರಾವಳಿಯ ಯಕ್ಷಗಾನ ಇತಿಹಾಸದಲ್ಲೊಂದು ಮಹತ್ವದ ಘಟನೆಯೆಂಬಂತೆ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ 34ನೇ ಘಟಕ ಅಮೆರಿಕದಲ್ಲಿ ಉದಿಸಿತು. ಇದರಂಗವಾಗಿ ಶ್ರೀನಿವಾಸ ಕಲ್ಯಾಣ ಯಕ್ಷಗಾನವನ್ನು ಪ್ರದರ್ಶಿಸಲಾಯಿತು. ಈ ಸಂದರ್ಭ ನಾವೂ ಯಕ್ಷಗಾನ ವೇಷಧಾರಿಗಳಾಗಿ ರಂಗಸ್ಥಳವೇರಿದ್ದು ಒಂದು ವಿಶೇಷ ಅನುಭವ. ಈ ಲೇಖಕನೂ ಸೇರಿದಂತೆ ಪ್ರೊ| ಎಂ.ಎಲ್. ಸಾಮಗ, ಕದ್ರಿ ನವನೀತ ಶೆಟ್ಟಿ, ಅಜಿತ್‌ಕುಮಾರ್ ಹೆಗ್ಡೆ ಶಾನಾಡಿ, ಪೂವಪ್ಪ ಶೆಟ್ಟಿ ಅಳಿಕೆ, ಚಂದ್ರಶೇಖರ ಧರ್ಮಸ್ಥಳ, ಪ್ರಶಾಂತ ಶೆಟ್ಟಿ ನೆಲ್ಯಾಡಿ, ಮಹೇಶ್ ಮಣಿಯಾಣಿ, ಮೋಹನ ಬೆಳ್ಳಿಪ್ಪಾಡಿ, ಸುಮಂತ್ ಭಟ್ ಮತ್ತು ಕು| ಸ್ಫೂರ್ತಿ ಪೂಂಜ ಪಾತ್ರಧಾರಿಗಳಾಗಿದ್ದು ಪಟ್ಲ ಸತೀಶ್ ಶೆಟ್ಟಿ, ಪದ್ಯಾಣ ಜಯರಾಮ ಭಟ್ ಹಾಗೂ ಪದ್ಮನಾಭ ಉಪಾಧ್ಯಾಯರ ಹಿಮ್ಮೇಳ ಸಾಂಗತ್ಯ ಅನಿವಾಸಿ ಭಾರತೀಯರ ಮನಗೆದ್ದಿತು.
ಕರಾವಳಿಯ ಯಕ್ಷಗಾನ ಸೀಮೋಲ್ಲಂಘನೆ ಮಾಡಿ ದಶಕಗಳೇ ಕಳೆದರೂ, ಅಮೆರಿಕದಂತಹ ಪ್ರಮುಖ ರಾಷ್ಟ್ರದಲ್ಲಿ ಪಟ್ಲ ಫೌಂಡೇಶನ್ ತನ್ನ ಶಾಖೆ ತೆರೆದುದು ಒಂದು ಮಹತ್ವದ ಘಟನೆ ಎನ್ನಬಹುದೇನೊ. ಈ ಯಕ್ಷಯಾನದಲ್ಲಿ ಕಲಾವಿದರು ಮಾತ್ರವಲ್ಲದೆ ಬಹು ಸಂಖ್ಯೆಯ ಅಭಿಮಾನಿಗಳೂ ಪಾಲ್ಗೊಂಡು ಕಡಲಾಚೆ ನೆಲಸಿರುವ ತುಳು-ಕನ್ನಡಿಗರ ಯಕ್ಷಗಾನ ಪ್ರೀತಿಗೆ ಸಾಕ್ಷಿಯಾದುದು ಕೂಡ ಅಷ್ಟೇ ಮಹತ್ವಪೂರ್ಣವಾದುದು.
ಭಾಸ್ಕರ ರೈ ಕುಕ್ಕುವಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.