ಗೃಹಿಣಿ ಪಠಿಸುವ ಸ್ತೋತ್ರ ಮತ್ತು ನಳನಳಿಸುವ ತೋಟ


Team Udayavani, Jul 26, 2019, 5:00 AM IST

gk4-(2)1

ಸಸ್ಯಗಳಿಗೂ ಜೀವವಿದೆ, ಅದು ಸಂವಹನ ನಡೆಸುತ್ತದೆ. ಸಂಗೀತ, ಮಂತ್ರಗಳ ಧ್ವನಿಗೆ ಗಿಡಮರಗಳಲ್ಲಿ ಪರಿವರ್ತನೆ ಕಂಡುಬರುತ್ತದೆ ಎಂದು ವಿಜ್ಞಾನಿ ಡಾ| ಜಗದೀಶಚಂದ್ರ ಬೋಸ್‌ ಬಹಳ ಹಿಂದೆ ಹೇಳಿದ್ದರು. ಇದನ್ನು ಶಾಸ್ತ್ರಗಳೂ ಸಾರುತ್ತವೆ. ಶ್ರವಣೇಂದ್ರಿಯಗಳ ಮೇಲೆ ಪರಿಣಾಮ ಬೀರುವ ಸಂಗೀತ ಧ್ವನಿ ಗಿಡಮರಗಳ ಬೆಳವಣಿಗೆ, ಫ‌ಲಗಳ ಇಳುವರಿ ಮೇಲೆ ಪರಿಣಾಮ ಬೀರುತ್ತವೆ ಎನ್ನುವುದನ್ನು ಅನೇಕ ವಿಜ್ಞಾನಿಗಳು ಸಂಶೋಧನೆಯಿಂದ ಶ್ರುತಪಡಿಸಿದ್ದಾರೆ. ಲಘು ಭಾರತೀಯ ಸಂಗೀತ ಮತ್ತು ಧ್ಯಾನ ಆಧಾರಿತ ಸಂಗೀತವು ಸಸ್ಯಾಭಿವೃದ್ಧಿ ಗೆ ಕಾರಣವಾಗುತ್ತದೆ ಎಂಬುದನ್ನು ಗುರ್ಗಾಂವ್‌ ಜಿ.ಡಿ. ಗೋಯೆಂಕಾ ವಿ. ವಿ. ಸ್ಕೂಲ್‌ ಆಫ್ ಇಂಜಿನಿಯರಿಂಗ್‌ನ ಬೇಸಿಕ್‌ ಆ್ಯಂಡ್‌ ಅಪ್ಲೆ„ಡ್‌ ಸೈನ್ಸಸ್‌ ವಿಭಾಗದ ಅನಿಂದಿತಾ ರಾಯ್‌ ಚೌಧುರಿ ಮತ್ತು ಅಂಶು ಗುಪ್ತಾ ಮಹಾಪ್ರಬಂಧವನ್ನೇ ಮಂಡಿಸಿದ್ದಾರೆ.

ಗಿಡಗಳ ಮೇಲೆ ಸಂಗೀತ ಪ್ರಯೋಗ
ಮೆರಿಗೋಲ್ಡ್‌ನ ಬೆಳವಣಿಗೆ, ಕಡಲೆ ಬೀಜದ ಮೊಳಕೆಯಲ್ಲಿ ಚೌಧುರಿ, ಗುಪ್ತಾ ಪ್ರಯೋಗ ನಡೆಸಿದ್ದಾರೆ. ಕಾಂಡ, ಎಲೆ, ಗಾತ್ರದಲ್ಲಿ ಬೆಳವಣಿಗೆ, ದ್ಯುತಿಸಂಶ್ಲೇಷಣೆ ಕ್ರಿಯೆ, ಪ್ರೊಟೀನ್‌, ವಿಟಮಿನ್‌ಗಳ ಹೆಚ್ಚಳ ಕಂಡುಬಂದಿರುವುದನ್ನು ಬೆಟ್ಟು ಮಾಡುತ್ತಾರೆ. ಸಂಗೀತ, ಮಂತ್ರಗಳನ್ನು ಕೇಳಿಸಿದ ಮತ್ತು ಕೇಳಸದ ಗಿಡಗಳ ಬೆಳವಣಿಗೆ, ಇಳುವರಿಯಲ್ಲಿಯಾದ ವ್ಯತ್ಯಾಸವನ್ನು ದಾಖಲಿಸಿದ್ದಾರೆ.

ಗಿಡಗಳ ಎಲೆ, ಕಾಂಡಗಳಿಗೆ ಇಲೆಕ್ಟ್ರೋಡ್‌ ಕೊಟ್ಟು ಅವು ಹೆದರುತ್ತವೋ? ಖುಷಿಪಡುತ್ತವೋ? ಆರೋಗ್ಯದಿಂದ ಇರುತ್ತವೋ ಹೀಗೆ ಪರೀಕ್ಷಿಸುವ ಪ್ರಕ್ರಿಯೆ ನಡೆಯುತ್ತಿದೆ. ಗಿಡ-ಮನುಷ್ಯರ ಮೇಲೆ ಸಂಗೀತ ತೆರಪಿ ಪ್ರಯೋಗ ಎಲ್ಲೆಡೆ ನಡೆಯುತ್ತಿದೆ. ಆದರೆ ಒಂದು ನಿರ್ದಿಷ್ಟ ಹಾಡಿನಿಂದ ಒಂದು ನಿರ್ದಿಷ್ಟ ಕಾಯಿಲೆ ಗುಣವಾಗಿದೆ ಎಂಬ ಬಗ್ಗೆ ಖಚಿತವಾಗಿ ಹೇಳುವ ಸ್ಥಿತಿಗೆ ಇನ್ನೂ ಬಂದಿಲ್ಲ. ಈಗ ಈ ತೆರಪಿ ಬಾಲ್ಯಾವಸ್ಥೆಯಿಂದ ಕೌಮಾರ್ಯಾವಸ್ಥೆಯಲ್ಲಿದೆ ಎಂದು ಹೇಳಬಹುದು. ಒಂದು ವೇಳೆ ಇದು ವೈಜ್ಞಾನಿಕವಾಗಿ ಜಾರಿಗೊಂಡರೆ ದೊಡ್ಡ ಪ್ರಮಾಣದ ಪ್ರಯೋಜನ ಸಮಾಜಕ್ಕೆ ಸಿಗುತ್ತದೆ ಎಂಬ ಅಭಿಪ್ರಾಯವನ್ನು ಸಸ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ, ಸಂಗೀತಜ್ಞ ಪ್ರೊ| ಅರವಿಂದ ಹೆಬ್ಟಾರ್‌ ವ್ಯಕ್ತಪಡಿಸುತ್ತಾರೆ.

ಗಿಡಗಳ ಮೇಲೆ ಶಾಸ್ತ್ರ ಪ್ರಯೋಗ
ಮಧ್ವವಿಜಯ ಗ್ರಂಥದಲ್ಲಿ ಮಧ್ವಾಚಾರ್ಯರು ಗೋವಾ ಪ್ರದೇಶದಲ್ಲಿ ಸಂಚಾರದಲ್ಲಿರುವಾಗ ಸ್ವತಃ ಸಂಗೀತ ಹೇಳಿ ಒಣಗಿದ ಕಾಂಡದಿಂದ ಚಿಗುರು ಬರಿಸಿದ್ದು, ವೇದ-ಮಂತ್ರಗಳನ್ನು ಪಠಿಸಿ ಬೀಜದಲ್ಲಿ ಮೊಳಕೆ ತರಿಸಿದ ಉದಾಹರಣೆ ಇರುವುದನ್ನು ಉಡುಪಿಯ ವಿದ್ವಾಂಸ ಸಗ್ರಿ ರಾಘವೇಂದ್ರ ಉಪಾಧ್ಯಾಯ ಬೆಟ್ಟು ಮಾಡುತ್ತಾರೆ. ವಿಜ್ಞಾನಿಗಳು ಇಂತಹ ಅನೇಕ ಪ್ರಬಂಧಗಳನ್ನು ಮಂಡಿಸಿರುವುದು ಸಿಗುತ್ತವೆ. ಸ್ವಾಮೀಜಿಯವರು, ವಿದ್ವಾಂಸರು ಉಪನ್ಯಾಸಗಳಲ್ಲಿ ಇದನ್ನು ಹೇಳುವುದೂ ಇದೆ. ಆದರೆ, ಇದರ ಪ್ರಯೋಗವನ್ನು ನಿಜಜೀವನದಲ್ಲಿ ಎಷ್ಟು ಜನರು ಮಾಡುತ್ತಿದ್ದಾರೆ?

ತೆಂಗಿನ ಮರಗಳಿಗೆ ರೋಗ
ತೆಂಗಿನ ಮರಗಳಿಗೆ ಸುಳಿಪಳೆ ರೋಗ ಬರುವುದಿದೆ. ಇದು ಬಂತೆಂದರೆ ಸುಳಿಗಳೆಲ್ಲ ಕೊಳೆತು ಅದರ ರುಂಡ ಒಂದು ದಿನ ಉರುಳಿ ಧರೆಗೆ ಉರುಳುತ್ತದೆ. ಇಂತಹ ತಲೆ ಬೋಳಾದ ಅನೇಕ ಮರಗಳನ್ನು ನಾವು ನೋಡುತ್ತಲೇ ಇದ್ದೇವೆ. ರೈನೋಸರಸ್‌ ಎಂಬ ದುಂಬಿ ಮೊದಲು ಮರದ ತುದಿಯ ಗರಿಯ ಮೃದುವಾದ ಕುಡಿಯನ್ನು ಮೊದಲು ತಿನ್ನುತ್ತದೆ. ಅನಂತರದ ಸರದಿ ಕೆಂಪು ಮೂತಿ ಹುಳದ್ದು. ಇವೆರಡರ ಮಲ, ತಿಂದ ತ್ಯಾಜ್ಯ ಅಲ್ಲಿ ಸಂಗ್ರಹವಾಗುತ್ತದೆ. ಇದರ ಮೇಲೆ ಮಳೆ ನೀರು ಬಿದ್ದಾಗ ಮತ್ತಷ್ಟು ಕೊಳೆತು ಫ‌ಂಗಲ್‌ ಸೋಂಕು ತಗುಲುತ್ತದೆ. ಇದೇ ಸ್ಥಳದಲ್ಲಿ ಇವೆರಡರ ಸಂತಾನವೂ ಬೆಳೆಯುತ್ತದೆ. ಇದಕ್ಕೆ ಬೋಡೋì ಅಥವಾ ಬೇರಾವುದೇ ರಾಸಾಯನಿಕ ಪ್ರಯೋಗವನ್ನು ಮಾಡಿ ಎಂದು ತೋಟಗಾರಿಕಾ ಅಧಿಕಾರಿಗಳು ಸಲಹೆ ನೀಡುತ್ತಾರೆ.

ದುಂಬಿ, ಕೆಂಪು ಮೂತಿ ಹುಳವನ್ನು ನಿರ್ಮೂಲನ ಮಾಡಲು ಬೋಡೋì ಅಥವಾ ವಿಷಭರಿತ ಇತರ ರಾಸಾಯನಿಕಗಳನ್ನು ವಿಜ್ಞಾನಿಗಳು ಕಂಡುಹಿಡಿದು, ಅದು ಸರಕಾರಿ ಇಲಾಖೆಗಳ ಮೂಲಕ ಜಾರಿಗೊಳ್ಳುತ್ತವೆ. ಇಂತಹ ಅನೇಕ ಪ್ರಯೋಗಗಳು ನಮ್ಮಲ್ಲಿದ್ದು ಈ ಮೂಲಕ ಬಂದ ಇಳುವರಿ ಮನುಷ್ಯರ ಆರೋಗ್ಯದ ಮೇಲೆ ಎಂತಹ ಪರಿಣಾಮ ಬೀರಬಲ್ಲದು? ಉದಾಹರಣೆಗೆ ಎಂಡೋಸಲ್ಫಾನ್‌ ಅವಾಂತರವನ್ನು ಉಲ್ಲೇಖೀಸಬಹುದು.

ಸಸ್ಯೋಪಚಾರದಲ್ಲಿ ಗೃಹಿಣಿ
ಉಡುಪಿ ಕಲ್ಸಂಕ ಬಳಿಯ ಭಾರತ್‌ ಪ್ರಸ್‌ನ ತೋನ್ಸೆ ಗಣೇಶ್‌ ಪೈಯವರ ತಾಯಿ ನಳಿನಿ ದೇವದಾಸ ಪೈಯವರಿಗೆ ಗಿಡಮರಗಳೆಂದರೆ ಅತ್ಯಂತ ಪ್ರೀತಿ. ಅವರ ಮನೆಯಲ್ಲಿ 13 ತೆಂಗಿನ ಮರಗಳಿವೆ. ಮೊದಲು ತೆಂಗಿನ ಸಸಿಗಳನ್ನು ಹಾಕಿ ಬೆಳೆಸಿದ ಬಳಿಕ ಮನೆ ವಿಸ್ತರಣೆ ಮಾಡುವಾಗ ಅದು ತಡೆಯಾಗಿ ಕಾಣುವುದು ಸಹಜ ಮತ್ತು ಅಂತಹ ಸಂದರ್ಭ ಅವುಗಳು ಇದುವರೆಗೆ ಇಳುವರಿ ಮೂಲಕ ಕೊಟ್ಟ ಉಪಕಾರವನ್ನು ಸ್ವಲ್ಪವೂ ಗಣಿಸದೆ, ಅವುಗಳ ಮೇಲೆ ಏನೂ ಕೃತಜ್ಞತೆ ತೋರಿಸದೆ ನಿರ್ದಾಕ್ಷಿಣ್ಯವಾಗಿ ಕಡಿದು ಬಿಸಾಡುವುದೂ ಸಾಮಾನ್ಯ. ಗಣೇಶ್‌ ಪೈಯವರ ಮನೆಯೊಳಗೆ ಕಾರು ತಂದು ಸಲೀಸಾಗಿ ನಿಲ್ಲಿಸಬೇಕಾದರೆ ಒಂದು ತೆಂಗಿನ ಮರವನ್ನು ಕಡಿಯಬೇಕಿತ್ತು. ನಳಿನಿ ಪೈಯವರು ಮರ ಕಡಿಯಲು ಒಪ್ಪಲೇ ಇಲ್ಲ. ಅವರು ನಿಧನರಾಗಿ ಮೂರು ವರ್ಷ ಕಳೆದಿವೆ. ಈಗಲೂ ಆ ಮರವನ್ನು ಕಡಿಯಲಿಲ್ಲ. ನಳಿನಿ ಪೈಯವರಿಗೆ ಭಕ್ತಿ ಸಾಹಿತ್ಯದ ಮೇಲೆ ಅಪಾರ ಆದರವಿತ್ತು. ನೂರಾರು ಪುಸ್ತಕಗಳನ್ನು ಓದುತ್ತಿದ್ದರು. ಒಂದೆಡೆ ಭಕ್ತಿ ಸಾಹಿತ್ಯಗಳ ಪಠನವಾದರೆ, ಇನ್ನೊಂದೆಡೆ ಬಹು ಹೊತ್ತು ತೋಟದಲ್ಲಿ ಗಿಡಗಳಿಗೆ ಉಪಚರಿಸುವುದರಲ್ಲಿಯೇ ಕಳೆಯುತ್ತಿದ್ದರು. ನ್ಯಾಚುರೋಪತಿ ತಜ್ಞ ಡಾ| ಮೊಹಮ್ಮದ್‌ ರಫೀಕ್‌ ಮತ್ತು ಯೋಗತಜ್ಞ ಮೈಸೂರಿನ ಡಾ| ರಾಘವೇಂದ್ರ ಪೈಯವರಿಂದ ಯೋಗಾಸನಗಳನ್ನು ಅಭ್ಯಾಸ ಮಾಡಿ ಮಧುಮೇಹವನ್ನು ನಿಯಂತ್ರಣದಲ್ಲಿರಿಸಿಕೊಂಡಿದ್ದರು. ನಳಿನಿ ಪೈಯವರಿಗಿದ್ದ ಆಸಕ್ತಿಯಿಂದ ನಲಿಯುತ್ತಿದ್ದ ತೋಟ ಅವರು ಮೃತಪಟ್ಟ ಬಳಿಕ ತೋಟದಲ್ಲಿದ್ದ ಸಸ್ಯಗಳು ದುರ್ಬಲವಾಗತೊಡಗಿದವು. ಇದೇ ವೇಳೆ ತೆಂಗಿನ ಮರಗಳಿಗೆ ಸುಳಿಪಳೆ ರೋಗ ಹಿಡಿದಿತ್ತು.

ತೋಟಗಳಿಗೆ ಸ್ತೋತ್ರ ಪಠನ
“ಉತ್ತರ ಭಾರತದ ಗೋಶಾಲೆಗಳಲ್ಲಿ ಗೋವುಗಳಿಗೆ ನಿತ್ಯ ಭಗವದ್ಗೀತೆಯನ್ನು ಧ್ವನಿವರ್ಧಕದ ಮೂಲಕ ಕೇಳಿಸುತ್ತಿದ್ದಾರೆ. ಒಂದೊಂದು ಗೋವುಗಳು ಆನೆಗಾತ್ರದಲ್ಲಿವೆ. ಮಂತ್ರಗಳಿಗೆ ಸಸ್ಯ ಮತ್ತು ಪ್ರಾಣಿಗಳ ಜತೆ ಸಂವಹನ ನಡೆಸುವ ಶಕ್ತಿ ಇದೆ’- ಎಂದು ಪೇಜಾವರ ಶ್ರೀಗಳ ವಿದ್ಯಾಶಿಷ್ಯರೂ, ಮಂತ್ರಾಲಯ ಮಠದ ಉತ್ತರಾಧಿಕಾರಿಗಳೂ ಆಗಿದ್ದ ಹಿರಿಯ ಪ್ರವಚನಕಾರ ಶ್ರೀ ಸುವಿದ್ಯೆàಂದ್ರತೀರ್ಥರು ಉಪನ್ಯಾಸದ ಧ್ವನಿಸುರುಳಿಯಲ್ಲಿ ಹೇಳಿದ್ದ ಮಾತು ಗಣೇಶ್‌ ಪೈಯವರಿಗೆ ಆಕರ್ಷಿಸಿತು. ಕೂಡಲೇ ವಿಷ್ಣುಸಹಸ್ರನಾಮ, ಕೃಷ್ಣಾಷ್ಟೋತ್ತರ, ವೆಂಕಟೇಶಸ್ತೋತ್ರಗಳೇ ಮೊದಲಾದ ಸ್ತೋತ್ರ ಪಾಠಗಳನ್ನು ಒಂದು ಚಿಪ್‌ನಲ್ಲಿರಿಸಿ ಸ್ನಾನಗೃಹದ ಹೊರಗೆ ತೋಟದ ಗಿಡಮರಗಳಿಗೆ ಕೇಳಿಸುವಂತೆ ಧ್ವನಿವರ್ಧಕವನ್ನು ಹಾಕಿದರು. ನಿತ್ಯ ಬೆಳಗ್ಗೆ 6 ಗಂಟೆಯಿಂದ 9 ಗಂಟೆವರೆಗೆ ಇದು ಮೊಳಗುತ್ತಿರುತ್ತದೆ.

ತೋಟಗಳ ಮೇಲೆ ಸಂಗೀತ ಪ್ರಭಾವ
ಇದೀಗ ಮೂರನೆಯ ವರ್ಷ ನಡೆಯುತ್ತಿದೆ. ನಳಿನಿ ಪೈಯವರು ನಿಧನರಾದ ಬಳಿಕ ಕೃಶಗೊಂಡ ತೋಟ ಸಸ್ಯಶ್ಯಾಮಲೆಯಾಗಿ ಕಂಗೊಳಿಸುತ್ತಿದೆ. ಸುಳಿಕೊಳೆ ರೋಗ ಬಾಧಿತವಾಗಿದ್ದ ತೆಂಗಿನ ಮರಗಳು ಆರೋಗ್ಯದಿಂದ ಇಳುವರಿ ಕೊಡುತ್ತಿವೆ. “ಈಗ ನನ್ನ ತಾಯಿ ಇರಬೇಕಿತ್ತು. ಇದನ್ನು ನೋಡಿ ಆನಂದಪಡುತ್ತಿದ್ದಳು. ಸುಶ್ರಾವ್ಯ ಮಂತ್ರಗಳನ್ನು ಗಿಡಮರಗಳಿಗೆ ಕೇಳಿಸಿದರೆ ಅವು ಆರೋಗ್ಯದಿಂದ ನಲಿಯುತ್ತವೆ ಎನ್ನುವುದು ಶೇ. 100 ಖಾತ್ರಿ’ ಎನ್ನುತ್ತಾರೆ ಗಣೇಶ್‌ ಪೈ. ಕಾಕತಾಳೀಯವೆಂದರೆ ನಳಿನಿ ಪೈಯವರು ಮನೆಯಲ್ಲಿ ನಿತ್ಯ ಪಠಿಸುತ್ತಿದ್ದ ಸ್ತೋತ್ರಗಳನ್ನು ಈಗ ತೋಟಗಳು ಕೇಳುತ್ತ ಆನಂದಪಡುವಂತೆ ಕಾಣುತ್ತಿವೆ. ನಮ್ಮ ಕೆಲಸಗಳ ಹಿಂದಿರುವ ಶಕ್ತಿ ಏನೆಂದು ಮೇಲ್ನೋಟಕ್ಕೆ ಗೋಚರವಾಗುವುದಿಲ್ಲ,

-ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!

Riots against mosque survey: Police fire tear gas at Sambhal

Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

20-uv-fusion

UV Fusion: ಜೀವಂತಿಕೆ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.