ಅಸಹಾಯಕ ವೃದ್ಧನನ್ನು ಆಸ್ಪತ್ರೆಗೆ ದಾಖಲಿಸಿದ ವಿದ್ಯಾರ್ಥಿಗಳು
Team Udayavani, Jul 26, 2019, 5:00 AM IST
ಉಪ್ಪಿನಂಗಡಿ: ಮನೆಯವರಿಂದ ದೂರವಾಗಿ, ಬಸ್ ನಿಲ್ದಾಣದಲ್ಲಿ ಮಲಗಿದ್ದ ಅನಾರೋಗ್ಯ ಪೀಡಿತ ವೃದ್ಧನನ್ನು ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಪೊಲೀಸರ ನೆರವಿನೊಂದಿಗೆ ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹಿರೇಬಂಡಾಡಿ ನಿವಾಸಿ ಕೊರಗಪ್ಪ ಪೂಜಾರಿ ಎಂಬವರು 10 ದಿನಗಳಿಂದ ನಡೆಯಲಾರದ ಸ್ಥಿತಿಯಲ್ಲಿ ಬಸ್ ನಿಲ್ದಾಣದಲ್ಲೇ ಬಿದ್ದುಕೊಂಡಿದ್ದರು. ಅಲ್ಲೇ ಮಲ-ಮೂತ್ರ ವಿಸರ್ಜಿಸಿದ್ದರಿಂದ ಬಸ್ ನಿಲ್ದಾಣವೂ ಗಲೀಜಾಗಿತ್ತು.
ಆಸ್ಪತ್ರೆಗೆ ದಾಖಲು
ವಿದ್ಯಾರ್ಥಿಗಳು ಕೊರಗಪ್ಪ ಪೂಜಾರಿ ಅವರನ್ನು ಮಾತನಾಡಿಸಿ, ಅವರಿಂದ ಮಾಹಿತಿ ಪಡೆದು ಪತ್ನಿ ಹಾಗೂ ಐವರು ಮಕ್ಕಳನ್ನು ಸಂಪರ್ಕಿಸಿದರೂ ಅವರು ಬರಲು ನಿರಾಕರಿಸಿದ್ದಾರೆ. ಹೀಗಾಗಿ, ವಿದ್ಯಾರ್ಥಿಗಳೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಸಹಕಾರ
ವಿದ್ಯಾರ್ಥಿಗಳಾದ ಅಶ್ವಿನಿ, ಚೈತ್ರಾ, ಬೀನಾ, ದಾಮೋದರ, ತೇಜಸ್ವಿ, ನವ್ಯಾ, ಅಶ್ವಿತಾ, ಸುಶ್ಮಿತಾ, ದೀಕ್ಷಾ ಹಾಗೂ ಶಂಕರ್ ಅವರು ಕೊರಗಪ್ಪ ಪೂಜಾರಿ ಅವರನ್ನು ಉಪಚರಿಸಿ, 108 ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಉಪ್ಪಿನಂಗಡಿ ಠಾಣೆಯ ಸಿಬಂದಿ ಮಧು ವಿದ್ಯಾರ್ಥಿಗಳಿಗೆ ಸಹಕಾರ ನೀಡಿದರು.
ಮತ್ತೋರ್ವ ವೃದ್ಧ
ಉದನೆಯ ನಿವಾಸಿ ಕೃಷ್ಣ ಅವರೂ ಬಸ್ ನಿಲ್ದಾಣದಲ್ಲಿ ಮಲಗಿದ ಸ್ಥಿತಿಯಲ್ಲಿದ್ದರು. ಅವರನ್ನೂ ಮನೆಗೆ ಸೇರಿಸಿಕೊಳ್ಳಲು ಪತ್ನಿ ಹಾಗೂ ಇಬ್ಬರು ಮಕ್ಕಳು ಸಮ್ಮತಿಸಿಲ್ಲ. ಆದರೆ, ಕೃಷ್ಣ ಅವರು, ತಾವು ಇಲ್ಲೇ ಇರುವುದಾಗಿ ಹಠ ಹಿಡಿದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.