ಉತ್ತರಾದ್ಯಂತ ಮಳೆಯ ಆರ್ಭಟ
ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್ಪುರ್ ಜಿಲ್ಲೆಯ ಬಲೂರ್ಘಾಟ್ ನಲ್ಲಿ ಪ್ರವಾಹಕ್ಕೆ ಜಲಾವೃತಗೊಂಡ ಶೆಡ್ ಗಳು.
ಶ್ರೀನಗರದಲ್ಲಿ ಮಳೆ ನೀರಿನಲ್ಲೇ ಸಾಗುತ್ತಿರುವ ವಾಹನಗಳು.
ಅಸ್ಸಾಂನ ಬಾರ್ಪೆಟಾದಲ್ಲಿರುವ ಆಸ್ಪತ್ರೆಯೊಳಗೆ ಪ್ರವಾಹದ ನೀರು ತುಂಬಿದ್ದು ,ಆಸ್ಪತ್ರೆಯ ದಾದಿಯೊಬ್ಬರು ದಂತ ಚಿಕಿತ್ಸೆಯ ಉಪಕರಣಗಳನ್ನು ಶುಚಿಗೊಳಿಸುತ್ತಿರುವುದು
ಈಶಾನ್ಯ ಹಾಗೂ ಉತ್ತರ ಭಾರತದಲ್ಲಿ ಭಾರಿ ಮಳೆಯಾಗುತ್ತಿದ್ದು, ಅಸ್ಸಾಂನ ಬಾರ್ಪೆಟಾ ಗ್ರಾಮಗಳು ಬಹುತೇಕ ಜಲಾವೃತಗೊಂಡಿದೆ.
ಭೀಕರ ಮಳೆಯಿಂದ ಅಸ್ಸಾಂನ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿರುವುದು.
ಮುಜಾಫರ್ಪುರದ ಸದರ್ ಆಸ್ಪತ್ರೆಯ ರೋಗಿಯ ವಾರ್ಡ್ಗೂ ಪ್ರವೇಶಿಸಿದ ಪ್ರವಾಹದ ನೀರು .
ಶ್ರೀನಗರದ ದಾಲ್ ಸರೋವರದಲ್ಲಿ ಮಳೆಯ ನಡುವೆಯೂ ತನ್ನ ದೈನಂದಿನ ಕಾಯಕದಲ್ಲಿ ತೊಡಗಿರುವ ನಾವಿಕ.
ಮುಜಾಫರ್ಪುರದಲ್ಲಿ ನಿರಂತರ ಮಳೆಯಿಂದಾಗಿ ಪ್ರವಾಹದ ನೀರು ರೈಲ್ವೆ ಹಳಿಗಳಲ್ಲಿ ತುಂಬಿರುವುದು.
ಅಸ್ಸಾಂನ ಬಾರ್ಪೆಟಾದಲ್ಲಿರುವ ಆಸ್ಪತ್ರೆಯೊಳಗೆ ಪ್ರವಾಹದ ನೀರು ತುಂಬಿದ್ದು ,ಆಸ್ಪತ್ರೆಯ ಕಾಗದ ಪತ್ರಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಿರುವ ಸಿಬ್ಬಂದಿಗಳು.
ಶ್ರೀನಗರದಲ್ಲಿ ಮಳೆ ನೀರಿನಲ್ಲೇ ಸಾಗುತ್ತಿರುವ ವಾಹನಗಳು